BIGG NEWS : ಜನತೆಗೆ ಬಿಗ್ ಶಾಕ್ | ಅಡುಗೆ ಎಣ್ಣೆ ಬೆಲೆ ಹೆಚ್ಚಳ?!
ಸರ್ಕಾರ ಜನತೆಗೆ ಬಿಗ್ ಶಾಕ್ ನೀಡಿದ್ದು, ಅಡುಗೆ ಎಣ್ಣೆ ಬೆಲೆ ಹೆಚ್ಚಳ ಮಾಡುವ ಬಗ್ಗೆ ಯೋಜನೆ ರೂಪಿಸಿದೆ. ಖಾದ್ಯ ತೈಲದ ಬೆಲೆಯಲ್ಲಿ ಮತ್ತೆ ವಾಗ್ವಾದ ಶುರುವಾಗಿದ್ದು, ದೇಶದಲ್ಲಿ ಖಾದ್ಯ ತೈಲದ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಹಿಂಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ಖಾದ್ಯ ತೈಲದ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿತ್ತು. ದೇಶದಲ್ಲಿ ಖಾದ್ಯ ತೈಲದ ಬೆಲೆ ಏರಿಕೆಯನ್ನು ಗಮನಿಸಿ, ಇದರಿಂದ ಜನರಿಗೆ ಪರಿಹಾರ ನೀಡಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ದೇಶೀಯ ಸಾಸಿವೆ ಮಾರುಕಟ್ಟೆಗೆ ಪ್ರವೇಶಿಸಿದ ನಂತರ ಆಮದು ಸುಂಕದ ಮೇಲಿನ ವಿನಾಯಿತಿಯನ್ನು ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಳ್ಳಬಹುದು, ಮೇ 2023ರೊಳಗೆ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸೋಯಾಬೀನ್ ಪ್ರೊಸೆಸರ್ಸ್ ಅಸೋಸಿಯೇಷನ್, ವಾಣಿಜ್ಯ ಸಚಿವಾಲಯದ ಜೊತೆಗೆ ಮಾತನಾಡಿದ್ದು, ಎಲ್ಲಾ ರೀತಿಯ ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಲು ಸರ್ಕಾರಕ್ಕೆ ಕೋರಿದೆ.
ವಾರ್ಷಿಕ ಖಾದ್ಯ ತೈಲಗಳ ಆಮದು 13 ಮಿಲಿಯನ್ ಟನ್ ಆಗಿದ್ದು, ಇದರಲ್ಲಿ ತಾಳೆ ಎಣ್ಣೆ 8 ಮಿಲಿಯನ್ ಟನ್ ಮಲೇಷ್ಯಾ ಮತ್ತು ಇಂಡೋನೇಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಸೋಯಾಬೀನ್ 2 ಲಕ್ಷ 70 ಸಾವಿರ ಟನ್ ಮತ್ತು ಸೂರ್ಯಕಾಂತಿ ಎಣ್ಣೆ 2 ಮಿಲಿಯನ್ ಟನ್ ಎಣ್ಣೆಯನ್ನು ಅರ್ಜೆಂಟೀನಾ ಮತ್ತು ಉಕ್ರೇನ್ನಿಂದ ಆಮದು ಮಾಡಿಕೊಳ್ಳಲಾಗುತ್ತದೆ.
ಇಂಡೋನೇಷ್ಯಾ ತಾಳೆ ಎಣ್ಣೆಯನ್ನು ರಫ್ತು ಮಾಡುತ್ತಿದ್ದು, ಕಳೆದ ವರ್ಷ ಏಪ್ರಿಲ್ 28 ರಂದು ತಾಳೆ ಎಣ್ಣೆ ರಫ್ತಿನ ಮೇಲೆ ನಿಷೇಧ ಹೇರಿದ್ದು, ಆ ನಂತರ ಅಂತರಾಷ್ಟ್ರೀಯ ತಾಳೆ ಎಣ್ಣೆಯ ಬೆಲೆಗಳು ಏರಿಕೆ ಕಂಡಿದೆ. ಈ ನಿಷೇಧವನ್ನು ಮೂರು ವಾರಗಳ ನಂತರ ತೆಗೆದುಹಾಕಲಾಯಿತು. ಅಂದಿನಿಂದ ವಿಶ್ವ ಮಾರುಕಟ್ಟೆಯಲ್ಲಿ ತಾಳೆ ಎಣ್ಣೆ ಬೆಲೆ ಕುಸಿಯುತ್ತಿದ್ದು, ಕ್ಯಾಸ್ಟರ್ ಆಯಿಲ್ ಹಣದುಬ್ಬರ ಡಿಸೆಂಬರ್ 2022 ರಲ್ಲಿ 8.6 ಪ್ರತಿಶತಕ್ಕೆ ಕಡಿಮೆಯಾಗಿದೆ. ಈ ವೇಳೆ ಜಾಗತಿಕ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆ ಕುಸಿತದಿಂದ, ದೇಶದಲ್ಲಿ ಸೂರ್ಯಕಾಂತಿ ಎಣ್ಣೆ ಮತ್ತು ತಾಳೆ ಎಣ್ಣೆಯ ಹಣದುಬ್ಬರವು ಶೇಕಡಾ 5.2 ಕ್ಕೆ ಇಳಿದಿದೆ. ಒಟ್ಟಾರೆ ಅಡುಗೆ ಸಾಮಾಗ್ರಿಗಳ ಬೆಲೆಯಲ್ಲಿ ಏರಿಳಿತ ಆಗುತ್ತಲೇ ಇದೆ.