Interesting Facts : ಪಕ್ಷಿಗಳು ವಿದ್ಯುತ್ ತಂತಿಗಳ ಮೇಲೆ ಕುಳಿತಾಗ ಕರೆಂಟ್ ಹೊಡೆಯದಿರಲು ಕಾರಣವೇನು?
ಸಾಮಾನ್ಯವಾಗಿ ವಿದ್ಯುತ್ ತಂತಿಗಳ ಮೇಲೆ ಪಕ್ಷಿಗಳು ಕುಳಿತುಕೊಳ್ಳುವುದು ಎಲ್ಲರೂ ಗಮನಿಸಿರುತ್ತೀರಿ. ಕೆಲವರಿಗೆ ಪ್ರಶ್ನೆಗಳೂ ಮೂಡಿರಬಹುದು. ಪಕ್ಷಿಗಳಿಗೇಕೆ ಕರೆಂಟ್ ಹೊಡೆಯುವುದಿಲ್ಲ. ಮನುಷ್ಯನಿಗಾದರೆ ಕ್ಷಣಮಾತ್ರದಲ್ಲಿ ಸತ್ತು ಹೋಗುತ್ತಾನೆ ಎಂದು. ಹೌದು, ಮನುಷ್ಯರಿಗೆ ವಿದ್ಯುತ್ ತಗುಲಿದರೆ ಸಾವನ್ನಪ್ಪುತ್ತಾರೆ. ಆದರೆ ಪಕ್ಷಿಗಳಿಗೇಕೆ ಏನೂ ಆಗೋದಿಲ್ಲ. ಅವುಗಳು ವಿದ್ಯುತ್ ತಂತಿಗಳ ಮೇಲೆ ರಾಜಾರೋಷವಾಗಿ ಕುಳಿತಿರುತ್ತವೆ. ಪಕ್ಷಿಗಳು ವಿದ್ಯುತ್ ತಂತಿಗಳ ಮೇಲೆ ಕುಳಿತರೂ ಕರೆಂಟ್ ಏಕೆ ಹೊಡೆಯುವುದಿಲ್ಲ ? ಈ ಪ್ರಶ್ನೆಗೆ ವೈಜ್ಞಾನಿಕ ಕಾರಣ ಇಲ್ಲಿದೆ.
ಪಕ್ಷಿಗಳು ವಿದ್ಯುತ್ ತಂತಿಗಳ ಮೇಲೆ ಕುಳಿತರೂ ಕರೆಂಟ್ ಏಕೆ ಹೊಡೆಯುವುದಿಲ್ಲ ಅಂದ್ರೆ, ಪಕ್ಷಿಗಳ ರೆಕ್ಕೆ ಹಾಗೂ ಕಾಲುಗಳು ವಿದ್ಯುತ್ ವಿರೋಧಿಸುವ ಗುಣಲಕ್ಷಣ ಹೊಂದಿರುತ್ತವೆ. ಅಂದ್ರೆ ಪಕ್ಷಿಗಳ ರೆಕ್ಕೆ ಹಾಗೂ ಕಾಲುಗಳ ಭಾಗದಲ್ಲಿ ವಿದ್ಯುತ್ ಸಂಚಾರ ಆಗುವುದಿಲ್ಲ. ವಿದ್ಯುತ್ ಸಂಚಾರ ಆಗಲು ಅದರಲ್ಲಿನ ಗುಣಲಕ್ಷಣಗಳು ತಡೆಯನ್ನೊಡ್ಡುತ್ತವೆ. ಹಾಗಾಗಿ ಅವುಗಳಿಗೆ ಕರೆಂಟ್ ಶಾಕ್ ಹೊಡೆಯುವುದಿಲ್ಲ. ಆದರೆ ಪಕ್ಷಿಗಳು ಸಂಪೂರ್ಣವಾಗಿ ವಿದ್ಯುತ್ ನಿರೋಧಕವೂ ಅಲ್ಲ.
ಅಲ್ಲದೆ, ಪಕ್ಷಿಗಳಿಗೆ ವಿದ್ಯುತ್ ತಗುಲದೆ ಇರುವುದಕ್ಕೆ ಇನ್ನೊಂದು ಕಾರಣವಿದೆ. ವಿದ್ಯುತ್ ಸಂಚಾರವಿರುವ ಎರಡು ವಿದ್ಯುತ್ ತಂತಿಗಳ ಮಧ್ಯೆ ಅಂತರ ಇರುತ್ತದೆ. ಇದರಿಂದ ಒಂದು ತಂತಿಯಲ್ಲಿನ ವಿದ್ಯುತ್ ತನ್ನ ಪಕ್ಕದಲ್ಲಿರುವ ಇನ್ನೊಂದು ತಂತಿಗೆ ಪ್ರವಹಿಸಲು ಸಾಧ್ಯವಾಗುವುದಿಲ್ಲ. ಈ ಅಂತರವೇ ಒಂದು ಸುರಕ್ಷತೆಯ ತಾಣವಾಗಿ ಮಾರ್ಪಡುವುದರಿಂದ ಪಕ್ಷಿಗಳಿಗೆ ವಿದ್ಯುತ್ ತಗಲುವುದಿಲ್ಲ.
ವಿದ್ಯುತ್ ನಲ್ಲಿ ಎಸಿ ಹಾಗೂ ಡಿಸಿ ಎಂಬ ಎರಡು ವಿಧಗಳಿವೆ. ಎಸಿ ವಿದ್ಯುತ್ ಎಂಬುದು ಪ್ರತಿ ಕ್ಷಣ ತನ್ನ ದಿಕ್ಕನ್ನು ಬದಲಿಸುತ್ತ ಸಂಚರಿಸುವ ಶಕ್ತಿಯಾಗಿದೆ. ಇದರಿಂದ ಪಕ್ಷಿಗಳಿಗೆ ಹಾನಿ ಉಂಟಾಗುತ್ತದೆ. ಇನ್ನು ಡಿಸಿ ಕರೆಂಟ್ ಒಂದೇ ದಿಕ್ಕಿನಲ್ಲಿ ಪ್ರವಹಿಸುವ ವಿದ್ಯುತ್ ಆಗಿದೆ. ಇದು ಪಕ್ಷಿಗೆ ತಗುಲಿದರೆ ಪಕ್ಷಿ ಸುಟ್ಟು ಕರಕಲಾಗುತ್ತದೆ. ಅಥವಾ ಸತ್ತು ಹೋಗುತ್ತದೆ.