ಆರೋಗ್ಯಕ್ಕೆ ಕಂದು ಅಥವಾ ಬಿಳಿ ಮೊಟ್ಟೆ, ಯಾವುದು ಉತ್ತಮ?

ಕೋಳಿ ಮೊಟ್ಟೆಗಳು ಬಿಳಿ ಮತ್ತು ಕಂದು ಅಥವಾ ಬ್ರೌನ್‌ ಎರಡು ಬಣ್ಣಗಳಲ್ಲಿ ಬರುತ್ತವೆ. ಎರಡೂ ಬಣ್ಣದ ಮೊಟ್ಟೆಗಳು ನಮಗೆ ಸುಲಭವಾಗಿ ಬಸಿಗುತ್ತವೆ . ಆದರೆ ನಮ್ಮ ಆರೋಗ್ಯಕ್ಕೆ ಯಾವ ಮೊಟ್ಟೆ ಆರೋಗ್ಯಕ್ಕೆ ಉತ್ತಮ ಅನ್ನೋ ಗೊಂದಲ ಇದ್ದೇ ಇದೆ. ಸಾಮಾನ್ಯವಾಗಿ ಆಹಾರದ ವಿಷಯಕ್ಕೆ ಬಂದಾಗ, ಜನರು ಬ್ರೌನ್‌ ಪದಾರ್ಥಗಳನ್ನೇ ಆರೋಗ್ಯಕರವೆಂದು ಪರಿಗಣಿಸುತ್ತಾರೆ. ಉದಾಹರಣೆಗೆ ಬ್ರೌನ್‌ ಅಕ್ಕಿ, ಬ್ರೌನ್‌ ಸಕ್ಕರೆ, ಬ್ರೌನ್‌ ಬ್ರೆಡ್ ಮತ್ತು ಈಗ ಬ್ರೌನ್‌ ಮೊಟ್ಟೆಗಳು. ದೇಸಿ ಮೊಟ್ಟೆಗಳು ಅಂದರೆ ಬ್ರೌನ್‌ ಬಣ್ಣದ ಮೊಟ್ಟೆಗಳು ಬಿಳಿ ಮೊಟ್ಟೆಗಳಿಗಿಂತ ಹೆಚ್ಚು ಆರೋಗ್ಯಕರವೆಂದು ಅಂದುಕೊಳ್ಳುತ್ತೇವೆ.

ಬಿಳಿ ಮತ್ತು ಕಂದು ಮೊಟ್ಟೆಗಳ ನಡುವಿನ ವ್ಯತ್ಯಾಸ ತಿಳಿಯೋಣ :

ದೇಸಿ ಮೊಟ್ಟೆಗಳು ಬ್ರೌನ್‌ ಬಣ್ಣದಲ್ಲಿರುತ್ತವೆ. ಫಾರ್ಮ್‌ ಮೊಟ್ಟೆಗಳು ಬಿಳಿ ಬಣ್ಣದಲ್ಲಿರುತ್ತವೆ. ಬಿಳಿ ಮೊಟ್ಟೆಗಳಿಗಿಂತ ಕಂದು ಬಣ್ಣದ ಮೊಟ್ಟೆಗಳು ಆರೋಗ್ಯಕರವೆಂದು ಹೇಳಲಾಗುತ್ತದೆ. ಆದರೆ ಮೊಟ್ಟೆಯ ಪೌಷ್ಟಿಕಾಂಶದ ಮೌಲ್ಯ ಅದರ ಬಣ್ಣದಿಂದ ಅಳೆಯಲಾಗುವುದಿಲ್ಲ. ಕೋಳಿಗಳ ಆಹಾರದಿಂದ ನಿರ್ಧರಿಸಲ್ಪಡುತ್ತದೆ. ಬಿಸಿಲಿಗೆ ತೆರೆದುಕೊಂಡು ಚೆನ್ನಾಗಿ ತಿನ್ನಿಸಿದ ಕೋಳಿಗಳ ಮೊಟ್ಟೆಗಳು ಎಲ್ಲ ರೀತಿಯ ಪೋಷಕಾಂಶಗಳನ್ನು ಹೊಂದಿರುತ್ತವೆ. ಫಾರ್ಮ್‌ನಲ್ಲಿ ಬಿಸಿಲಿನ ಶಾಖ ಇಲ್ಲದೆ, ಸರಿಯಾದ ಆಹಾರ ಪಡೆಯದ ಕೋಳಿಗಳ ಮೊಟ್ಟೆಗಳು ಕಡಿಮೆ ಪೋಷಕಾಂಶಗಳನ್ನು ಹೊಂದಿರುತ್ತವೆ.

