Poco X5 Pro : ಇಂದಿನಿಂದ ಮಾರುಕಟ್ಟೆಯಲ್ಲಿ ಹೊಸ ಪೋಕೋ ಸ್ಮಾರ್ಟ್ ಫೋನ್ ಲಭ್ಯ! 108MP ಕ್ಯಾಮೆರಾದ ಈ ಫೋನ್ ಬೆಲೆ ಎಷ್ಟು?

Share the Article

ಹೇಳಿ ಕೇಳಿ ಇದು ಡಿಜಿಟಲ್ ಯುಗ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರ ಕೈಯಲ್ಲಿ ಸ್ಮಾರ್ಟ್ ಫೋನ್ ಗಳು ಹರಿದಾಡಿ ಸಂಚಲನ ಮೂಡಿಸುತ್ತಿದೆ. ಅದರಲ್ಲಿಯೂ ದಿನದಿಂದ ದಿನಕ್ಕೆ ಹೊಸ ಹೊಸ ವೈಶಿಷ್ಟ್ಯದ ಮೂಲಕ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟು ಟ್ರೆಂಡ್ ಸೃಷ್ಟಿಸುತ್ತಿವೆ.

ಇತ್ತೀಚೆಗಷ್ಟೇ ಪೋಕೋ ಸಂಸ್ಥೆ ಸ್ಮಾರ್ಟ್ ಫೋನ್ ಒಂದನ್ನು ಅನಾವರಣಗೊಳಿಸಿದ್ದು ಎಲ್ಲೆಡೆ ಭಾರಿ ಬೇಡಿಕೆ ಹಾಗೂ ನಿರೀಕ್ಷೆ ಹುಟ್ಟುಹಾಕಿದೆ.ಸದ್ಯ ಈ ಸ್ಮಾರ್ಟ್ ಫೋನ್ ಭಾರತಕ್ಕೆ ಎಂಟ್ರಿ ಕೊಟ್ಟಿದ್ದು ಇಂದಿನಿಂದ ಮಾರಾಟ ಕೂಡ ಆಗುತ್ತಿದೆ. ಪೋಕೋ X5 ಪ್ರೊ (Poco X5 Pro) ಸ್ಮಾರ್ಟ್ಫೋನ್ ತನ್ನ ವಿಶೇಷತೆಗಳ ಮೂಲಕ ಜನರ ಮನಸೆಳೆಯಲು ಮುಂದಾಗಿದ್ದು, ಆಕರ್ಷಕ ಫೀಚರ್ ಜೊತೆಗೆ ತನ್ನ ಕ್ಯಾಮೆರಾದಿಂದಲೇ ಟೆಕ್ ಪ್ರಿಯರನ್ನು ದಂಗಾಗಿಸಿದ ಈ ಫೋನ್ ಇಂದಿನಿಂದ ಖರೀದಿಗೆ ಲಭ್ಯವಾಗಲಿದೆ. ಹಾಗಾದ್ರೆ, ಈ ಸ್ಮಾರ್ಟ್ ಫೋನಿನ ವಿಶೇಷತೆ ಬೆಲೆಯ ಬಗ್ಗೆ ಮಾಹಿತಿ ನಿಮಗಾಗಿ.

ಪೋಕೋ X5 ಪ್ರೊ ಸ್ಮಾರ್ಟ್‌ಫೋನ್‌ ಕ್ಯಾಮರಾ ಫೀಚರ್ ಗಮನಿಸಿದರೆ, ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಮುಂಭಾಗ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇದರ ಮುಖ್ಯ ಕ್ಯಾಮೆರಾ ಬರೋಬ್ಬರಿ 108 ಮೆಗಾಫಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿರಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಕೆಲವೇ ಸ್ಮಾರ್ಟ್ಫೋನ್ಗಳ ಲಿಸ್ಟ್ ನಲ್ಲಿ ಈ ಸ್ಮಾರ್ಟ್ ಫೋನ್ ಕೂಡ ಇದ್ದು, ಅದೇ ರೀತಿ, ಎರಡನೇ ಕ್ಯಾಮೆರಾ 8MP ಅಲ್ಟ್ರಾ-ವೈಡ್ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2MP ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ.

ಈ ಸ್ಮಾರ್ಟ್ ಫೋನ್ ಡಾಲ್ಬಿ ವರ್ಷನ್ 10 ಬಿಟ್ ಸಪೋರ್ಟ್ ಹೊಂದಿದೆ. ಕಾರ್ನಿಂಗ್ ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ಒಳಗೊಂಡಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಆಂಡ್ರಾಯ್ಡ್‌ 13ನಲ್ಲಿ ರನ್‌ ಆಗಲಿದ್ದು , 1080*2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ ಅಮೊಲೆಡ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. 120Hz ಅಡಾಪ್ಟಿವ್ ರಿಫ್ರೆಶ್ ರೇಟ್‌, HDR10+ ಬೆಂಬಲವನ್ನು ಹೊಂದಿದೆ. ದೀರ್ಘ ಸಮಯ ಬಾಳಿಕೆ ಹೊಂದಿರುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು ಇದಕ್ಕೆ ತಕ್ಕಂತೆ 67W ವೇಗದ ಚಾರ್ಜಿಂಗ್ ಬೆಂಬಲವು ಇರಲಿದೆ. ಇದಲ್ಲದೆ 5W ರಿವರ್ಸ್ ಚಾರ್ಜಿಂಗ್ ಸಪೋರ್ಟ್ ಕೂಡ ಇದ್ದು, ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿದ್ದು, ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಹೆಡ್‌ಫೋನ್‌ ಜ್ಯಾಕ್‌ ಅನ್ನು ಒಳಗೊಂಡಿದೆ.

ಸದ್ಯ, ಪೋಕೋ X5 ಪ್ರೊ ಫೋನ್ ದೇಶದಲ್ಲಿ ಒಟ್ಟು ಎರಡು ಆಯ್ಕೆಯಲ್ಲಿ ಮಾರಾಟವಾಗುತ್ತಿದೆ. ಇದರ 6GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯಕ್ಕೆ 22,999 ರೂ. ಹೊಂದಿದ್ದು, ಅದೇ ರೀತಿಯಲ್ಲಿ 8GB RAM + 256GB ಆಯ್ಕೆಗೆ 24,999 ರೂ. ನಿಗದಿ ಮಾಡಲಾಗಿದೆ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ ನಲ್ಲಿ ಇಂದು ಖರೀದಿಗೆ ಲಭ್ಯವಾಗಲಿದೆ. ಇದಲ್ಲದೆ, ಈ ಸ್ಮಾರ್ಟ್ ಫೋನ್ ಖರೀದಿ ಮಾಡುವವರಿಗೆ ಆಫರ್ ಕೂಡ ಲಭ್ಯವಿದೆ. ಮೊದಲ ಸೇಲ್ ಪ್ರಯುಕ್ತ ಐಸಿಐಸಿಐ ಕಾರ್ಡ್ ಮೂಲಕ ಖರೀದಿ ಮಾಡಿದಲ್ಲಿ 2,000 ರೂ. ಗಳ ಡಿಸ್ಕೌಂಟ್ ಆಫರ್ ಕೂಡ ಲಭ್ಯವಿದೆ ಎನ್ನಲಾಗಿದೆ.

Leave A Reply