Valentines Day Offer : ಜಿಯೋ ತಂದಿದೆ ಈ ರೀಚಾರ್ಜ್ ಪ್ಲ್ಯಾನ್ ಗಳ ಮೇಲೆ ಭರ್ಜರಿ ರಿಯಾಯಿತಿ!

Share the Article

ಪ್ರೇಮಿಗಳ ದಿನಾಚರಣೆಗೆ ಇನ್ನೇನು ಕೆಲವೇ ಘಂಟೆಗಳು ಬಾಕಿ ಇದೆ. ಈ ಪ್ರಯುಕ್ತ ದೇಶದ ಖ್ಯಾತ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ಪ್ರಿಪೇಯ್ಡ್ ಯೋಜನೆಗಳು ಘೋಷಿಸಿದೆ. ಪ್ರೇಮಿಗಳು ತಮ್ಮ ದಿನವನ್ನು ಖುಷಿಯಾಗಿ ಇರಿಸಲು ಮುಂದಾಗಿದ್ದಾರೆ. ಅದರಂತೆ ಪ್ರಮುಖ ಟೆಲಿಕಾಂ ಸಂಸ್ಥೆಯಾದ ಜಿಯೋ ಸಹ ಈ ದಿನಕ್ಕೆ ಹೊಸ ಆಫರ್‌ ಘೋಷಣೆ ಮಾಡಿದೆ.

ಹೌದು, ರಿಲಯನ್ಸ್ ಜಿಯೋ ತನ್ನ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಪ್ರಮುಖ ಕೊಡುಗೆಗಳ ಬಗ್ಗೆ ಘೋಷಿಸಿದ್ದು, ಈ ಕೊಡುಗೆಯಲ್ಲಿ ಹೆಚ್ಚುವರಿ ಡೇಟಾ ಮತ್ತು ಉಡುಗೊರೆಗಳು ಮತ್ತು ಫುಡ್‌ ಆರ್ಡರ್‌ಗಳನ್ನು ಮಾಡಬಹುದಾಗಿದೆ. ಅಂದರೆ ಜಿಯೋ ಬಳಕೆದಾರರು 249, ರೂ., 899 ರೂ., ಮತ್ತು 2,999 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ ಮೂಲಕ ವಿಶೇಷ ವ್ಯಾಲೆಂಟೈನ್ಸ್ ಡೇ ಕೊಡುಗೆಯ ಆನಂದ ಪಡೆಯಬಹುದು.

ಜಿಯೋ ವ್ಯಾಲೆಂಟೈನ್ಸ್ ಡೇ ಆಫರ್ :

ವ್ಯಾಲೆಂಟೈನ್ಸ್ ಡೇ ನಾಲ್ಕು ಹೆಚ್ಚುವರಿ ಪ್ರಯೋಜನಗಳನ್ನು ನೀಡಲಿದ್ದು, ಇದರಲ್ಲಿ ಬಳಕೆದಾರರು ಹೆಚ್ಚುವರಿ 12GB 4G ಡೇಟಾ, 4,500 ಅಥವಾ ಅದಕ್ಕಿಂತ ಹೆಚ್ಚಿನ ದರದ ಫ್ಲೈಟ್ ಬುಕಿಂಗ್‌ನಲ್ಲಿ 750 ರೂ. ವರೆಗೆ ವರೆಗೆ ರಿಯಾಯಿತಿ, ಫರ್ನ್ಸ್ ಮತ್ತು ಪೆಟಲ್ಸ್‌ನಿಂದ 799 ರೂ. ಗಳ ಕನಿಷ್ಠ ಆರ್ಡರ್‌ನಲ್ಲಿ 150 ರೂ. ಗಳ ರಿಯಾಯಿತಿ ಹಾಗೂ 199 ಅಥವಾ ಅದಕ್ಕೂ ಹೆಚ್ಚಿನ ಮೌಲ್ಯದ ಆಹಾರ ಖರೀದಿ ಮಾಡಿದರೆ ಮೆಕ್‌ಡೊನಾಲ್ಡ್ಸ್‌ನಲ್ಲಿ 105 ರೂ. ಬೆಲೆಯ ಉಚಿತ ಬರ್ಗರ್‌ ಸಿಗಲಿದೆ.

