Viral Video : ಮಾರ್ಗ ಮಧ್ಯೆ ಸಾವಿರಾರು ಕಾಗೆಗಳ ವಿಚಿತ್ರ ವರ್ತನೆಗೆ ಬೆಚ್ಚಿಬಿದ್ದ ಜನ !

ದಿನಂಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ವಿಡಿಯೋ ತುಣುಕುಗಳು ವೈರಲ್ ಆಗುತ್ತಲೆ ಇರುತ್ತವೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೊಳಿಸಿದರೆ ಮತ್ತೆ ಕೆಲವು ಹಾಸ್ಯ ಮಿಶ್ರಿತ ವಿಡಿಯೋಗಳು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋ ನೋಡುಗರನ್ನು ವಿಸ್ಮಯಗೊಳಿಸಿದ್ದು ಭಯ ಭೀತರನ್ನಾಗಿಸುತ್ತದೆ.

.ಈ ಜಗವೇ ಒಂದು ವಿಸ್ಮಯ ನಗರಿ. ಇಲ್ಲಿ ನಡೆಯುವ ವಿದ್ಯಮಾನಗಳು ಕೆಲವೊಮ್ಮೆ ಊಹೆಗೂ ನಿಲುಕದಷ್ಟು ಜನರನ್ನು ಅಚ್ಚರಿಗೆ ತಳ್ಳುತ್ತದೆ. ಸದ್ಯ ಜಪಾನ್‌ನ ಹೊನ್ಶು ಎಂಬಲ್ಲಿ ವಿಚಿತ್ರವೊಂದು ಸಂಭವಿಸಿದ್ದು, ಸಾವಿರಾರು ಕಾಗೆಗಳು ಏಕಾಏಕಿ ಒಂದೆಡೆ ಸೇರಿ ವಿಚಿತ್ರವಾಗಿ ಕೂಗತೊಡಗಿರುವ ಘಟನೆ ನಡೆದಿದೆ.ಕ್ಯೋಟೋ ಬಳಿಯ ಜಪಾನಿನ ದ್ವೀಪದ ಬೀದಿಗಳಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದನ್ನು ಕಂಡು ಅಲ್ಲಿನ ಬೆಚ್ಚಿ ಬಿದ್ದಿದ್ದಾರೆ ಎನ್ನಲಾಗಿದೆ. ಅರೇ ಕಾಗೆ ಕೂಗಿದರೆ ಜನರು ಹೆದರುವಂತಹದ್ದು ಏನಿದೆ ಎಂಬ ಪ್ರಶ್ನೆ ಸಹಜವಾಗಿ ನಿಮ್ಮನ್ನು ಕಾಡಬಹುದು.

ಇದಕ್ಕೆ ಕಾರಣವೂ ಇದೆ. ಇತ್ತೀಚೆಗೆ ಟರ್ಕಿಯಲ್ಲಿ ಸಂಭವಿಸಿದ ಭೂಕಂಪಕ್ಕೂ ಮೊದಲು ಪಕ್ಷಿಗಳು ವಿಚಿತ್ರವಾಗಿ ವರ್ತಿಸುತ್ತಿದ್ದ ವಿಡಿಯೋ ವೈರಲ್​ ಆಗಿದ್ದು, ಹೀಗಾಗಿ, ಜಪಾನ್​ನಲ್ಲಿಯೂ ಏನಾದರು ಅಪಾಯ ಸಂಭವಿಸಲಿದೆಯೆ ಎಂಬ ಭಯ ಜನರಲ್ಲಿ ಮನೆ ಮಾಡಿದೆ. ಹೊನ್ಶು ದ್ವೀಪದ ಬೀದಿಗಳಲ್ಲಿ ಪಕ್ಷಿಗಳು ನಿಗೂಢ ರೀತಿಯಲ್ಲಿ ಈ ರೀತಿ ಸೇರಿ ವಿಚಿತ್ರವಾಗಿ ವರ್ತಿಸುತ್ತಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎನ್ನಲಾಗಿದೆ.

https://twitter.com/QrmhPb4rtA6JxTH/status/1623206544916742145?ref_src=twsrc%5Etfw%7Ctwcamp%5Etweetembed%7Ctwterm%5E1623206544916742145%7Ctwgr%5E%7Ctwcon%5Es1_c10&ref_url=http%3A%2F%2Fapi-news.dailyhunt.in%2F

ಸಾಮಾನ್ಯವಾಗಿ ಪ್ರಕೃತಿಯಲ್ಲಿ ನಡೆಯುವ ಕೆಲ ನೈಸರ್ಗಿಕ ವಿಪತ್ತುಗಳ ಬಗ್ಗೆ ಮನುಷ್ಯರಿಗಿಂತ ಮೊದಲೇ ಪ್ರಾಣಿ ಪಕ್ಷಿಗಳಿಗೆ ತಿಳಿಯುವ ಹಿನ್ನೆಲೆ ಕಾಗೆಗಳ ಈ ವಿಚಿತ್ರ ವರ್ತನೆ ಹಿಂದೆ ಏನಾದರೂ ಸುಳಿವು ಇರಬಹುದೇ ಎಂಬ ಅನುಮಾನ ಅಲ್ಲಿನ ಜನರನ್ನು ಕಾಡುತ್ತಿದೆ. ಸದ್ಯ, ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಂಚಲನ ಮೂಡಿಸಿದೆ.

https://twitter.com/QrmhPb4rtA6JxTH/status/1623206544916742145?ref_src=twsrc%5Etfw%7Ctwcamp%5Etweetembed%7Ctwterm%5E1623206544916742145%7Ctwgr%5E%7Ctwcon%5Es1_c10&ref_url=http%3A%2F%2Fapi-news.dailyhunt.in%2F

Leave A Reply

Your email address will not be published.