ಪುರುಷರೇ ಏಲಕ್ಕಿ ತಿನ್ನಿ ಈ ಸಮಸ್ಯೆ ಮಾಯವಾಗುತ್ತೆ!

ಏಲಕ್ಕಿ ಆಹಾರವನ್ನು ರುಚಿಕರವಾಗಿಸುವುದಲ್ಲದೆ, ದೇಹವನ್ನು ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸಲು ಸಹಕಾರಿ ಆಗಿದೆ. ಏಲಕ್ಕಿಯಲ್ಲಿ ಮುಖ್ಯವಾಗಿ ಕಾರ್ಬೋಹೈಡ್ರೇಟ್‌ಗಳು, ಆಹಾರದ ಫೈಬರ್, ಕ್ಯಾಲ್ಸಿಯಂ, ಪೊಟ್ಯಾಷಿಯಮ್, ಮೆಗ್ನೀಷಿಯಮ್, ಕಬ್ಬಿಣ ಮತ್ತು ರಂಜಕಗಳಿರುತ್ತವೆ. ಇವು ಆರೋಗ್ಯಕರ ದೇಹಕ್ಕೆ ಬಹಳ ಪ್ರಯೋಜನಕಾರಿ.

ಏಲಕ್ಕಿಯನ್ನು ಊಟದ ನಂತರ ಸೇವಿಸಬೇಕು. ಇದರೊಂದಿಗೆ, ಬಾಯಿಯ ದುರ್ವಾಸನೆಯನ್ನು ತೆಗೆದು ಹಾಕುವ ಮೂಲಕ ಹಲ್ಲುಗಳ ಕುಳಿಗಳ ಸಮಸ್ಯೆಯೂ ನಿವಾರಣೆಯಾಗುತ್ತದೆ. ಇದಲ್ಲದೆ, ವಾಂತಿ ಮತ್ತು ವಾಕರಿಕೆ ಸಮಸ್ಯೆಯೂ ನಿವಾರಣೆಯಾಗುತ್ತದೆ. ಮುಖ್ಯವಾಗಿ ಪುರುಷರಿಗೆ ಪ್ರಯೋಜನಕಾರಿಯಾಗಿದೆ.

• ಪುರುಷರು ರಾತ್ರಿ ಮಲಗುವ ಮುನ್ನ ಕನಿಷ್ಠ 2 ಏಲಕ್ಕಿಗಳನ್ನು ತಿನ್ನಬೇಕು. ರಾತ್ರಿ ಮಲಗುವ ಮುನ್ನ 2 ಏಲಕ್ಕಿಯನ್ನು 1 ಲೋಟ ಹಾಲಿನೊಂದಿಗೆ ಬೆಚ್ಚಗೆ ಕುಡಿಯಿರಿ. ಏಲಕ್ಕಿ ಲೈಂಗಿಕ ಆರೋಗ್ಯವನ್ನು ಸುಧಾರಿಸಲು ತುಂಬಾ ಸಹಾಯಕವಾಗಿದೆ. ಆದ್ದರಿಂದ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಪುರುಷರಲ್ಲಿ ದುರ್ಬಲತೆ ದೂರವಾಗುತ್ತದೆ.

• ರಾತ್ರಿ ಮಲಗುವ ಮುನ್ನ 1 ಲೋಟ ಬಿಸಿ ನೀರಿನಲ್ಲಿ 2 ಏಲಕ್ಕಿಯನ್ನು ಕುದಿಸಿ, ನಂತರ ಈ ನೀರನ್ನು ಕುಡಿಯಿರಿ ಮತ್ತು ಅಗಿದ ನಂತರ ತಿನ್ನಿರಿ. ನೀವು ನೇರವಾಗಿ ಅಗಿಯುವ ಮೂಲಕ ಏಲಕ್ಕಿಯನ್ನು ಮೌತ್ ಫ್ರೆಶ್ನರ್ ಆಗಿ ಬಳಸಬಹುದು. ಯಾವುದೇ ಖಾದ್ಯ ಅಥವಾ ತರಕಾರಿ ತಯಾರಿಸುವಾಗ ಅದರ ಬೀಜಗಳನ್ನು ಸೇರಿಸಿ ಸೇವಿಸಬಹುದು.

ಏಲಕ್ಕಿಯ ಇತರ ಉತ್ತಮ ಪ್ರಯೋಜನಗಳು:

• ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿರುವ ಏಲಕ್ಕಿಯು ಬಾಯಿಯ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.

