ಹಾಡಹಗಲೇ ಒಂಟಿ ಮಹಿಳೆಯ ಭೀಕರ ಕೊಲೆ !

ಪ್ರೀತಿ ಕುರುಡು ಎಂಬ ಮಾತಿನಂತೆ ಮನೆಯವರ ಸಮಾಜದ ವಿರೋಧದ ನಡುವೆಯೂ ಮದುವೆಯಾಗಿ ಈ ನಡುವೆ ಮದುವೆಯಾದ ಬಳಿಕ ಈ ಬಂಧದ ನಡುವೆ ಸಣ್ಣ ಪುಟ್ಟ ವಿಚಾರಕ್ಕೂ ಮನಸ್ತಾಪ ಉಂಟಾಗಿ ಬೀದಿಜಗಳಕ್ಕೆ ಕಾರಣವಾಗುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದರ ನಡುವೆ  ಪ್ರೀತಿಯ ನಿಜವಾದ ವ್ಯಾಖ್ಯಾನ ನೀಡುವಂತಹ ಅದೆಷ್ಟೋ ಆದರ್ಶ ಅಪರೂಪದ  ಜೋಡಿಗಳನ್ನು ನಾವು ನೋಡಬಹುದು. ಆದರೆ ಯಾವುದೇ ಸಂಬಂಧವಾದರು ಕೂಡ ನಂಬಿಕೆ ಅತ್ಯಗತ್ಯ. ನಂಬಿಕೆ ಇಲ್ಲ ಎಂದರೆ ಅಲ್ಲಿ ಸಂಬಂಧ ಬಿರುಕು ಮೂಡಲು ಆರಂಭ ಎಂದೇ ಹೇಳಬಹುದು.ಇದರಿಂದಲೇ ಅದೆಷ್ಟೊ ಸಮಸ್ಯೆ ಉಂಟಾಗಿ ಕೊಲೆಯಲ್ಲಿ ಅಂತ್ಯ ಕಂಡದ್ದು ಕೂಡ ಇದೆ.

ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಹೆಂಡತಿಯೇ ಗಂಡನನ್ನು ಕೊಲೆಗೈವ ಇಲ್ಲವೇ ಪತಿಯೇ ಮಡದಿಯನ್ನು ಕೊಲ್ಲುವ ಅನೇಕ  ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇದೀಗ , ಗಂಡನೇ ಹೆಂಡತಿಯನ್ನು ಕೊಂದು ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿಬರುತ್ತಿದೆ. ದಂಪತಿಗಳು ಮದುವೆಯಾಗಿ ಕೆಲ ವರ್ಷಗಳೇ ಕಳೆದು ಹೋಗಿತ್ತು. ಆದರೆ ಅವರಿಬ್ಬರ ವೈಮನಸ್ಸಿನಿಂದ ಇಬ್ಬರು ದೂರವಾಗಿದ್ರು. ಹೀಗಿದ್ರು ತಮ್ಮದೆ ಆದಂತಹ ಜೀವನದಲ್ಲಿ ಅವರು ತೊಡಗಿದ್ರು. ಆದ್ರೆ ಇವತ್ತು ಆಕೆಯ ಆಯಸ್ಸು ಮುಗಿದು ಹೋಗಿತ್ತು ಅನ್ನಿಸುತ್ತೆ. ಆಕೆಯ ಗಂಡನಿಂದಲೇ ಹೆಂಡತಿ ಬರ್ಬರ ಹತ್ಯೆಯಾಗಿದ್ದಾಳೆ. ಆಕೆಯ ಗಂಡನೆ ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎನ್ನುವ ಆರೋಪವು ಸಹ ಕೇಳಿ ಬಂದಿದೆ.

