Facebook Tricks : ಈ ಟ್ರಿಕ್ಸ್ ನಿಂದ ನಿಮ್ಮ ಫೇಸ್‌ಬುಕ್‌ ಯಾರು ನೋಡುತ್ತಿದ್ದಾರೆ ತಿಳಿಯಿರಿ!

ಫೇಸ್‌ಬುಕ್‌ನಿಂದ ಎಷ್ಟು ಲಾಭವಿದೆಯೋ ಅಷ್ಟೇ ಅಪಾಯವೂ ಇದೆ. ನಮ್ಮ ವೈಯಕ್ತಿ ಬದುಕಿನ ಕ್ಷಣಗಳನ್ನು, ಫೋಟೋಗಳನ್ನು ಅದರಲ್ಲಿ ಹಂಚಿಕೊಳ್ಳುತ್ತೇವೆ. ಆದರೆ, ದುಷ್ಕರ್ಮಿಗಳು ಅಥವಾ ಅಪರಿಚಿತರು ನಮ್ಮ ಪ್ರೊಫೈಲ್‌ನಲ್ಲಿರುವ ಎಲ್ಲ ಖಾಸಗಿ ಮಾಹಿತಿಯನ್ನು, ಫೋಟೋಗಳನ್ನು, ವಿಡಿಯೋಗಳನ್ನು ಬಳಸಿಕೊಂಡು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳೇ ಹೆಚ್ಚು.

ಹೌದು ಸೋಷಿಯಲ್ ಮೀಡಿಯಾವನ್ನು ದುರುಪಯೋಗ ಪಡಿಸಿಕೊಳ್ಳುವವರೂ ಹಲವರಿದ್ದಾರೆ. ಸದ್ಯ ಇದರಲ್ಲಿ ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್ ಅನ್ನು ಎಲ್ಲಾ ವಯಸ್ಸಿನ ಜನರು ಉಪಯೋಗಿಸುತ್ತಿದ್ದಾರೆ. ಪ್ರತಿದಿನ ಸುಮಾರು ಕೋಟಿಗಟ್ಟಲೆ ಜನರು ಇದರಲ್ಲಿ ಸಕ್ರಿಯರಾಗಿದ್ದಾರೆ. ನೀವುಕೂಡ ಫೇಸ್‌ಬುಕ್ ಅನ್ನು ಬಳಸಿದರೆ ಅನೇಕ ಜನರು ನಿಮ್ಮ ಪ್ರೊಫೈಲ್‌ಗೆ ವಿಸಿಟ್ ಮಾಡುತ್ತಾರೆ. ಆದರೆ ನಿಮ್ಮ ಪ್ರೊಫೈಲ್ ಅನ್ನು ಯಾರು ರಹಸ್ಯವಾಗಿ ನೋಡುತ್ತಿದ್ದಾರೆಂದು ನೋಡಲು ಸಾಧ್ಯವಿಲ್ಲ.

ಸದ್ಯ ನೀವು ಕೆಲ ಟ್ರಿಕ್ ಬಳಸಿ ನಿಮ್ಮ ಫೇಸ್‌ಬುಕ್ ಅನ್ನು ಯಾರು ನೋಡಿದ್ದಾರೆಂದು ಕಂಡುಹಿಡಿಯಬಹುದು:

• ನೀವು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಫೇಸ್‌ಬುಕ್ ತೆರೆದು ಲಾಗಿನ್ ಮಾಡಿ.
• ಲಾಗಿನ್ ಆದ ನಂತರ ‘ರೈಟ್ ಕ್ಲಿಕ್’ ಮಾಡಬೇಕು.
• ಅಲ್ಲಿ ನಿಮಗೆ ‘ವೀವ್ ಪೇಜ್ ಸೋರ್ಸ್’ ಎಂಬ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
• ವೀವ್ ಪೇಜ್ ಸೋರ್ಸ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಪುಟದ ಮೂಲ ಕೋಡ್​ಗಳು ತೆರೆಯುತ್ತದೆ.
• ಅದರಲ್ಲಿ ‘BUDDY_ID’ ಎಂಬುದನ್ನು ಹುಡುಕಬೇಕು. ಇದಕ್ಕಾಗಿ Control+F (ctrl+F) ಒತ್ತಿ ಮತ್ತು ‘BUDDY_ID’ ಎಂದು ಟೈಪ್ ಮಾಡಿ ಎಂಟರ್ ಹೊಡೆಯಿರಿ.
• ಈಗ ಹಲವಾರು ಫೇಸ್​ಬುಕ್ ಪ್ರೊಫೈಲ್ ಐಡಿಗಳು ‘BUDDY_ID’ ಪಕ್ಕದಲ್ಲಿ ಕಾಣಿಸಿಕೊಳ್ಳುತ್ತವೆ.
• ಅದರಲ್ಲಿ ಒಬ್ಬರ ಐಡಿಯನ್ನು ಕಾಪಿ ಮಾಡಬೇಕು.
• ಹೀಗೆ ಕಾಪಿ ಮಾಡಿದ ಐಡಿಯನ್ನು ಹೊಸ ಟ್ಯಾಬ್ ತೆಗೆದು Facebook.com/your selected ID (ನೀವು ಕಾಪಿ ಮಾಡಿದ ಐಡಿ) ಫೆಸ್ಟ್ ಮಾಡಿ ಎಂಟರ್ ಒತ್ತಿರಿ.

ಈ ಐಡಿಯನ್ನು ನಮೂದಿಸಿದ ನಂತರ ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಅನ್ನು ವೀಕ್ಷಿಸುವವರ ಪುಟ ತೆರೆಯುತ್ತದೆ. ಈ ಮೂಲಕ ಅವರಿಗೂ ತಿಳಿಯದಂತೆ ಈ ಸರಳ ರೀತಿಯಲ್ಲಿ ನಿಮ್ಮ ಫೆಸ್​ಬುಕ್ ಅನ್ನು ಯಾರು ನೋಡಿದ್ದಾರೆಂದು ಕಂಡುಹಿಡಿಯಬಹುದಾಗಿದೆ.

ಈ ವಿಧಾನ ಜನರಿಗೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ ಮತ್ತು ಅವರ ಗೌಪ್ಯತೆಯನ್ನು ಖಚಿತಪಡಿಸುತ್ತದೆ.

Leave A Reply

Your email address will not be published.