ಗ್ಯಾಸ್ ಸ್ಟವ್ ನಿಷೇಧಕ್ಕೆ ಒತ್ತಾಯ ! ಅಸಲಿ ಕಾರಣ ಇಲ್ಲಿದೆ!

U.S. ಗ್ರಾಹಕ ಉತ್ಪನ್ನ ಸುರಕ್ಷತಾ ಆಯೋಗವು (CPSC) ಗ್ಯಾಸ್ ಸ್ಟೌವ್‌ಗಳಿಂದ ಉಂಟಾಗುವ ಒಳಾಂಗಣ ಮಾಲಿನ್ಯ ಹಾಗೂ ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ವರದಿ ಮಾಡಿದ್ದು, ಇದು ಇತ್ತೀಚೆಗೆ ಹೆಚ್ಚಿನ ಚರ್ಚೆಗೆ ಕಾರಣವಾಗಿತ್ತು. ಹಾಗೆಯೇ ಮನೆಗಳಲ್ಲಿ ಬಳಸುವ ಗ್ಯಾಸ್ ಸ್ಟೌವ್‌ಗಳನ್ನು ಪರಿಶೀಲನೆ ನಡೆಸಲಾಗಿತ್ತು. ಸದ್ಯ ಆರೋಗ್ಯ ಹಾಗೂ ಪರಿಸರಕ್ಕೆ ಗ್ಯಾಸ್ ಸ್ಟೌವ್‌ಗಳು ಹಾನಿಯನ್ನುಂಟು ಮಾಡುತ್ತವೆ. ಇದರಿಂದಾಗಿ ಸ್ಟೌವ್‌ ನಿಷೇಧಿಸಬೇಕು ಎಂಬ ಕೂಗು ಕೇಳುತ್ತಿದೆ.

ಈ ಹಿನ್ನೆಲೆಯಲ್ಲಿ ಕೆಲವು ನಗರಗಳು ಹಾಗೂ ದೇಶಗಳಲ್ಲಿ ಗ್ಯಾಸ್ ಸ್ಟೌವ್‌ಗಳ ಮೇಲೆ ನಿಷೇಧವನ್ನು ಹೇರಿವೆ. ಗ್ಯಾಸ್ ಕಾರ್ಬನ್ ಮಾನಾಕ್ಸೈಡ್, ನೈಟ್ರೋಜನ್ ಡೈಆಕ್ಸೈಡ್ ಮತ್ತು ಅಸುರಕ್ಷಿತವೆನಿಸಿದ ವಸ್ತುಗಳನ್ನು ಬಿಡುಗಡೆ ಮಾಡುತ್ತವೆ.
ಇದರಿಂದ ಹೃದಯರಕ್ತನಾಳದ ಸಮಸ್ಯೆಗಳು, ಕ್ಯಾನ್ಸರ್ ಎದುರಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಅಲ್ಲದೆ, ಮಕ್ಕಳಲ್ಲಿ ಜ್ವರ, ಅಸ್ತಮಾ ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಉಲ್ಭಣಗೊಳ್ಳುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ಹಾಗೂ ಸಾರ್ವಜನಿಕದಿಂದ ಉಂಟಾಗಿರುವ ಒತ್ತಡಗಳನ್ನು ಗಮನಿಸಿ, ಅಮೇರಿಕನ್ ಮೆಡಿಕಲ್ ಅಸೋಸಿಯೇಷನ್ ಈ ನಿರ್ಣಯವನ್ನು ಅಂಗೀಕರಿಸಲು ಪ್ರೇರೇಪಿಸಿದೆ. ಅಡುಗೆ ಮನೆಯಲ್ಲಿನ ಗ್ಯಾಸ್ ಸ್ಟೌವ್‌ಗಳ ಬಳಕೆಯಿಂದ ಒಳಾಂಗಣ ಸಾರಜನಕ ಡೈಆಕ್ಸೈಡ್ ಮಟ್ಟಗಳಿಂದ ಅಸ್ತಮಾ ಹೆಚ್ಚಾಗುತ್ತದೆ ಎಂಬುದನ್ನು ಅಂಗೀಕರಿಸಿದೆ.

