ಅಚ್ಚರಿಯ ಬೆಲೆಯಲ್ಲಿ ಸಿಗಲಿದೆ ಹೊಸ ಎಪ್ರಿಲಿಯಾ ಟೈಫೂನ್ 125 ಸ್ಕೂಟರ್
ಭಾರತದ ಮಾರುಕಟ್ಟೆಯಲ್ಲಿ ದಿನಕ್ಕೊಂದರಂತೆ ನವ ನವೀನ ಮಾದರಿಯ ಸ್ಕೂಟರ್’ಗಳು ಬಿಡುಗಡೆಯಾಗುತ್ತಲಿದೆ. ವಾಹನ ತಯಾರಕ ಕಂಪನಿಗಳು ಗ್ರಾಹಕರ ಮನ ಸೆಳೆಯಲು ವಿಶೇಷ ಪ್ರಯತ್ನಗಳನ್ನು ಮಾಡುತ್ತಲಿದೆ. ಇದೀಗ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ, ತಮ್ಮ ಪ್ರದರ್ಶನ ಹಾಗೂ ಪವರ್‌ಫುಲ್ ಎಂಜಿನ್‌ಗಳಿಂದಾಗಿ ಹೆಚ್ಚು ಪ್ರಸಿದ್ಧಿಹೊಂದಿರುವ ಎಪ್ರಿಲಿಯಾ (Aprilia) ಸ್ಕೂಟರ್’ನ ಹೊಸ ಮಾಡೆಲ್ ಲಗ್ಗೆಯಿಡಲು ಸಜ್ಜಾಗಿದೆ. ಅವುಗಳ ಅತ್ಯಾಕರ್ಷಕ ಫೀಚರ್, ಬೆಲೆ,ಲಭ್ಯತೆಗಳ ಕಂಪ್ಲೀಟ್ ಡೀಟೇಲ್ ಇಲ್ಲಿದೆ.
ಎಪ್ರಿಲಿಯಾ ಮೋಟಾರ್‌ಸ್ಪೋರ್ಟ್ ಉದ್ಯಮದಾದ್ಯಂತ ತನ್ನ ರೇಸಿಂಗ್ ಪರಂಪರೆಯಿಂದ ಬಹಳ ಹೆಸರುವಾಸಿಯಾಗಿದ್ದು, ಮೋಜಿನ ಮತ್ತು ವೇಗದ ಬೈಕ್‌ಗಳಿಂದ ಜನಪ್ರಿಯವಾಗಿದೆ. ಇದರ ಸ್ಪೋರ್ಟ್ಸ್ ಪರಂಪರೆಯಿಂದಾಗಿ ಪ್ರಪಂಚದಾದ್ಯಂತ ಗ್ರಾಹಕರು ಮಾರುಹೋಗಿದ್ದಾರೆ. ಭಾರತದಲ್ಲಿ 25 ವರ್ಷಗಳ ಕಾರ್ಯಾಚರಣೆಯನ್ನು ಆಚರಿಸುತ್ತಿರುವ ಪಿಯಾಜಿಯೊ ಇಂಡಿಯಾ ಕಂಪನಿಯು ದೇಶದಲ್ಲಿ ಅನೇಕ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಇದೀಗ ಶೀಘ್ರದಲ್ಲೇ ಭಾರತದಲ್ಲಿ ಎಪ್ರಿಲಿಯಾ ಟೈಫೂನ್ 125 ಎಂಟ್ರಿ ಲೆವೆಲ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲು ರೆಡಿಯಾಗಿದ್ದು, 2023ರ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡಲಿದೆ.
ಹೊಸ ಎಪ್ರಿಲಿಯಾ ಟೈಫೂನ್ 125 ಸ್ಕೂಟರ್ ಫೀಚರ್ಸ್ ಗಳ ಬಗ್ಗೆ ನೋಡುವುದಾದರೆ, ಇದರಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ಯುಎಸ್‌ಬಿ ಚಾರ್ಜರ್ ಮತ್ತು ಸಂಯೋಜಿತ ಬ್ರೇಕಿಂಗ್ ಸಿಸ್ಟಮ್ ಪಡೆದಿದೆ. ಎಪ್ರಿಲಿಯಾ ಟೈಫೂನ್ 125 ಸ್ಕೂಟರ್’ನಲ್ಲಿ, ವೆಚ್ಚವನ್ನು ಕಡಿಮೆ ಮಾಡಲೆಂದು ಫುಲ್ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ನೀಡಿಲ್ಲ. ಇದು ಎಪ್ರಿಲಿಯಾ SR 125 ಸ್ಕೂಟರ್ ನಲ್ಲಿ ಸ್ಟ್ಯಾಂಡರ್ಡ್ ಫಿಟ್‌ಮೆಂಟ್ ನಂತೆ ಲಭ್ಯವಿದೆ. ಇನ್ನು ಮೆಕ್ಯಾನಿಕಲ್‌ಗಳಿಗೆ ಸಂಬಂಧಿಸಿದಂತೆ, ಇದರಲ್ಲಿ ಪರಿಷ್ಕರಿಸಿದ i-get Euro-5 ಎಂಜಿನ್ ಅನ್ನು ಅಳವಡಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.
