ಆ ಸ್ತ್ರೀವಾದಿಗಳಿಗೆ ಸದಾ ನನ್ನ ತೊಡೆಯ ಮೇಲೆಯೇ ಕಣ್ಣಿತ್ತು! ‘ತೊಡೆಗಳ ರಾಣಿ’ ಎಂದು ನನಗೆ ಹೆಸರಿಟ್ಟಿದ್ದರು: ಭಯಾನಕ ಸತ್ಯ ಬಿಚ್ಚಿಟ್ಟ ರವೀನಾ ಟಂಡನ್!!

ಒಂದೊಮ್ಮೆ ಚಿತ್ರರಂಗದಲ್ಲಿ ಮಿಂಚಿದ್ದ ಹಾಗೂ ಸದ್ಯ ಕನ್ನಡದ ಕೆಜಿಎಫ್ನಲ್ಲಿ ಸಖತ್ ಮಿಂಚಿದ ನಟಿ ರವೀನಾ ಟಂಡನ್​ ತಮಗಾಗಿರುವ ಹಲವಾರು ಕಹಿ ಅನುಭವಗಳನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದು, ಅದರಲ್ಲಿ ಸ್ತ್ರೀವಾದಿಗಳಿಂದ ಆಗಿರುವ ನೋವಿನ ಕುರಿತೂ ಹೇಳಿಕೊಂಡಿದ್ದಾರೆ. ಹಾಗಿದ್ರೆ ರವೀನಾ ಅವರಿಗಾದ ನೋವೇನು ಗೊತ್ತಾ?

80-90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದ ರವೀನಾ ಟಂಡನ್​ ಈಗ ಬಹಳ ಸುದ್ದಿಯಲ್ಲಿದ್ದಾರೆ. ಬಾಲಿವುಡ್​ ಮಾತ್ರವಲ್ಲದೇ ಕನ್ನಡ ಚಿತ್ರರಂಗದಲ್ಲಿಯೂ ಬೇಡಿಕೆಯ ನಟಿಯಾಗಿರುವ ರವೀನಾ, ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಹಲವಾರು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ‘ಉಪೇಂದ್ರ’ ಸಿನಿಮಾದಲ್ಲಿ ಕೀರ್ತಿ ಆಗಿ ಮೋಡಿ ಮಾಡಿದ ರವೀನಾ, ನಂತರ ಕೆಜಿಎಫ್​-2 ಚಿತ್ರದಲ್ಲಿ ರಮಿಕಾ ಸೇನ್ ಆಗಿ ಕನ್ನಡಿಗರ ಹೃದಯ ಗೆದ್ದವರು. ಆದರೆ ರವೀನಾ ಅವರ ಸಿನಿ ಹಾದಿ ಸುಲಭವಾಗಿರಲಿಲ್ಲ.

ಈ ಹಿಂದೆ ಇದರ ಬಗ್ಗೆ ಮಾತನಾಡಿದ ಅವರು ಬಾಡಿ ಶೇಮಿಂಗ್, ಸ್ವಿಮ್ ಸೂಟ್ ಧರಿಸುವುದು, ಕಿಸ್ಸಿಂಗ್ ದೃಶ್ಯಗಳ ಬಗ್ಗೆ ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದರು. ತಾವು ಯಾವುದೇ ಸಿನಿಮಾಗಳಲ್ಲಿ ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿಕೊಂಡಿಲ್ಲ, ಸ್ವಿಮ್ ಸೂಟ್ ಧರಿಸಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಈ ಕಾರಣಕ್ಕಾಗಿ ಸಿನಿಮಾರಂಗದಲ್ಲಿ ಆಕೆಯನ್ನು ದುರಹಂಕಾರಿ ಎಂದು ಕರೆಯುತ್ತಿದ್ದರು ಎಂದು ರವೀನಾ ಟಂಡನ್ ಇತ್ತೀಚೆಗೆ ಹೇಳಿದ್ದರು.

ಇದೀಗ ಅವರು ಇನ್ನೊಂದು ರೀತಿಯಲ್ಲಿ ತಮಗಾಗಿರುವ ಬಾಡಿ ಶೇಮಿಂಗ್ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಅದೂ ಸ್ತ್ರೀವಾದಿಗಳು ಎಂದು ಪೋಸ್​ ಕೊಡುತ್ತಿರುವ ಕೆಲ ಮಹಿಳೆಯರಿಂದಲೇ ಹೇಗೆ ತಮಗೆ ಬಾಡಿ ಶೇಮಿಂಗ್​ ಆಗಿತ್ತು ಎಂಬ ಬಗ್ಗೆ ನಟಿ ತೆರೆದಿಟ್ಟಿದ್ದಾರೆ. ಅದರಿಂದ ತಮ್ಮ ಸಿನಿ ಪಯಣ ಹೇಗೆ ಹಾಳಾಯಿತು ಎನ್ನುವುದನ್ನೂ ಅವರು ಹೇಳಿದ್ದಾರೆ. ಅವರ ಸಿಟ್ಟು ಇರುವುದು ಅಂದಿನ ಕೆಲ ಗಾಸಿಪ್ ಮ್ಯಾಗಜೀನ್‌ಗಳ ಬಗ್ಗೆ. ’90ರ ದಶಕದ ಗಾಸಿಪ್ ಮ್ಯಾಗಜೀನ್‌ಗಳು ಹೇಗೆ ನನ್ನನ್ನು ತೀರಾ ಕೆಟ್ಟದ್ದಾಗಿ ನಡೆಸಿಕೊಂಡವು. ಅದರಲ್ಲಿಯೂ ಆ ಮ್ಯಾಗಜೀನ್​ಗಳಲ್ಲಿ ಮಹಿಳೆಯರಿಗೇ ಕೆಲಸ ಮಾಡುತ್ತಿದ್ದುದು ಇನ್ನೂ ವಿಚಿತ್ರ. ಆ ಮಹಿಳೆಯರಲ್ಲಿ ಹಲವರು ಸ್ತ್ರೀವಾದಿಗಳು ಎಂಬ ಹೆಸರನ್ನೂ ಪಡೆದಿದ್ದರು. ಆದರೆ ಅಂದು ನನ್ನನ್ನು ಸೇರಿದಂತೆ ಯಾವ ನಟಿಯರನ್ನೂ ಕೆಟ್ಟದ್ದಾಗಿ ಚಿತ್ರಿಸುವಲ್ಲಿ ಅವರು ಒಂದಿನಿತೂ ಹಿಂದೆ ಬಿದ್ದಿಲ್ಲ’ ಎಂದಿದ್ದಾರೆ

