ನೆಗ್ಗಿನ ಮುಳ್ಳಿನ ಗಿಡದ ಆರೋಗ್ಯಕಾರಿ ಪ್ರಯೋಜನವೇನು?

ನೆಲ್ಲಿಕಾಯಿ ಬಗ್ಗೆ ಗೊತ್ತಿರದೆ ಇರುವವರೇ ವಿರಳ. ಆದರೆ, ನಮ್ಮ ಸುತ್ತ ಮುತ್ತಲಲ್ಲೆ ದೊರೆಯುವ ಅನೇಕ ಗಿಡಗಳ ಔಷದೀಯ ಗುಣಗಳ ಬಗ್ಗೆ ನಮಗೆ ತಿಳಿದಿರುವುದಿಲ್ಲ. ಅದೇ ರೀತಿ, ಗಿಡ, ಹಳ್ಳಿಗಳ ಕಡೆ ಗದ್ದೆ/ ತೋಟಗಳಲ್ಲಿ ಕಳೆಯಂತೆ ಕಂಡುಬರುವ   ನೆಲನೆಲ್ಲಿ ಅಥವಾ ಕೀಳುನೆಲ್ಲಿಯ ಆರೋಗ್ಯ ಪ್ರಯೋಜನದ ಬಗ್ಗೆ ನಿಮಗೆ ತಿಳಿದಿದೆಯೇ??? ಇಲ್ಲ ಎಂದಾದರೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್:

 

ನೆಲ್ಲಿಯ ಎಲೆಗಳನ್ನೇ ಹೋಲುವುದಲ್ಲದೇ, ನೆಲ್ಲಿ ಕಾಯಿಯನ್ನು ಹೋಲುವ ಸಾಸಿವೆ ಗಾತ್ರದ ಕಾಳುಗಳು ಎಲೆಯ ಹಿಂಬದಿಗೆ ಅಂಟಿ ಕೊಂಡಿರುತ್ತವೆ. ಇದರಿಂದಾಗಿ ಈ ಗಿಡಕ್ಕೆ ನೆಲ ನೆಲ್ಲಿ ಎಂಬ ಹೆಸರು ಬಂದಿದೆ. ಅಷ್ಟೆ ಅಲ್ಲದೇ, ಹುಣಸೆ ಎಲೆಯನ್ನು ಹೋಲುವ ಈ ಸಸ್ಯದ ಎಲೆಗಳು ಚಿಕ್ಕ ಚಿಕ್ಕ ದಳಗಳನ್ನು ಒಳಗೊಂಡಿರುತ್ತದೆ. ಹಾಗಾದ್ರೆ ಈ ನೆಲ ನೆಲ್ಲಿಯಿಂದ ಏನೆಲ್ಲಾ ಪ್ರಯೋಜನಗಳಿವೆ ಎಂದು ನೋಡೋಣ:

ನೆಲ ನೆಲ್ಲಿ ಸಸ್ಯದ ಎಲ್ಲಾ ಭಾಗಗಳು , ಎಲೆಗಳು ಮತ್ತು ಬೇರುಗಳು ಸೇರಿದಂತೆ ಔಷಧೀಯ ಗುಣಗಳನ್ನು ಒಳಗೊಂಡಿದ್ದು, ಹೀಗಾಗಿ ಆಯುರ್ವೇದದಲ್ಲಿ ಪರಿಗಣಿಸುವ ಜನಪ್ರಿಯ ಗಿಡಮೂಲಿಕೆಗಳಲ್ಲಿ ನೆಲನೆಲ್ಲಿ ಕೂಡ ಸ್ಥಾನ ಪಡೆದಿದೆ. ಆಯುರ್ವೇದದ ಪ್ರಕಾರ, ಈ ಮೂಲಿಕೆಯು ಕಫ ಮತ್ತು ಪಿತ್ತ ದೋಷಗಳನ್ನು ಶಮನಗೊಳಿಸುತ್ತದೆ. ಇದು ಶೀತ ಸಾಮರ್ಥ್ಯವನ್ನು ಹೊಂದಿರುವಾಗ ಕಹಿ, ಸಂಕೋಚಕ ಮತ್ತು ಸಿಹಿ ರುಚಿಯನ್ನು ಒಳಗೊಂಡಿರುತ್ತದೆ.