ವೋಕ್ಸ್‌ನ ವರದಿ ಪ್ರಕಾರ, ಕುಕ್ಕರ್ ಅಥವಾ ಓವನ್ ಅನ್ನು ಆನ್ ಮಾಡಿದಾಗ ಅದು ಶುದ್ಧ ನೈಸರ್ಗಿಕ ಅನಿಲ ವನ್ನು ಬಿಡುಗಡೆ ಮಾಡುತ್ತದೆ. ಆದರೆ ಗ್ಯಾಸ್ ಸ್ಟೌವ್ ಅನ್ನು ಆನ್ ಮಾಡಿದಾಗ ಮಾನಾಕ್ಸೈಡ್ ಮತ್ತು ಫಾರ್ಮಾಲ್ಡಿಹೈಡ್‌ನಂತಹ ಇತರ ಮಾಲಿನ್ಯಕಾರಕಗಳನ್ನು ಬಿಡುಗಡೆ ಮಾಡುತ್ತದೆ ಎನ್ನಲಾಗಿದೆ.

ಇದಕ್ಕೆ ಪರಿಹಾರವಾಗಿ, ಪೆಟ್ರೋಲ್ ಸ್ಟೌವ್ ಬಳಕೆ ಇಲ್ಲದಿದ್ದರೆ ಆರೋಗ್ಯ ಸಮಸ್ಯೆ ಉಂಟಾಗುವುದನ್ನು ತಪ್ಪಿಸಬಹುದು ಎಂದು ವರದಿ ತಿಳಿಸಿದೆ. ಅಡುಗೆ ಮಾಡುವ ಸಮಯದಲ್ಲಿ ಸಾಕಷ್ಟು ಗಾಳಿಯ ಓಡಾಟವಿಲ್ಲದಿದ್ದರೆ ತೀವ್ರವಾದ ಆಸ್ತಮಾಕ್ಕೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಆಸ್ತಮಾ ಸಮಸ್ಯೆಗೆ ಪರಿಹಾರವಾಗಿ, ಅಡುಗೆ ಮಾಡುವ ಸಮಯದಲ್ಲಿ ವೆಂಟಿಲೇಟರ್ ಫ್ಯಾನ್ ಅನ್ನು ಆನ್ ಮಾಡುವುದು ಅಥವಾ ವಿಂಡೋವನ್ನು ತೆರೆಯುವುದರಿಂದ ಸಮಸ್ಯೆ ದೂರಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಡುಗೆ ಮಾಡುವಾಗ ವೆಂಟಿಲೇಟರ್‌ಗಳನ್ನು ಬಳಸುವುದರಿಂದ ಅಸ್ತಮಾ 36% ದಷ್ಟು ಕಡಿಮೆಯಾಗುತ್ತದೆ.

ಇನ್ನು ಗ್ಯಾಸ್ ಸ್ಟೌವ್ ನಿಷೇಧಿಸಿದರೆ ಹೊಸ ಉಪಕರಣಗಳನ್ನು ಖರೀದಿಸುವ ಅಗತ್ಯವಿರುವ ಮನೆಮಾಲೀಕರಿಗೆ ಮತ್ತು ಸಣ್ಣ ವ್ಯಾಪಾರ ಮಾಲೀಕರಿಗೆ ಆರ್ಥಿಕ ಸಂಕಷ್ಟಗಳನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗಿದೆ. ಅಲ್ಲದೆ ಗ್ಯಾಸ್ ಸ್ಟೌವ್‌ಗಳು ಎಲೆಕ್ಟ್ರಿಕ್ ಸ್ಟೌವ್‌ಗಳಿಗಿಂತ ಹೆಚ್ಚು ಬಹುಮುಖವಾಗಿವೆ ಎಂಬ ವಾದವೂ ಕೇಳಿಬರುತ್ತಿದೆ. ಸದ್ಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಈ ಗ್ಯಾಸ್ ಸ್ಟವ್ ನಿಷೇಧಕ್ಕೆ ವಾದ-ವಿವಾದಗಳು ನಡೆಯುತ್ತಲೇ ಇವೆ.

Leave A Reply

Your email address will not be published.