OnePlus Buds Pro 2 ಇಯರ್‌ಬಡ್ಸ್‌ ಇಂದು ಸೇಲ್‌ ! ಹೇಗಿದೆ ಜನರ ರಿಯಾಕ್ಷನ್‌? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಭಾರತದಲ್ಲಿ ಈಗಾಗಲೇ OnePlus 11 5G ಸ್ಮಾರ್ಟ್‌ಫೋನ್ ಬಿಡುಗಡೆ ಆಗಿದ್ದು, ಈ ಸ್ಮಾರ್ಟ್‌ಫೋನ್ ಜೊತೆಗೆ, ಬ್ರ್ಯಾಂಡ್ ಒನ್‌ಪ್ಲಸ್ ಬಡ್ಸ್ ಪ್ರೊ 2 ಮತ್ತು ಇತರ ಉತ್ಪನ್ನಗಳನ್ನು ಸಹ ಪ್ರಾರಂಭಿಸುತ್ತಿದೆ. OnePlus ಇಂಡಿಯಾದ ಅಧಿಕೃತ ಸೈಟ್, Amazon India, Flipkart, Myntra, OnePlus ಸ್ಟೋರ್ ಮತ್ತು ಇತರ ಆಯ್ದ ಪಾಲುದಾರ ಅಂಗಡಿಗಳಲ್ಲಿ OnePlus Buds Pro 2 ಇಯರ್‌ಬಡ್ಸ್ ಸಾಧನವನ್ನು ಇಂದು ಮಧ್ಯಾಹ್ನ 12PM ಗಂಟೆಯಿಂದ ಮೊದಲ ಬಾರಿಗೆ ಮಾರಾಟಕ್ಕೆ ತರಲಾಗುತ್ತಿದೆ ಎಂದು OnePlus ಕಂಪೆನಿ ತಿಳಿಸಿದೆ.

ದೇಶದಲ್ಲಿ 11,999 ರೂ. ಬೆಲೆ ಹೊಂದಿರುವ ನೂತನ OnePlus Buds Pro 2 ಇಯರ್‌ಬಡ್ಸ್ ಸಾಧನದ ಖರೀದಿಯ ಮೇಲೆ ICICI ಬ್ಯಾಂಕ್ ಗ್ರಾಹಕರಿಗೆ 500 ರೂ.ಗಳ ರಿಯಾಯಿತಿಯನ್ನು ( ಕ್ರೆಡಿಟ್ ಕಾರ್ಡ್ ಮೇಲೆ EMI ಮತ್ತು EMI ಅಲ್ಲದ ಎರಡೂ ಆಯ್ಕೆ ಹಾಗೂ ಡೆಬಿಟ್ ಕಾರ್ಡ್ ಮೇಲೆ EMI ಆಯ್ಕೆ ಮಾತ್ರ) ಒದಗಿಸಲಾಗಿದೆ.

ಈಗಾಗಲೇ OnePlus ಆಯೋಜಿಸಿದ್ದ OnePlus Cloud 11 ಬಿಡುಗಡೆ ಸಮಾರಂಭದಲ್ಲಿ ಹಲವು OnePlus ಉತ್ಪನ್ನಗಳ ಜೊತೆಗೆ ಬಹುನಿರೀಕ್ಷಿತ OnePlus Buds Pro 2 ಇಯರ್‌ಬಡ್ಸ್ ಸಾಧನ ಕೂಡ ಬಿಡುಗಡೆ ಆಗಿದ್ದು ಆಡಿಯೋ ಮಾರುಕಟ್ಟೆಯಲ್ಲಿ ಯಶಸ್ಸನ್ನು ಪಡೆಯುವ ಸಲುವಾಗಿ OnePlus ಕಂಪೆನಿ ನೂತನ OnePlus Buds Pro 2 ಇಯರ್‌ಬಡ್ಸ್ ಪರಿಚಯಿಸಿದೆ.

OnePlus Buds Pro 2 ಇಯರ್‌ಬಡ್ಸ್ ಸಾಧನದ ವೈಶಿಷ್ಟ್ಯಗಳು:

