Electric Car : ಸೂಪರ್ ಮೈಲೇಜ್ ಕೊಡುವ ಕಾರುಗಳಿವು | ಒಮ್ಮೆ ಚಾರ್ಜ್ ಮಾಡಿದರೆ 850 ಕಿ.ಮೀ.ಮೈಲೇಜ್ ನೀಡುತ್ತೆ!!!
ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಹವಾ ಹೆಚ್ಚಿದೆ. ಎಲೆಕ್ಟ್ರಿಕ್ ಕಾರು, ಸ್ಕೂಟರ್ ಗಳ ಬೇಡಿಕೆ ಹೆಚ್ಚಾಗುತ್ತಿದೆ. ಅಂತೆಯೇ ಕಂಪನಿಗಳು ಕೂಡ ವಿಭಿನ್ನ ವಿನ್ಯಾಸದ, ಆಕರ್ಷಣೀಯವಾದ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಸದ್ಯ ಉತ್ತಮ, ಸೂಪರ್ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಕಾರುಗಳ ಪಟ್ಟಿ ಇಲ್ಲಿ ನೀಡಲಾಗಿದೆ.
ಮರ್ಸಿಡಿಸ್ ಬೆಂಝ್ ಇಕ್ಯೂಎಸ್ : ಕಾರುಗಳ ಪೈಕಿ ಅಗ್ರಸ್ಥಾನದಲ್ಲಿರುವ ಕಾರು ಎಂದರೆ ಮರ್ಸಿಡಿಸ್ ಬೆಂಝ್ ಇಕ್ಯೂಎಸ್ ಕಾರು ಎಂದೇ ಹೇಳಬಹುದು. ಈ ಕಾರನ್ನು
ಒಂದು ಬಾರಿ ಚಾರ್ಜ್ ಮಾಡಿದ್ರೆ 857 ಕಿ.ಮೀ. ಕ್ರಮಿಸುತ್ತದೆ. ಇದು ಎರಡು ರೂಪಾಂತರಗಳನ್ನು ಹೊಂದಿದೆ. ಈ ಕಾರು 107.8 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಬ್ಯಾಟರಿಯು 30 ನಿಮಿಷಗಳಲ್ಲಿ 80 ಪ್ರತಿಶತದಷ್ಟು ಪೂರ್ಣಗೊಳ್ಳುತ್ತದೆ. ಸದ್ಯ ಮರ್ಸಿಡಿಸ್ ಬೆಂಝ್ ಇಕ್ಯೂಎಸ್ ಕಾರಿನ ಬೆಲೆ ರೂ. 1.55 ಕೋಟಿಯಿಂದ ಆರಂಭವಾಗಿ 2.45 ಕೋಟಿ ರೂ.ವರೆಗೆ ಇದೆ.
ಆಡಿ ಇಟ್ರಾನ್ ಜಿಟಿ ಇವಿ : ಇದರ ವ್ಯಾಪ್ತಿಯು 500 ಕಿಲೋಮೀಟರ್ ಆಗಿದ್ದು, ಇದು ಕೇವಲ 4.1 ಸೆಕೆಂಡುಗಳಲ್ಲಿ ಗಂಟೆಗೆ 100 ಕಿಮೀ ವೇಗವನ್ನು ಕ್ರಮಿಸುತ್ತದೆ. ಆಡಿ ಇಟ್ರಾನ್ ಜಿಟಿ ಎಲೆಕ್ಟ್ರಿಕ್ ಕಾರು 93kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಇದರ ಬೆಲೆ 1.79 ಕೋಟಿ ಆಗಿದೆ.
ಮಹೀಂದ್ರಾ XUV 400 : ಈ ಕಾರು ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಉತ್ತಮ ಫೀಚರ್ಸ್ ಹೊಂದಿರುವ ಮಹೀಂದ್ರಾ XUV 400 ಭಾರೀ ಬೇಡಿಕೆಯಲ್ಲಿದೆ. ಈ ಕಾರನ್ನು ಒಂದು ಬಾರಿ ಚಾರ್ಜ್ ಮಾಡಿದರೆ 456 ಕಿಲೋಮೀಟರ್ ದೂರ ಪ್ರಯಾಣಿಸಬಹುದು. ಇದು 345 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಸದ್ಯ ಇದರ ಬೆಲೆ 15.99 ಲಕ್ಷ ಆಗಿರಲಿದೆ.
