ಸೋನಿ ಕಂಪನಿ ಹೊಸ ಫೋನ್ ಲಾಂಚ್ !!!

ಟೆಕ್ ಜಗತ್ತಿನಲ್ಲಿ ತನ್ನ ಹವಾ ಸೃಷ್ಟಿಸಿದ ಸೋನಿ ಕಂಪನಿಯು ಈಗ ಮತ್ತೊಮ್ಮೆ ಧೂಳ್ ಎಬ್ಬಿಸಲು ರೆಡಿಯಾಗಿದೆ. ಸ್ಮಾರ್ಟ್ ಪ್ರಿಯರಿಗೆ, ಖುಷಿಯ ವಿಚಾರ ನೀಡಿದ್ದು, ಸೋನಿಯು ತನ್ನ ಸೋನಿ ಎಕ್ಸ್‌ಪೀರಿಯಾ 1V ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಇದರ ಸ್ಮಾರ್ಟ್ ಲುಕ್, ಸ್ಟೈಲಿಶ್ ಡಿಸೈನ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸೋದಂತು ಖಂಡಿತ. ಈಗಾಗಲೇ ಇದರ ಫೀಚರ್ಸ್‌ ಆನ್‌ಲೈನ್‌ನಲ್ಲಿ ಲೀಕ್‌ ಆಗಿದ್ದು, ಕಾರ್ಯಕ್ಷತೆ ಹಾಗೂ ಕ್ಯಾಮೆರಾ ಸೆಟ್‌ಅಪ್‌ ವಿನ್ಯಾಸ ಸಾಕಷ್ಟು ಗಮನಸೆಳೆದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಏನೆಲ್ಲಾ ಫೀಚರ್ಸ್‌ ಒಳಗೊಂಡಿರಲಿದೆ ಎಂಬ ಮಾಹಿತಿ ಇಲ್ಲಿದೆ.

ಸೋನಿ ಎಕ್ಸ್‌ಪೀರಿಯಾ 1V ಸ್ಮಾರ್ಟ್‌ಫೋನ್‌ 6.5-ಇಂಚಿನ QHD+ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಈ ಡಿಸ್‌ಪ್ಲೇ 1Hz ನಿಂದ 120 Hz ವರೆಗಿನ ವೇರಿಯಬಲ್ ರಿಫ್ರೆಶ್ ರೇಟ್‌ ಬೆಂಬಲಿಸುವ ಸಾಧ್ಯತೆಯಿದೆ. ಜೊತೆಗೆ ಈ ಡಿಸ್‌ಪ್ಲೇ E6 ಅಮೋಲೆಡ್‌ ಡಿಸ್‌ಪ್ಲೇ ಆಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಸೋನಿ ಎಕ್ಸ್‌ಪೀರಿಯಾ 1V ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8 Gen2 SoC ಪ್ರೊಸೆಸರ್‌ ಹೊಂದಿದೆ.

ಇದು ಆಂಡ್ರಾಯ್ಡ್‌ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಹಾಗೆಯೇ 12 GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಮೆಮೊರಿ ಕಾರ್ಡ್‌ ಬೆಂಬಲದೊಂದಿಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ಸಹ ಹೊಂದಿರುವ ಸಾಧ್ಯತೆಯಿದೆ.

ಸೋನಿ ಎಕ್ಸ್‌ಪೀರಿಯಾ 1V ಯ ಕ್ಯಾಮೆರಾ ಸೆಟ್‌ಅಪ್‌ ಅನ್ನು ನೋಡುವುದಾದರೆ, ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಬಹುದು. ಇದರಲ್ಲಿ ಮುಖ್ಯ ಕ್ಯಾಮೆರಾ 48ಮೆಗಾಪಿಕ್ಸೆಲ್‌, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಅಲ್ಟ್ರಾವೈಡ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

ಸೋನಿ ಎಕ್ಸ್‌ಪೀರಿಯಾ 1V ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 3.5mm ಜ್ಯಾಕ್, ಮೈಕ್ರೋ SD ಸ್ಲಾಟ್, USB 4.0, IP68 ಪ್ರಮಾಣೀಕರಣವನ್ನು ಹೊಂದಿದೆ ಎನ್ನಲಾಗಿದೆ. ಹೆಡ್‌ಫೋನ್ ಜ್ಯಾಕ್, ಶಟರ್ ಬಟನ್ ಮತ್ತು ಇನ್‌ಬಿಲ್ಟ್ ಫಿಂಗರ್‌ಪ್ರಿಂಟ್ ರೀಡರ್ ಹೊಂದಿರುವ ಪವರ್ ಬಟನ್ ಡಿವೈಸ್‌’ನಿಂದ ಮಾರ್ಪಾಡಾಗಿದೆ. ವೇಗದ ಚಾರ್ಜಿಂಗ್‌ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

ಸೋನಿ ಕಂಪೆನಿಯ ಸೋನಿ ಎಕ್ಸ್‌ಪೀರಿಯಾ 1V ಸ್ಮಾರ್ಟ್‌ಫೋನ್‌, ಸ್ಮಾರ್ಟ್ ಪ್ರಿಯರಲ್ಲಂತು ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಈ ಸ್ಮಾರ್ಟ್‌ಫೋನ್‌ ತನ್ನ ಸೊಗಸಾದ ನೋಟ, ಶಕ್ತಿಯುತ ಕಾರ್ಯಕ್ಷಮತೆ ಮತ್ತು ಪ್ರಭಾವಶಾಲಿ ಛಾಯಾಗ್ರಹಣ ಸಾಮರ್ಥ್ಯದಿಂದ ಮಾರುಕಟ್ಟೆಯಲ್ಲಿ ತನ್ನ ವೈಬ್ ಸೃಷ್ಟಿಸುವ ಸಾದ್ಯತೆಯಿದೆ. ಒಂದು ಕಾಲದಲ್ಲಿ ತನ್ನ ಮೊಬೈಲ್‌ ಫೋನ್‌ಗಳ ಮೂಲಕ ಹವಾ ಸೃಷ್ಟಿಸಿದ ಸೋನಿ ಕಂಪೆನಿ ಮತ್ತೊಮ್ಮೆ ತನ್ನ ಗತವೈಭವಕ್ಕೆ ಮರಳುವ ಸೂಚನೆಯನ್ನು ನೀಡಿದೆ. ಈ ನಿರೀಕ್ಷೆ ನಿಜವಾಗಲಿದೆಯಾ ಅನ್ನೊದು ಸ್ಮಾರ್ಟ್‌ಫೋನ್‌ ಲಾಂಚ್‌ ಆದ ನಂತರ ತಿಳಿಯಲಿದೆ.

Leave A Reply

Your email address will not be published.