• ತಲೆನೋವಿನಿಂದ ತ್ವರಿತ ಉಪಶಮನವನ್ನು ನೀಡುತ್ತದೆ. (ಏಲಕ್ಕಿಯ ಪೇಸ್ಟ್ ಅನ್ನು ನೆತ್ತಿಗೆ ಹಚ್ಚಿಕೊಳ್ಳುವುದರಿಂದ ಪರಿಹಾರ ದೊರೆಯುತ್ತದೆ.)

• ವಿವಿಧ ರೀತಿಯ ಉಸಿರಾಟ ತೊಂದರೆಗಳನ್ನು ನಿವಾರಿಸುವಲ್ಲಿ ಸಹಕಾರಿ. ನೋಯುತ್ತಿರುವ ಗಂಟಲಿಗೆ ಉಪಶಮನವನ್ನು ನೀಡುತ್ತದೆ.

• ಹಲ್ಲಿನ ವಸಡಿನ ತೊಂದರೆ ಮತ್ತು ಇನ್‌ಫೆಕ್ಷನ್‌ನಿಂದ ರಕ್ಷಿಸುತ್ತದೆ.

• ಮೂತ್ರ ಸಮಸ್ಯೆಯ ಪರಿಹಾರವನ್ನು ನಿವಾರಿಸುವಲ್ಲಿ ಏಲಕ್ಕಿಯ ಪಾತ್ರ ಹಿರಿದು. ನೆಲ್ಲಿಕಾಯಿ, ಮೊಸರು ಅಥವಾ ಜೇನಿನೊಂದಿಗೆ ಏಲಕ್ಕಿ ಬೆರೆಸಿ ತಿನ್ನಬಹುದು.

• ಬಿಕ್ಕಳಿಕೆಯನ್ನು ದೂರಾಗಿಸುವಲ್ಲಿ ಸಹಕಾರಿಯಾಗಿದೆ.

• ಹೆಚ್ಚುತ್ತಿರುವ ತೂಕದಿಂದ ತೊಂದರೆಗೊಳಗಾದವರು ತಮ್ಮ ಆಹಾರದಲ್ಲಿ ಏಲಕ್ಕಿಯನ್ನು ಸೇರಿಸಿಕೊಳ್ಳಬೇಕು. ಇದರಲ್ಲಿರುವ ಪೋಷಕಾಂಶಗಳು ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

• ನಿದ್ದೆ ಬಾರದೇ ಇರುವ ಸಮಸ್ಯೆ ಇದ್ದರೆ ಬೆಚ್ಚಗಿನ ನೀರಿನಲ್ಲಿ ಏಲಕ್ಕಿಯನ್ನು ಸೇವಿಸಿ. ಇದರಿಂದ ನಿದ್ರೆ ಬರುವುದಲ್ಲದೆ ಗೊರಕೆಯ ಸಮಸ್ಯೆಯೂ ದೂರವಾಗುತ್ತದೆ.

• ಗ್ಯಾಸ್, ಅಸಿಡಿಟಿ, ಮಲಬದ್ಧತೆ, ಹೊಟ್ಟೆ ಸೆಳೆತದ ಸಮಸ್ಯೆಯನ್ನು ಏಲಕ್ಕಿಯ ಬಳಕೆಯಿಂದ ಹೋಗಲಾಡಿಸಬಹುದು.

• ಏಲಕ್ಕಿಯ ಬಳಕೆಯು ಹಲ್ಲು ಹುಳುಕನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಮತ್ತು ಬಾಯಿಯ ದುರ್ವಾಸನೆಯನ್ನೂ ಹೋಗಲಾಡಿಸುತ್ತದೆ.

• ಇದಲ್ಲದೇ ವಾಂತಿ, ವಾಕರಿಕೆ ಸಮಸ್ಯೆಯೂ ದೂರವಾಗುತ್ತದೆ.

ಹೌದು ಭಾರತೀಯ ಅಡುಗೆಯಲ್ಲಿ ತನ್ನ ಚಮತ್ಕಾರವನ್ನು ತೋರುವ ಈ ಪುಟ್ಟ ಸಾಂಬಾರು ಪದಾರ್ಥ ಆಗಿರುವ ಏಲಕ್ಕಿ ಆಯುರ್ವೇದದಲ್ಲಿ ದಿವ್ಯೌಷಧವಾಗಿದೆ.

Leave A Reply

Your email address will not be published.