ಬಿಎಂಡಬ್ಲ್ಯು ಐ4 : ಬಿಎಂಡಬ್ಲ್ಯು ಐ4 ಕಾರನ್ನು ಒಂದು ಬಾರಿ ಚಾರ್ಜ್ ಮಾಡಿದರೆ 590 ಕಿಲೋಮೀಟರ್ ಕ್ರಮಿಸುತ್ತದೆ. ಇದೀಗ ಈ ಕಾರಿನ ಬೆಲೆ 69.9 ಲಕ್ಷ ಇದೆ. ಈ ಕಾರು 83.9 kWh ಬ್ಯಾಟರಿಯನ್ನು ಹೊಂದಿದ್ದು, ಬ್ಯಾಟರಿಯು ಸುಮಾರು 30 ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ. ಬಿಎಂಡಬ್ಲ್ಯು ಐ4 ಉತ್ತಮ ಕಾರುಗಳಲ್ಲಿ ಇದೂ ಒಂದಾಗಿದೆ.
ಹ್ಯುಂಡೈ ಕೋನಾ : ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಕಾರುಗಳಲ್ಲಿ ಇದೂ ಒಂದು. ಅದ್ಭುತ ಫೀಚರ್ ಗಳಿಂದ ಗ್ರಾಹಕರನ್ನು ಸೆಳೆಯುತ್ತಿದೆ. ಈ ಕಾರಿನ ವ್ಯಾಪ್ತಿಯು 452 ಕಿಲೋಮೀಟರ್ ಆಗಿದ್ದು, ಈ ಕಾರು 39.2 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಬ್ಯಾಟರಿಯು 57 ನಿಮಿಷಗಳಲ್ಲಿ 80 ಪ್ರತಿಶತದಷ್ಟು ಪೂರ್ಣಗೊಳ್ಳುತ್ತದೆ. ಇನ್ನು ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರಿನ ಬೆಲೆ 23 ಲಕ್ಷ ಆಗಿದೆ.
Kia EV6 : ಈ ಕಾರನ್ನು ಒಂದು ಬಾರಿ ಚಾರ್ಜ್ ಮಾಡಿದರೆ 700 ಕಿ.ಮೀ.ಗಳಿಗಿಂತ ಹೆಚ್ಚು ದೂರ ಸಂಚರಿಸಬಹುದು. ಇದು 77.4 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಬ್ಯಾಟರಿಯು ಕೇವಲ 18 ನಿಮಿಷಗಳಲ್ಲಿ 80 ಪ್ರತಿಶತ ಪೂರ್ಣಗೊಳ್ಳುತ್ತದೆ. ಇನ್ನು Kia EV6 ನ ಬೆಲೆ ರೂ. 60.95 ಲಕ್ಷ ಆಗಿದೆ.
ಟಾಟಾ ನೆಕ್ಸಾನ್ ಇವಿ : ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ವ್ಯಾಪ್ತಿಯು 437 ಕಿಲೋಮೀಟರ್ ಆಗಿದ್ದು, ಈ ಕಾರು ಗ್ರಾಹಕರಿಗೆ ವಿವಿಧ ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಬೆಲೆ 14.49 ಲಕ್ಷ ಆಗಿರಲಿದೆ. ಅಲ್ಲದೆ, ಇದು 30.2 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಬ್ಯಾಟರಿ ಕೇವಲ 60 ನಿಮಿಷಗಳಲ್ಲಿ ಶೇಕಡಾ 80 ರಷ್ಟು ಪೂರ್ಣಗೊಳ್ಳುತ್ತದೆ. ಸದ್ಯ ಕಾರುಗಳು ಉತ್ತಮ ಮೈಲೇಜ್ ನೀಡಲಿದ್ದು, ಹೆಚ್ಚು ಕಿ.ಮೀ ಕ್ರಮಿಸುವ ಉತ್ತಮ ಕಾರಾಗಿದೆ.