ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ಪ.ಜಾ.,ಪ.ಪಂ.,ಅಲ್ಪ ಸಂಖ್ಯಾತ ವರ್ಗದ ಅಭ್ಯರ್ಥಿಗಳಿಗೆ ಉಚಿತ ತರಬೇತಿ | ಅರ್ಜಿ ಆಹ್ವಾನ
2022-23ನೇ ಸಾಲಿಗೆ ಭಾರತೀಯ ಸೇನೆ ಭದ್ರತಾ ಪಡೆ ರಾಜ್ಯ ಪೊಲೀಸ್ ಸೇವೆ/ ಅಗ್ನಿವೀರ್ ಮೊದಲಾದ ಸಮವಸ್ತ್ರ(Uniform ಸೇವೆಗಳಿಗೆ ಸೇರ ಬಯಸುವ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಅಲ್ಪಸಂಖ್ಯಾತ ವರ್ಗದ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ ಪ್ರಕಟಿಸಲಾಗಿದೆ. ಈ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ಧತೆಯ ಕುರಿತಂತೆ 3 ತಿಂಗಳುಗಳ ಕಾಲ ಉಚಿತವಾಗಿ ವಸತಿಯುತ ದೈಹಿಕ ಸಾಮರ್ಥ್ಯ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ನೀಡುವ ಕುರಿತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಈ ಕಾರ್ಯಕ್ರಮದಡಿ ಅರ್ಜಿ ಸಲ್ಲಿಸಲು ಸಮಾಜ ಕಲ್ಯಾಣ ಇಲಾಖೆಯ ವೆಬ್ಸೈಟ್ www.sw.kar.nic.in ರಲ್ಲಿ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಕೆಳಗೆ ಸೂಚಿಸಿರುವ ಇ-ಮೇಲ್ ವಿಳಾಸಕ್ಕೆ petcuniformservices@gmail.com ಕಳುಹಿಸಬೇಕು. ಇದರ ಜೊತೆಗೆ ಅರ್ಜಿ ಸಲ್ಲಿಸಲು 15.02.23 ಕೊನೆಯ ದಿನವಾಗಿದ್ದು, ಈ ಕುರಿತ ಹೆಚ್ಚಿನ ಮಾಹಿತಿ ಪಡೆಯಲು www.sw.kar.nic.in ಸಂಪರ್ಕಿಸಬಹುದಾಗಿದ್ದು, ಇದರ ಜೊತೆಗೆ Helpline No:080 22207784 ನಂಬರ್ ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.