ಇದು OBD-II ಕಂಪ್ಲೈಂಟ್ ಆಗಿದ್ದು, ಈ ಹೊಸ ಮೋಟಾರ್ ಸುಧಾರಿತ ವೇಗವರ್ಧಕವನ್ನು ನೀಡುತ್ತದೆ. ಆದರೆ, ಟೈಫೂನ್ 125 ಎಪ್ರಿಲಿಯಾ ಎಸ್‌ಆರ್ 125 ಕ್ಕಿಂತ ಕಡಿಮೆ ಸ್ಥಾನದಲ್ಲಿರುತ್ತದೆ. ಈ ಹೊಸ ಎಪ್ರಿಲಿಯಾ ಟೈಫೂನ್ 125 ಸ್ಕೂಟರ್ ಆರಂಭಿಕ ಬೆಲೆಯು ಬೆಲೆಯು (ಎಕ್ಸ್ ಶೋರೂಂ) ಸುಮಾರು 1.10 ಲಕ್ಷವಾಗಿರಬಹುದು ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ ಮಾರಾಟವಾಗುತ್ತಿರುವ ಜನಪ್ರಿಯ ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್’ನ ವಿಶೇಷತೆಯನ್ನು ಹೇಳುವುದಾದರೆ, ಈ ಜನಪ್ರಿಯ ಎಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಸ್ಕೂಟರ್’ನ ವಿನ್ಯಾಸ ಹಾಗೂ ಫೀಚರ್, ದಿಟ್ಟೊ ಹಿರಿಯ ಮಾದರಿ ಸ್ಕೂಟರ್ ಎಸ್‌ಎಕ್ಸ್‌ಆರ್ 160ಯಂತೆ ಇದೆ. ಏಪ್ರಿಲಿಯಾ ಎಸ್‌ಎಕ್ಸ್‌ಆರ್ 125 ಮ್ಯಾಕ್ಸಿ-ಸ್ಕೂಟರ್ ಮುಂಭಾಗದಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಟ್ರಿಪಲ್ ಹೆಡ್‌ಲ್ಯಾಂಪ್ಗಳನ್ನು ಹೊಂದಿದೆ. ಅಲ್ಲದೆ ಏಪ್ರನ್, ಬಣ್ಣದ ವಿಸರ್, ಎಲ್ಇಡಿ ಟೈಲ್ ಲೈಟ್ಸ್ ಮತ್ತು ಅಲಾಯ್ ವ್ಹೀಲ್ ಅನ್ನು ಹೊಂದಿದೆ. ಇನ್ನು ಈ ಮ್ಯಾಕ್ಸಿ-ಸ್ಕೂಟರ್ ಮಸ್ಕಲರ್ ಲುಕ್ ಅನ್ನು ಹೊಂದಿದೆ.
ಇನ್ನು ಈ ಸ್ಕೂಟರ್‌ನಲ್ಲಿ ಸಂಪೂರ್ಣವಾದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ರೈಡರ್ ಮತ್ತು ಪಿಲಿಯನ್‌ಗಾಗಿ ವಿಶಾಲ ಸೀಟುಗಳು, ಮುಂಭಾಗದ ಏಪ್ರನ್‌ನ ಎರಡೂ ಬದಿಯಲ್ಲಿ ಗ್ಲೋವ್‌ಬಾಕ್ಸ್, ಒಂದು ಬದಿಯಲ್ಲಿ ಯುಎಸ್‌ಬಿ ಚಾರ್ಜರ್, ಪ್ರಕಾಶದೊಂದಿಗೆ ದೊಡ್ಡ ಅಂಡರ್-ಸೀಟ್ ಸ್ಟೋರೆಂಜ್ ಸ್ಪೆಸ್ ಅನ್ನು ಹೊಂದಿದೆ. ಅಷ್ಟೇ ಅಲ್ಲದೆ, ಈ ಸ್ಕೂಟರ್ ಬ್ಲೂಟೂತ್ ಕನೆಕ್ಟಿವಿಟಿಯನ್ನು ಒಳಗೊಂಡಿವೆ. ಈ ಮ್ಯಾಕ್ಸಿ-ಸ್ಕೂಟರ್’ಗೆ 125 ಸಿಸಿ ಸಿಂಗಲ್-ಸಿಲಿಂಡರ್ ಫ್ಯೂಯಲ್-ಇಂಜೆಕ್ಟ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ,600 ಆರ್‌ಪಿಎಂನಲ್ಲಿ 9.3 ಬಿಹೆಚ್‌ಪಿ ಮತ್ತು 6250 ಆರ್‌ಪಿಎಂನಲ್ಲಿ 9.2 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
ಈ ಮ್ಯಾಕ್ಸಿ-ಸ್ಕೂಟರ್’ನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದ್ದು ಅದ್ಭುತವಾಗಿದೆ. ಇನ್ನು ಈ ಹೊಸ ಮ್ಯಾಕ್ಸಿ-ಸ್ಕೂಟರ್ ಮುಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 140 ಎಂಎಂ ಡ್ರಮ್ ಬ್ರೇಕ್ ಹೊಂದಿದೆ. ಇನ್ನು ಇದರ ಬೆಲೆಯ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.