ಕೌಸರ್ ಮುಬೀನ್  ನದೀಮ್ ಎಂಬಾತನನ್ನು ಬೆಂಗಳೂರಿನಲ್ಲಿ ಮದುವೆಯಾಗಿ ಅದೆಷ್ಟೋ ವರ್ಷಗಳೇ ಕಳೆದಿವೆ. ಆದರೆ, ಇವರಿಬ್ಬರ ನಡುವೆ  ಹೊಂದಾಣಿಕೆಯಿರದ ಪರಿಣಾಮ ಆಗಾಗ ಜಗಳ ಮನಸ್ತಾಪ ಸಾಮಾನ್ಯವಾಗಿತ್ತು ಎನ್ನಲಾಗಿದೆ. ಹೀಗೆ ಜಗಳ ಆಗಾಗ ನಡೆದು ಸಂಬಂಧದಲ್ಲಿ ಬಿರುಕು ಮೂಡಿ ಇಬ್ಬರು ನಾನೊಂದು ತೀರ ನೀನೊಂದು ತೀರ ಎಂದು ಬೇರೆ ಮನೆಯಲ್ಲಿ ವಾಸವಾಗಿದ್ದರು.  ಮುಬೀನ ತನ್ನ ಮಗಳ ಜೊತೆ ಶಾಂತಿನಗರ ಬ‌ಳಿಯ ನಂಜಪ್ಪ ಸರ್ಕಲ್ ಬಳಿಯ ಮನೆಯೊಂದರಲ್ಲಿ ವಾಸವಾಗಿದ್ದಳು ಎನ್ನಲಾಗಿದೆ. ಆಕೆ ಬೇರೆಯಿದ್ದರು ಕೂಡ ಆಕೆಯಿದ್ದ ಮನೆಗೆ ಆಗಮಿಸಿ ನದೀಮ್ ಜಗಳ ಮಾಡಿ ಹೋಗುತ್ತಿದ್ದ ಎನ್ನಲಾಗಿದೆ.

ಇದೇ ರೀತಿ, ನದೀಮ್ ಆಕೆಯ ಮನೆಗೆ ಹೋಗಿ ಜಗಳವಾಡಿ ಮಾತಿಗೆ ಮಾತು ಬೆಳೆದು ಜಗಳ ತಾರಕ್ಕಕ್ಕೇರಿ ನದೀಮ್ ಏನು ಯೋಜನೆ ಹಾಕಿಕೊಂಡು ಬಂದಿದ್ದನೋ ತಿಳಿಯದು.ಬಾಗಿಲ ಹೊಸ್ತಿಲಲ್ಲೇ ಜಾಗಳವಾಡುತ್ತಿದ್ದ ಜೋಡಿಯ ಮಾತುಗಳು ನೆರೆಕರೆಯ ಜನರ ಕಿವಿಗು ಅಪ್ಪಳಿಸುತ್ತಿತ್ತು. ಹೀಗೆ, ನದೀಮ್ ಜಗಳವಾಡುತ್ತ ಹೆಂಡತಿಯ ಕುತ್ತಿಗೆಗೆ ಚಾಕು ಇರಿದ ಪರಿಣಾಮ ಬಾಗಿಲ ಹೊಸ್ತಿಲಲ್ಲೇ ಮಡದಿ ಕಣ್ಣು ಮುಚ್ಚಿದ್ದು ಇಹ ಲೋಕದ ಯಾತ್ರೆ ಮುಗಿಸಿ ಬಾರದ ಲೋಕಕ್ಕೆ ತೆರಳಿದ್ದಾಳೆ ಎನ್ನಲಾಗಿದೆ.

ಸುತ್ತಮುತ್ತಲಿನ ಜನರಿಗೆ ಮಾಹಿತಿ ತಿಳಿದು ಜನರು ಸೇರುತ್ತಿದ್ದಂತೆ ಅಲ್ಲಿಂದ ನದೀಮ್ ಪರಾರಿಯಾಗಿದ್ದು, ತಕ್ಷಣವೆ  ಸ್ಥಳೀಯರು ಪೊಲೀಸರಿಗೆ‌‌ ಮಾಹಿತಿ ನೀಡಿದ್ದು ಪೊಲೀಸರು  ಸ್ಥಳಕ್ಕೆ ಬರುವಷ್ಟರಲ್ಲಿ ಮುಬೀನಾ ಅವರ ಪ್ರಾಣ ಪಕ್ಷಿ ಹಾರಿಹೋಗಿದೆ ಎನ್ನಲಾಗಿದೆ. ಈ ಸ್ಥಳಕ್ಕೆ ಎಫ್.ಎಸ್.ಎಲ್ ತಂಡ ಮತ್ತು ಶ್ವಾನದಳದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಸದ್ಯ ಅಶೋಕ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.