ನಾನು ಹದಿನಾರೂವರೆ ವರ್ಷಕ್ಕೆ ಚಿತ್ರರಂಗಕ್ಕೆ ಬಂದವಳು. ಆಗ ದಪ್ಪಗಿದ್ದೆ. ಆದ್ದರಿಂದ ಕೆಲವರು ನನ್ನ ತೊಡೆಗಳ ಬಗ್ಗೆ ಟೀಕಿಸುತ್ತಿದ್ದರು. ಆಗ ಮಹಿಳೆಯರಿಗೆ ಬೆಂಬಲವಾಗಿ ನಿಲ್ಲುವ ಬದಲು ಅವರೇ ಇನ್ನಷ್ಟು ಸೇರಿಸುತ್ತಿದ್ದರು. ಮ್ಯಾಗಜೀನ್ ಅಂಕಣಗಳಿಂದ ನನ್ನ ಕರಿಯರ್ (Career) ಹಾಳಾಗುತ್ತಿತ್ತು. ನನ್ನ ಬಗ್ಗೆ ಏನೇನೋ ಗಾಸಿಪ್​ ಹಬ್ಬಿಸುತ್ತಿದ್ದರು. ನಂತರ ನಾನು ವಿಚಾರಿಸಿದಾಗ ಕ್ಷಮೆ ಕೋರುತ್ತಿದ್ದರು. ಅದನ್ನು ಚಿಕ್ಕದಾಗಿ ಯಾವುದೋ ಪುಟದಲ್ಲಿ ಹಾಕುತ್ತಿದ್ದರು ಅಷ್ಟರಲ್ಲಿ ಅಬ್ಬರದ ಮುಖ್ಯಾಂಶಗಳ ಸುದ್ದಿ ಸದ್ದು ಮಾಡಿಬಿಟ್ಟಿರುತ್ತಿತ್ತು. ಇದೇ ಕಾರಣಕ್ಕೆ ಮದುವೆಯ ನಂತರ ಬಹಳ ದಿನಗಳ ಕಾಲ ಚಿತ್ರರಂಗದಿಂದ ದೂರವೇ ಉಳಿದುಬಿಟ್ಟೆ ಎಂದಿದ್ದಾರೆ.

ಆ ಬಗ್ಗೆ ಇನ್ನಷ್ಟು ಹೇಳಿರುವ ರವೀನಾ, ಅಲ್ಲಿ ಪತ್ರಕರ್ತೆಯರು ಹೆಂಗಸರ ಶತ್ರುಗಳು, ಹೆಂಗಸರ ದೇಹವನ್ನು ಅವಮಾನಿಸುವವರು, ಒಬ್ಬರನ್ನು ಕೆಳಗಿಳಿಸಿ ಮತ್ತೊಬ್ಬರನ್ನು ಕರೆತರಲು ಬೇಕಾದದ್ದನೆಲ್ಲಾ ಮಾಡುತ್ತಿದ್ದರು. ಆಗಲೂ ಸ್ತ್ರೀವಾದಿಗಳು ಎಂದು ಪೋಸ್​ ಕೊಡುತ್ತಿದ್ದ ಅವರು, ಇಂದು ಕೂಡ ದೊಡ್ಡ ಸ್ತ್ರೀವಾದಿಗಳು ಎಂದು ಖ್ಯಾತರಾಗಿದ್ದಾರೆ. ಇದೆಲ್ಲಾ ಹೇಗೆ ಸಾಧ್ಯ ಎಂದು ಅಚ್ಚರಿ ಆಗುತ್ತದೆ. ಅವರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡರು. ನನ್ನ ತೊಡೆಗಳ ಮೇಲೆ ಅವರ ಕಣ್ಣು ನೆಟ್ಟಿತ್ತು. ನನ್ನನ್ನು ತೊಡೆಗಳ ರಾಣಿ (Thai Queen)ಎನ್ನುತ್ತಿದ್ದರು. ಇದೂ ಸಾಲದು ಎಂಬುದಕ್ಕೆ ನನಗೆ ಸಾಕಷ್ಟು ಅಡ್ಡ ಹೆಸರುಗಳನ್ನು ಇಟ್ಟಿದ್ದರು. ಬಿಚ್ಚಮ್ಮ, ತೊಡೆಗಳ ರಾಣಿ, ಅದು ಇದು ಎಂದೆಲ್ಲಾ ಹೇಳುತ್ತಿದ್ದರು ಎಂದು ದುಃಖಿಸಿದ್ದಾರೆ.

Leave A Reply

Your email address will not be published.