ಈ ಆಫರ್‌ ರಿಡೀಮ್‌ ಮಾಡುವ ವಿಧಾನ:
• 12GB ಹೆಚ್ಚುವರಿ 4G ಡೇಟಾವನ್ನು ರಿಡೀಮ್ ಮಾಡಲು ಜಿಯೋ ಬಳಕೆದಾರರು ಮೈ ಜಿಯೋ ಆಪ್‌ ನಲ್ಲಿ ‘ವೋಚರ್’ ವಿಭಾಗಕ್ಕೆ ಹೋಗಿ ಪರಿಶೀಲಿಸಬಹುದು. ಅಲ್ಲಿ ಹೆಚ್ಚುವರಿ ಡೇಟಾವು ನಿಮ್ಮ ಅಸ್ತಿತ್ವದಲ್ಲಿರುವ ಪ್ಲ್ಯಾನ್‌ನಂತೆಯೇ ಅದೇ ಮಾನ್ಯತೆಯನ್ನು ಹೊಂದಿರುತ್ತದೆ.

• ನೀವು ಫ್ಲೈಟ್ ಬುಕಿಂಗ್‌ನಲ್ಲಿ 750 ರಿಯಾಯಿತಿ ಪಡೆಯಬೇಕು ಎಂದುಕೊಂಡರೆ ಕೂಪನ್ ಕೋಡ್ ವಿವರಗಳಿಗಾಗಿ ಮೈ ಜಿಯೋ ಆಪ್‌ನಲ್ಲಿರುವ ‘ಕೂಪನ್‌ಗಳು ಮತ್ತು ವಿನ್ನಿಂಗ್ಸ್‌’ ಟ್ಯಾಬ್‌ಗೆ ನ್ಯಾವಿಗೇಟ್ ಮಾಡಬೇಕಾಗುತ್ತದೆ. ನಂತರ ರಿಯಾಯಿತಿಯನ್ನು ಇಕ್ಸಿಗೋ ಆಪ್ ಮೂಲಕ ಪಡೆಯಬಹುದು. ಹಾಗೆಯೇ ಫರ್ನ್ಸ್ ಮತ್ತು ಪೆಟಲ್ಸ್‌ ಮೂಲಕ 150 ರೂ. ಗಳ ಕೂಪನ್ ಪಡೆಯಬೇಕು ಎಂದರೆ ‘ಕೂಪನ್‌ಗಳು ಮತ್ತು ವಿನ್ನಿಂಗ್ಸ್‌’ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಬಹುದು.

•ಇನ್ನು ಮೆಕ್‌ಡೊನಾಲ್ಡ್ಸ್ ಬಳಕೆದಾರರು 200 ರೂ ಅಥವಾ ಅದಕ್ಕಿಂತ ಹೆಚ್ಚಿನ ಆರ್ಡರ್ ಮಾಡಿದರೆ 105 ರೂ. ಮೌಲ್ಯದ ಉಚಿತ ಮೆಕ್‌ಆಲೂ ಟಿಕ್ಕಿ ಅಥವಾ ಚಿಕನ್ ಕಬಾಬ್ ಬರ್ಗರ್ ಅನ್ನು ಪಡೆಯಬಹುದಾಗಿದೆ. ಇದನ್ನು ಸಹ ‘ಕೂಪನ್‌ಗಳು ಮತ್ತು ವಿನ್ನಿಂಗ್ಸ್‌’ ಆಯ್ಕೆಯ ಮೂಲಕವೇ ಪಡೆದುಕೊಳ್ಳಬೇಕಿದೆ.