ಫಾರ್ಮ್‌ನಲ್ಲಿನ ಕೋಳಿಗಳ ಮೊಟ್ಟೆಗಳಲ್ಲಿ ಪೋಷಕಾಂಶ ಕಡಿಮೆ. ಮನೆಯಂಗಳದಲ್ಲಿ ಎಲ್ಲೆಂದರಲ್ಲಿ ಓಡಾಡುತ್ತ ಆಹಾರ ತಿನ್ನುವ ಜವಾರಿ (ನಾಟಿ) ಕೋಳಿಗಳ ಮೊಟ್ಟೆ ಹೆಚ್ಚು ಸತ್ವಯುಕ್ತವಾಗಿರುತ್ತವೆ. ಆ ಕೋಳಿಗಳ ಮೊಟ್ಟೆಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ಆ ಕಾರಣಕ್ಕೆ ಅವುಗಳಲ್ಲಿ ಪ್ರೋಟೀನ್, ಕ್ಯಾಲೋರಿಗಳು ಅಧಿಕವಾಗಿರುವುದಕ್ಕೆ ಸಾಧ್ಯ ಆಗಿದೆ. ಕಂದು ಮೊಟ್ಟೆಗಳು ಹೆಚ್ಚು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ. ರುಚಿಯ ಬಗ್ಗೆ ಹೇಳುವುದಾದರೆ, ಕಂದು ಬಣ್ಣದ ಮೊಟ್ಟೆಯ ಹಳದಿ ಭಾಗವು ಬಿಳಿ ಮೊಟ್ಟೆಗಿಂತ ಸ್ವಲ್ಪ ಗಾಢ ಬಣ್ಣದ್ದಾಗಿರುತ್ತದೆ. ಕೋಳಿಗಳ ವಿಭಿನ್ನ ಆಹಾರ ಕ್ರಮದಿಂದಾಗಿ ಎರಡು ಮೊಟ್ಟೆಗಳ ರುಚಿಯಲ್ಲಿ ವ್ಯತ್ಯಾಸವಿದೆ.

ಆದರೆ ಕೆಲವೊಮ್ಮೆ ಮೊಟ್ಟೆಯ ಬಣ್ಣವು ಹೆಚ್ಚಾಗಿ ಕೋಳಿಯ ತಳಿ ಮತ್ತು ಕೋಳಿಯಿಂದ ಉತ್ಪತ್ತಿಯಾಗುವ ವರ್ಣದ್ರವ್ಯಗಳ ಮೇಲೆ ಅವಲಂಬಿತವಾಗಿರುತ್ತದೆ. ಆಹಾರ, ಒತ್ತಡದ ಮಟ್ಟ ಮತ್ತು ಪರಿಸರದಂತಹ ಇತರ ಅಂಶಗಳು ಮೊಟ್ಟೆಯ ಬಣ್ಣಕ್ಕೆ ಕಾರಣವಾಗಬಹುದು. ಕೋಳಿ ಸೇವಿಸುವ ಆಹಾರ ಮತ್ತು ಪರಿಸರ ಅಂಶಗಳು ಮೊಟ್ಟೆಯ ಪೌಷ್ಟಿಕತೆಯ ಮೇಲೆ ಪರಿಣಾಮ ಬೀರಬಹುದು.

ಒಂದು ದೊಡ್ಡ ಮೊಟ್ಟೆಯು ಸುಮಾರು 6.3 ಗ್ರಾಂ ಪ್ರೋಟೀನ್, 0.3 ಗ್ರಾಂ ಕಾರ್ಬೋಹೈಡ್ರೆಟ್ ಮತ್ತು 4.7 ಗ್ರಾಂ ಕೊಬ್ಬನ್ನು ಹೊಂದಿರುತ್ತದೆ. ಜೊತೆಗೆ ಒಂದು ಮೊಟ್ಟೆಯಲ್ಲಿ ಸುಮಾರು 0.8mg ಕಬ್ಬಿಣ, 0.6mg ಸತು, 15.4mg ಸೆಲೆನಿಯಮ್, 23.5mg ಫೋಲೇಟ್, 147mg ಕೋಲೀನ್, 0.4mcg ವಿಟಮಿನ್ B12 ಮತ್ತು 80mcg ವಿಟಮಿನ್ ಎ ಇರುತ್ತದೆ.

ಒಟ್ಟಿನಲ್ಲಿ ಮೊಟ್ಟೆಯನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಪ್ರೋಟೀನ್ ಜೊತೆಗೆ ಕ್ಯಾಲ್ಸಿಯಂ ಸಹ ಮೊಟ್ಟೆಯಲ್ಲಿದೆ. ಇದು ಮೂಳೆಗಳನ್ನು ಗಟ್ಟಿಯಾಗಿಡಲು ಸಹಾಯ ಮಾಡುತ್ತದೆ. ನಿತ್ಯ ಮೊಟ್ಟೆಯನ್ನು ಸೇವಿಸುವ ಮೂಲಕ ತೂಕವನ್ನೂ ನಿಯಂತ್ರಣದಲ್ಲಿ ಇರಿಸಬಹುದು. ಅದರಲ್ಲೂ ಈ ಚಳಿಗಾಲದಲ್ಲಿ ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ.

Leave A Reply

Your email address will not be published.