• ನೂತನ OnePlus Buds Pro 2 ಇಯರ್‌ಬಡ್ಸ್ ಸಾಧನವು ನೀರು ಮತ್ತು ಧೂಳು ನಿರೋಧಕ IP55 ರೇಟಿಂಗ್‌ನೊಂದಿಗೆ ಪ್ರೀಮಿಯಂ ಇನ್‌ ಇಯರ್ ವಿನ್ಯಾಸ ಮತ್ತು ಕೇಸ್‌ನೊಂದಿಗೆ ಬಿಡುಗಡೆಯಾಗಿದೆ.
• ಇದರಲ್ಲಿರುವ ಇಯರ್‌ಬಡ್‌ಗಳು 11 mm ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿದ್ದು, 6 mm ಪ್ಲ್ಯಾನರ್ ಡಯಾಫ್ರಾಮ್‌ನೊಂದಿಗೆ ಪ್ಯಾಕ್‌ ಆಗಿವೆ.
• ಈ ಟ್ರೂ ವೈರ್‌ಲೆಸ್ ಇಯರ್‌ಬಡ್‌ಗಳು ಹೆಚ್ಚಿನ ಮತ್ತು ಕಡಿಮೆ ಆಡಿಯೊ ಆವರ್ತನಗಳನ್ನು ಸುಲಭವಾಗಿ ನಿಭಾಯಿಸಲು 11mm ವೂಫರ್ ಮತ್ತು 6mm ಟ್ವೀಟರ್‌ಗಳನ್ನು ಹೊಂದಿವೆ ಎಂದು ಕಂಪೆನಿ ತಿಳಿಸಿದೆ.
• ತಲ್ಲೀನಗೊಳಿಸುವ ವರ್ಚುವಲ್ ಸರೌಂಡ್ ಸೌಂಡ್ ಅನುಭವಕ್ಕಾಗಿ ಸ್ಪೇಷಿಯಲ್ ಆಡಿಯೊ ಬೆಂಬಲದೊಂದಿಗೆ ಬಂದಿರುವ ಈ ಸಾಧನವು AI ಶಬ್ದ-ಕಡಿತ ವೈಶಿಷ್ಟ್ಯವನ್ನು ಸಹ ಹೊಂದಿವೆ.
• OnePlus Buds Pro 2 ಸಾಧನದ ಸಂಪರ್ಕ ಆಯ್ಕೆಗಳಲ್ಲಿ LHDC, AAC, SBC, ಮತ್ತು LC3 ಆಡಿಯೊ ಕೊಡೆಕ್‌ಗಳಿಗೆ ಬೆಂಬಲದೊಂದಿಗೆ ಬ್ಲೂಟೂತ್ v5.3 ಸಂಪರ್ಕ ವೈಶಿಷ್ಟ್ಯಗಳಿವೆ.
• ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಕಾರ್ಯನಿರ್ಬಹಿಸುವ ಈ ಸಾಧನವು ಡಾಲ್ಬಿ ಅಟ್ಮಾಸ್ ಪ್ರಾದೇಶಿಕ ಆಡಿಯೋ ಬೆಂಬಲ ಹಾಗೂ ಡೈನಾಡಿಯೊ ಟ್ಯೂನಿಂಗ್ ಫೀಚರ್ ಹೊಂದಿದೆ.
• ಇದರಲ್ಲಿರುವ ANC ವೈಶಿಷ್ಟ್ಯವು 48dB ವರೆಗಿನ ಹೊರಗಿನ ಶಬ್ದವನ್ನು ನಿಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ .
• ಅದಲ್ಲದೆ ಕರೆಗಳಿಗೆ ಉತ್ತರಿಸಲು ಮತ್ತು ಸಂಗೀತ ಪ್ಲೇಬ್ಯಾಕ್ ನ್ಯಾವಿಗೇಟ್ ಮಾಡಲು ಸ್ಪರ್ಶ ನಿಯಂತ್ರಣಗಳನ್ನು ಸಹ ಪಡೆದಿರುವ ಈ ಸಾಧನವು ಡ್ಯುಯಲ್ ಕನೆಕ್ಷನ್‌, 9 ಗಂಟೆಗಳ ಬ್ಯಾಟರಿ ಬ್ಯಾಕಪ್ ನೀಡುವ 520mAh ಬ್ಯಾಟರಿ, Qi ವಾಯರ್‌ಲೆಸ್ ಚಾರ್ಜಿಂಗ್ ಸೌಲಭ್ಯಗಳನ್ನು ಹೊಂದಿದೆ

ಸದ್ಯ ಗ್ರಾಹಕರು ಆರ್ಬರ್ ಗ್ರೀನ್ ಮತ್ತು ಅಬ್ಸಿಡಿಯನ್ ಕಪ್ಪು ಎರಡು ಬಣ್ಣಗಳಲ್ಲಿ OnePlus Buds Pro 2 ಇಯರ್‌ಬಡ್ಸ್ ಸಾಧನವನ್ನು ಖರೀದಿಸಬಹುದು ಎಂದು OnePlus ಕಂಪೆನಿ ತಿಳಿಸಿದೆ.

Leave A Reply

Your email address will not be published.