ಈ ಮೇಲೆ ತಿಳಿಸಿದ ಎಲ್ಲಾ ಆಫರ್‌ 249 ರೂ., 899 ರೂ. ಹಾಗೂ 2,999 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ಗಳ ಮೇಲೆ ಲಭ್ಯವಾಗಲಿದ್ದು, ಫೆಬ್ರವರಿ 10 ಅಥವಾ ನಂತರ ರೀಚಾರ್ಜ್ ಮಾಡುವ ಬಳಕೆದಾರರಿಗೆ ಮಾತ್ರ ಈ ಕೊಡುಗೆ ಸಿಗಲಿದೆ. ಇನ್ನು ಕೂಪನ್‌ಗಳು ರೀಚಾರ್ಜ್ ಮಾಡಿದ 72 ಗಂಟೆಗಳ ಒಳಗೆ ಮೈ ಜಿಯೋ ಆಪ್‌ ಖಾತೆಗೆ ಕ್ರೆಡಿಟ್ ಆಗಲಿದ್ದು, ಈ ಕೂಪನ್‌ಗಳು 30 ದಿನಗಳವರೆಗೆ ಮಾನ್ಯವಾಗಿರುತ್ತವೆ.

ರಿಚಾರ್ಜ್ ಪ್ಲ್ಯಾನ್‌ಗಳು :
• 249 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌
249 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ನಲ್ಲಿ ಬಳಕೆದಾರರು ಪ್ರತಿದಿನ 2GB ಮೊಬೈಲ್ ಡೇಟಾ ಪಡೆಯಬಹುದಾಗಿದ್ದು, ಇದು 23 ದಿನಗಳ ಅವಧಿಗೆ ಮಾನ್ಯವಾಗಿರುತ್ತದೆ. ಈ ಯೋಜನೆಯು ಅನಿಯಮಿತ ಕರೆ ಮತ್ತು ಉಚಿತ ಎಸ್‌ಎಮ್‌ಎಸ್‌ ಪ್ರಯೋಜನ ನೀಡಲಿದೆ.

• 899 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌
899 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ ನಲ್ಲಿ ಬಳಕೆದಾರರು ಒಟ್ಟು 225GB ಡೇಟಾವನ್ನು ಪಡೆಯಬಹುದಾಗಿದೆ. ಇದರೊಂದಿಗೆ ಅನಿಯಮಿತ ಕರೆ ಸೌಲಭ್ಯ ಮತ್ತು ದಿನಕ್ಕೆ 100 ಎಸ್‌ಎಮ್‌ಎಸ್‌ ಅನ್ನು ಕಳುಹಿಸಬಹುದಾಗಿದೆ. ಈ ಪ್ಲ್ಯಾನ್‌ 90 ದಿನಗಳ ಮಾನ್ಯತೆಯನ್ನು ಹೊಂದಿದೆ.

• 2,999 ರೂ. ಗಳ ರೀಚಾರ್ಜ್ ಯೋಜನೆ
2,999 ರೂ. ಗಳ ರೀಚಾರ್ಜ್ ಯೋಜನೆ ಮೂಲಕ ಗ್ರಾಹಕರು ದಿನವೂ 2.5GB ಡೇಟಾವನ್ನು ಪಡೆಯಬಹುದಾಗಿದ್ದು, ಇದರೊಂದಿಗೆ ಅನಿಯಮಿತ ಕರೆ ಹಾಗೂ ಎಸ್‌ಎಮ್‌ಎಸ್‌ ಸೇವೆ ಸಹ ಲಭ್ಯವಿರಲಿದೆ. ಇದರ ಹೊರತಾಗಿ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ ಸಹ ಲಭ್ಯವಾಗಲಿದ್ದು, ಈ ಪ್ಲ್ಯಾನ್‌365 ದಿನಗಳ ಮಾನ್ಯತೆಯನ್ನು ಹೊಂದಿದೆ.

ಈ ಮೇಲೆ ತಿಳಿಸಿದ ಎಲ್ಲಾ ಆಫರ್‌ 249 ರೂ., 899 ರೂ. ಹಾಗೂ 2,999 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ ಖ್ಯಾತ ಟೆಲಿಕಾಂ ಕಂಪನಿಯಾಗಿರುವ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಲಭ್ಯವಾಗಲಿದೆ.

Leave A Reply