LIC Aadhaar Shila Scheme: ಮಹಿಳೆಯರಿಗಾಗಿಯೇ ವಿನ್ಯಾಸಗೊಳಿಸಲಾಗಿರುವ ಈ ಯೋಜನೆಯಲ್ಲಿ ಸೇವಿಂಗ್ ಮಾಡಿ ಪಡೆಯಿರಿ ಲಕ್ಷದವರೆಗೆ ಹಣ!

ಶ್ರೀಮಂತ ಆಗಬೇಕು ಎಂದು ಕನಸು ಕಾಣೋದು ಕಾಮನ್. ಸಾಮಾನ್ಯವಾಗಿ ಪ್ರತಿಯೊಬ್ಬರ ಕನಸು ಕೂಡ ಅದೇ ಆಗಿರುತ್ತೆ ಅಂದರೂ ತಪ್ಪಾಗಲಾರದು. ಅದರಂತೆ ಹೆಚ್ಚಿನವರು ಕಷ್ಟ ಪಟ್ಟು ದುಡಿಯುತ್ತಾರೆ. ಕೆಲವೊಂದಷ್ಟು ಜನ ಶ್ರದ್ಧೆಯಿಂದ ಎಷ್ಟಾಗುತ್ತೋ ಅಷ್ಟು ದುಡಿಯುತ್ತಾರೆ. ಆದ್ರೆ, ಎಷ್ಟು ದುಡಿಯುತ್ತೇವೆ ಅದು ಮುಖ್ಯವಲ್ಲ. ಬದಲಾಗಿ ಎಷ್ಟು ಉಳಿತಾಯ ಮಾಡುತ್ತೇವೆ ಅದು ಮುಖ್ಯ.

ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೇ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ. ಇಂತಹ ಹೂಡಿಕೆಗಾಗಿಯೇ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ. ಇಂತಹ ಯೋಜನೆಗಳಲ್ಲಿ “LIC Aadhaar Shila Scheme” ಜನಪ್ರಿಯ ವಿಮಾ ಯೋಜನೆ ಕೂಡ ಸೇರಿದೆ. ಎಲ್‌ಐಸಿ ಹೇಳಿಕೆ ಪ್ರಕಾರ, “ಎಲ್‌ಐಸಿ ಆಧಾರ್ ಶಿಲಾ ಯೋಜನೆ” ಪಾಲಿಸಿಗಳನ್ನು ಗರಿಷ್ಠ 3 ಲಕ್ಷ ರೂ. ಗಳವರೆಗೆ ಮಾತ್ರ ಖರೀದಿಸಬಹುದು. ಇದರ ಪಾವತಿಗಾಗಿ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಪ್ರೀಮಿಯಂಗಳ ಆಯ್ಕೆಗಳಿವೆ.

ಈ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮ ವಿಶೇಷವಾಗಿ ಮಹಿಳೆಯರಿಗಾಗಿಯೇ ವಿನ್ಯಾಸಗೊಳಿಸಲಾಗಿದ್ದು, ಜೀವ ಸುರಕ್ಷತೆ ಮತ್ತು ಹಣ ಉಳಿತಾಯದ ಪ್ರಯೋಜನಗಳನ್ನು ಇದರಲ್ಲಿ ಪಡೆಯಬಹುದಾಗಿದೆ. ಪಾಲಿಸಿಯ ಅವಧಿಯಲ್ಲಿ, ವಿಮೆದಾರರು ಮೃತಪಟ್ಟರೆ ವಿಮೆದಾರರ ಕುಟುಂಬಕ್ಕೆ ಡೆತ್‌ ಬೆನಿಫಿಟ್ ನೀಡುತ್ತದೆ.

ಈ ಯೋಜನೆಯಲ್ಲಿ 8 ವರ್ಷದಿಂದ 55 ವರ್ಷದೊಳಗಿನ ಎಲ್ಲಾ ಹೆಣ್ಣುಮಕ್ಕಳು / ಮಹಿಳೆಯರು ಹೂಡಿಕೆ ಮಾಡಬಹುದಾಗಿದೆ. ಈ ಪಾಲಿಸಿಯ ಮೆಚ್ಯೂರಿಟಿ ಅವಧಿಯೂ ಹತ್ತು ಮತ್ತು ಇಪ್ಪತ್ತು ವರ್ಷಗಳ ಮಧ್ಯಾವಧಿ ಆಗಿದೆ. ಅಲ್ಲದೆ ಈ ಎಲ್‌ಐಸಿ ಪಾಲಿಸಿಯ ಗರಿಷ್ಟ ಮೆಚ್ಯೂರಿಟಿ ವಯಸ್ಸು 70 ವರ್ಷಗಳಾಗಿದ್ದು, 3 ಲಕ್ಷ ರೂ. ಗಳ ಗರಿಷ್ಟ ಮೂಲ ಮೊತ್ತ ನೀಡುತ್ತದೆ. ಈ ಪಾಲಿಸಿಯ ಅಡಿಯಲ್ಲಿ ಕನಿಷ್ಠ ಮೂಲ ಮೊತ್ತ 75 ಸಾವಿರ ರೂ. ನೀಡಲಾಗುತ್ತದೆ.

Leave A Reply

Your email address will not be published.