ನೆಲನೆಲ್ಲಿಯು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಹಾರ್ಮೋನುಗಳ ಅಸಮತೋಲನೆಯನ್ನು ಸರಿಪಡಿಸಲು ಶಕ್ತಿವರ್ಧಕವಾಗಿ ಉಪಯೋಗಿಸಲಾಗುತ್ತದೆ. ನೆಲನೆಲ್ಲಿಯ ಎಲೆಯನ್ನು ಉಪ್ಪಿನೊಂದಿಗೆ ಅರೆದು, ಚರ್ಮಕ್ಕೆ ಲೇಪಿಸುವುದರಿಂದ ಚರ್ಮದ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು. ಫಂಗಸ್ ಮತ್ತು ಬ್ಯಾಕ್ಟೀರಿಯಾಗಳಿಂದಾದ ಕಾಯಿಲೆಗಳನ್ನು ತಡೆಗಟ್ಟಲು ನೆರವಾಗುತ್ತದೆ. ಇದಲ್ಲದೇ ನೆಲನೆಲ್ಲಿ ಗಾಯ ವಾಸಿ ಮಾಡುವ ಗುಣವನ್ನು ಹೊಂದಿದೆ. ನೆಲನೆಲ್ಲಿಯ ಗಿಡವನ್ನು ಬೇರು ಸಮೇತವಾಗಿ, ಜಜ್ಜಿ, ಗಾಯಕ್ಕೆ ಲೇಪಿಸಿದರೆ ಗಾಯ ಬೇಗ ವಾಸಿಯಾಗುತ್ತದೆ.

ನೆಲ ನೆಲ್ಲಿಯ ಮುಳ್ಳು, ಬೇರು ಮತ್ತು ಹಣ್ಣುಗಳು ಕಿಡ್ನಿ, ಕರುಳು ಹಾಗೂ ಶರೀರದ ಎಲ್ಲ ಅಂಗಾಂಗಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಬಳಕೆ ಮಾಡಲಾಗುತ್ತದೆ. ಅಷ್ಟೆ ಅಲ್ಲದೇ, ನೆಲನೆಲ್ಲಿ ಮೂತ್ರಕೋಶದ ಕಲ್ಲುಗಳನ್ನು ಕರಗಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಹೀಗಾಗಿ ,ಸ್ಟೋನ್ ಬ್ರೇಕರ್ ಎಂದು ಸಹ ನೆಲನೆಲ್ಲಿಯನ್ನು ಕರೆಯಲಾಗುತ್ತದೆ. ನೆಲನೆಲ್ಲಿಯ ಬಳಕೆಯಿಂದ  ಜೀರ್ಣ ಕ್ರಿಯೆ  ಸುಧಾರಿಸುತ್ತದೆ.ವಿವಿಧ ರೀತಿಯ ಜ್ವರಕ್ಕೆ ಚಿಕಿತ್ಸೆ ಮಾಡಲು  ನೆಲನೆಲ್ಲಿ ಗಿಡದ ಎಲೆ , ಕೊಂಬೆ, ಕಾಯಿಯ ಜೊತೆ ಅರಿಶಿನ, ಶುಂಠಿ, ಒಳ್ಳೆ ಮೆಣಸು ಬಳಸಿ ಕಷಾಯ ತಯಾರಿಸಿ ಸೇವಿಸಿದರೆ ಶೀತ ಜ್ವರದಿಂದ ಪರಿಹಾರ ಕಂಡುಕೊಳ್ಳಬಹುದು.

Leave A Reply

Your email address will not be published.