Tech Tips : ನಿಮ್ಮ ಸ್ಮಾರ್ಟ್ ಫೋನಿನ ಇಂಟರ್ನೆಟ್ ಹೈ-ಸ್ಪೀಡ್ ಆಗ್ಬೇಕಾ ? ಮೊಬೈಲ್ಗೆ ಸಿಮ್ ಕಾರ್ಡ್ ಈ ರೀತಿ ಹಾಕಿ
ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಅಂದ್ರೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳು ಕ್ಷಣಮಾತ್ರದಲ್ಲಿ ಸಿಗುತ್ತದೆ. ಸ್ಮಾರ್ಟ್ ಫೋನ್ ಬಂದ ಮೇಲಂತು ಎಲ್ಲರೂ ಅದರ ಮೋಹಕ್ಕೆ ಒಳಗಾಗಿದ್ದಾರೆ. ದಿನಪೂರ್ತಿ ಅದರಲ್ಲೇ ಸಮಯ ಕಳೆಯುತ್ತಾರೆ. ಆದರೆ ಈ ಸ್ಮಾರ್ಟ್ ಫೋನ್ ನಲ್ಲೂ ಒಂದು ಸಮಸ್ಯೆ ಇದೆ. ಇದು ಮೊಬೈಲ್ ಬಳಕೆದಾರರಿಗೆ ದೊಡ್ಡ ತಲೆನೋವು ಅಂತಾನೇ ಹೇಳ್ಬೋದು. ಅದು ಸ್ಲೋ- ಇಂಟರ್ನೆಟ್. ಸದ್ಯ ದೇಶದಲ್ಲಿ 3G, 4G ಆಗಿ 5G ಕೂಡ ಆರಂಭವಾಗಿದೆ. ಆದರೂ ಕೆಲವರಿಗೆ ಇಂಟರ್ನೆಟ್ ಸಮಸ್ಯೆ ಮಾತ್ರ ಬೆನ್ನು ಬಿಡದೆ ಕಾಡುತ್ತಿರುತ್ತದೆ. ಅನೇಕ ಥರ್ಡ್ ಪಾರ್ಟಿ ಆ್ಯಪ್ ಬಳಸಿಕೊಂಡರೂ ಪ್ರಯೋಜನ ಆಗುವುದಿಲ್ಲ. ಆದರೆ ಸಿಮ್ ಕಾರ್ಡ್ನ ಸಹಾಯದಿಂದ ಕೂಡ ಫೋನಿನ ಇಂಟರ್ನೆಟ್ ವೇಗವನ್ನು ಹೆಚ್ಚಿಸಬಹುದು. ಹೇಗೆ? ನೋಡೋಣ.
ನಿಮ್ಮ ಸ್ಮಾರ್ಟ್ ಫೋನಿನ ಇಂಟರ್ನೆಟ್ ಹೈ-ಸ್ಪೀಡ್ ಆಗ್ಬೇಕು ಅಂದ್ರೆ, ಅದಕ್ಕೆ ನೀವು ನಿಮ್ಮ ಸ್ಮಾರ್ಟ್ಫೋನ್ನ ಸಿಮ್ ಕಾರ್ಡ್ ಬಳಕೆಯ ವಿಧಾನವನ್ನು ಬದಲಾಯಿಸಬೇಕು. ಸ್ಮಾರ್ಟ್ಫೋನ್ ನಲ್ಲಿ ಸಿಮ್ ಕಾರ್ಡ್ ಹಾಕಲು ಒಂದು ಟ್ರೇ ಇರುತ್ತದೆ. ಇದು ಎಲ್ಲರಿಗೂ ಗೊತ್ತಿದೆ. ಅದರಲ್ಲಿ ಎರಡು ಸಿಮ್ ಹಾಕಲು ಜಾಗವಿರುತ್ತದೆ. ನೀವು ಮೊದಲನೇ ಸಿಮ್ ಟ್ರೇ ನಲ್ಲಿ ಯಾವ ಸಿಮ್ ಕಾರ್ಡ್ ಇದೆ ಮತ್ತು ಎರಡನೇ ಟ್ರೇನಲ್ಲಿ ಯಾವ ಸಿಮ್ ಕಾರ್ಡ್ ಇದೆ ಎಂಬುದನ್ನು ಪರಿಶೀಲಿಸಬೇಕು.
