ಅತೀ ವೇಗದ ಎಲೆಕ್ಟ್ರಿಕ್ ಸ್ಕೂಟರ್ ಗಳಿವು | ಇವುಗಳ ಸಂಪೂರ್ಣ ವಿವರ ಇಲ್ಲಿದೆ
ಇತ್ತೀಚೆಗೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಕಂಪನಿಗಳು ಹೊಸ ಹೊಸ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಜನರು ಇವುಗಳ ಖರೀದಿಗೆ ಮುನ್ನುಗ್ಗುತ್ತಿದ್ದಾರೆ. ಸದ್ಯ ಅತೀ ವೇಗದ ಎಲೆಕ್ಟ್ರಿಕ್ ಸ್ಕೂಟರ್ ಗಳ ವಿವರ ಇಲ್ಲಿ ನೀಡಲಾಗಿದೆ.
ಓಲಾ ಎಲೆಕ್ಟ್ರಿಕ್ : ಈ ಸ್ಕೂಟರ್ ನಲ್ಲಿ, Ola S1 Pro ಮಾದರಿಯು 116 kmph ವೇಗವನ್ನು ನೀಡುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ರೂ. 1,29,999 ಆಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 181 ಕಿ.ಮೀ. ದೂರ ಪ್ರಯಾಣಿಸಬಹುದು. ಇದು ವೇಗದ ಸ್ಕೂಟರ್ಗಳಲ್ಲಿ ಒಂದಾಗಿದೆ.
ಬಜಾಜ್ ಚೇತಕ್ : ಇದರ ಬೆಲೆ 1.47 ಲಕ್ಷ ರೂಪಾಯಿ ಆಗಿದ್ದು,
ಈ ಎಲೆಕ್ಟ್ರಿಕ್ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 95 ಕಿಲೋಮೀಟರ್ ವರೆಗೆ ಚಲಿಸುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 70 ಕಿಲೋಮೀಟರ್ ಆಗಿದ್ದು, ಇದು 4.2 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಪಡೆಯುತ್ತದೆ.
ಟಿವಿಎಸ್ ಐಕ್ಯೂಬ್ : ಈ ಎಲೆಕ್ಟ್ರಿಕ್ ಸ್ಕೂಟರ್ ವೇಗದ ಸ್ಕೂಟರ್ ಆಗಿದ್ದು, ಇದನ್ನು ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿಲೋಮೀಟರ್ ಚಲಿಸುತ್ತದೆ. ಗರಿಷ್ಠ ವೇಗ ಗಂಟೆಗೆ 78 ಕಿಲೋಮೀಟರ್ ಆಗಿದ್ದು, 4.5 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಪಡೆಯುತ್ತದೆ. ಇದರ ಬೆಲೆ ರೂ. 1.65 ಲಕ್ಷ ಆಗಿದೆ.
Ola S1 ಏರ್ : ಈ ಮಾದರಿಯು ವೇಗದ ಸ್ಕೂಟರ್ ಆಗಿದ್ದು, ಇದರ ವೇಗವು 101 ಕಿಲೋಮೀಟರ್ ಆಗಿದ್ದು, ಗರಿಷ್ಠ ವೇಗದ ಗಂಟೆಗೆ 90 ಕಿಲೋಮೀಟರ್ ಆಗಿದೆ. ಇದರ ಬೆಲೆ ರೂ. 79,999 ಆಗಿದೆ. Ola S1 ಏರ್ ಸ್ಕೂಟರ್ 4.3 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಪಡೆಯುತ್ತದೆ.
ಈಥರ್ 450X : ಈ ಎಲೆಕ್ಟ್ರಿಕ್ ಸ್ಕೂಟರ್ 7 ಇಂಚಿನ ಡ್ಯಾಶ್ಬೋರ್ಡ್ ಹೊಂದಿದೆ. ಇದರ ವೇಗವು ಒಟ್ಟು 146 ಕಿಲೋಮೀಟರ್. ಹಾಗೆಯೇ ಇದು 3.3 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಚಲಿಸುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 90 ಕಿಲೋಮೀಟರ್ ಆಗಿದ್ದು, ಈ ಸ್ಕೂಟರ್ ನ ಬೆಲೆ ರೂ. 1.5 ಲಕ್ಷ ಇರಲಿದೆ.
ಫಾಸ್ಟ್ ಎಫ್ : Okaya EV ಕಂಪನಿಯ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ನ ಆರಂಭಿಕ ಬೆಲೆ 99,999 ರೂಪಾಯಿ ಆಗಿದೆ. ಇದರ ವೇಗವು ಒಟ್ಟು 125 ಕಿಲೋಮೀಟರ್ ಹಾಗೆಯೇ ಇದರ ಗರಿಷ್ಠ ವೇಗ ಗಂಟೆಗೆ 70 ಕಿಲೋಮೀಟರ್ ಆಗಿದೆ. ಇವು ಅತಿ ವೇಗ ಇರುವ ಸ್ಕೂಟರ್ ಆಗಿದೆ.