ಸ್ಮಾರ್ಟ್ ಫೋನಿನ ಇಂಟರ್ನೆಟ್ ಹೈ-ಸ್ಪೀಡ್ ಆಗಲು, ನೀವು ಮಾಡಬೇಕಾದ ಕೆಲಸ ಏನಪ್ಪಾ ಅಂದ್ರೆ, ನೀವು ಇಂಟರ್ನೆಟ್ ಬಳಕೆಯ ಸಿಮ್ ಕಾರ್ಡ್ ಅನ್ನು ಮೊದಲನೇ ಸಿಮ್ ಟ್ರೇನಲ್ಲಿ ಮತ್ತು ಕರೆಗೆ ಬಳಸುವ ಸಿಮ್ ಕಾರ್ಡ್ ಎರಡನೇ ಟ್ರೇನಲ್ಲಿ ಹಾಕಬೇಕು. ಈ ರೀತಿ ಮಾಡಿದರೆ ನಿಮ್ಮ ಸ್ಮಾರ್ಟ್ ಫೋನ್ ನ ಇಂಟರ್ನೆಟ್ ವೇಗ ಹೆಚ್ಚಾಗುತ್ತದೆ.
ಸಿಮ್ ಟ್ರೇ ಒಂದರಲ್ಲಿ ಡೇಟಾ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಡೇಟಾ ಉತ್ತಮ ಇರುವ ಸಿಮ್ ಟ್ರೇನಲ್ಲಿ ಸಿಮ್ ಕಾರ್ಡ್ ಇಟ್ಟರೆ ನಿಮ್ಮ ಸ್ಮಾರ್ಟ್ ಫೋನ್ ನ ಇಂಟರ್ನೆಟ್ ಹೈ-ಸ್ಪೀಡ್ ಆಗುತ್ತದೆ. ಹಾಗೆಯೇ ಇಂಟರ್ನೆಟ್ ಬಳಸುವ ಸಿಮ್ ನೆಟ್ವರ್ಕ್ APN ಅನ್ನು ಬದಲಾಯಿಸಿ ಕೂಡ ನೆಟ್ವರ್ಕ್ ಸಮಸ್ಯೆಯನ್ನು ದೂರಮಾಡಬಹುದು.
ಇದಿಷ್ಟೇ ಅಲ್ಲದೆ, ಕೆಲವು ಸಿಂಪಲ್ ಟ್ರಿಕ್ಸ್ ಮೂಲಕವೂ ಇಂಟರ್ನೆಟ್ ಸ್ಪೀಡ್ ಹೆಚ್ಚಿಸಬಹುದು. ಹೇಗೆ ಅಂದ್ರೆ, ವಿವಿಧ ಆಪ್ಗಳಲ್ಲಿನ ಸ್ಟೋರೆಜ್ಗಳನ್ನು ಕ್ಲಿಯರ್ ಮಾಡಬೇಕು. ಆದಷ್ಟು ನಿಮ್ಮ ಮೊಬೈಲ್ನಲ್ಲಿ ಸ್ಟೋರೆಜ್ ಖಾಲಿ ಇರುವಂತೆ ನೋಡಿಕೊಳ್ಳಿ. ಆಗ ಮೊಬೈಲ್ ಜೊತೆಗೆ ಇಂಟರ್ನೆಟ್ ಕೂಡ ವೇಗವಾಗುತ್ತದೆ. ಹಾಗೇ ನಿಮ್ಮ ನೆಟ್ವರ್ಕ್ ಸಂಪರ್ಕ LTE ನಲ್ಲಿ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ಈ ಟ್ರಿಕ್ಸ್ ಫಾಲೋ ಮಾಡಿದರೆ ನಿಮ್ಮ ಸ್ಮಾರ್ಟ್ ಫೋನಿನ ಇಂಟರ್ನೆಟ್ ಹೈ-ಸ್ಪೀಡ್ ಆಗುತ್ತದೆ.