ಅಬ್ಬಾ! ಈ ಟಾಪ್‌ ಧರಿಸಿದಕ್ಕೆ ಮತ್ತೆ ಟ್ರೋಲ್‌ಗೊಳಗಾದ ನಟಿ ರಶ್ಮಿಕಾ ! ಯಾಕೆ ಗೊತ್ತಾ?

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಬಾಲಿವುಡ್, ಟಾಲಿವುಡ್, ಕಾಲಿವುಡ್ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಆದರೆ ಈ ನಟಿ ಏನೇ ಮಾತಾಡಿದ್ರೂ ಸುದ್ದಿಯಾಗುತ್ತೆ, ಸನ್ನೆ ಮಾಡಿದ್ರೆ ವಿವಾದವೇ ಸೃಷ್ಟಿಯಾಗುತ್ತೆ. ಇದೀಗ ಆಕೆ ತೊಟ್ಟ ಬಟ್ಟೆ ಬಗ್ಗೆ ಏನಾಗಿದೆ ನೋಡೋಣ.

ಹೌದು ಇದೀಗ ನಟಿ ರಶ್ಮಿಕಾ ಮಂದಣ್ಣ ಅವರ ಇನ್ನೊಂದು ವಿಡಿಯೋ ನೆಟ್ಟಿಗರ ಟ್ರೊಲ್ ಗೆ ಸಿಕ್ಕಿದೆ. ರಶ್ಮಿಕಾ 2 ಲಕ್ಷ ರೂಪಾಯಿಯ ಬೆಲೆ ಬಾಳವ ಟಾಪ್ ಧರಿಸಿ ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಟ್ಟಿದ್ದು, ನಟಿಯ ಟಾಪ್ ಬೆಲೆ ಕೇಳಿ ನೆಟ್ಟಿಗರು ಸಖತ್ ಕಾಮೆಂಟ್ ಮಾಡಿದ್ದಾರೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಪ್ರಯಾಣ ಮಾಡುವಾಗ ರಶ್ಮಿಕಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. 2.06 ಲಕ್ಷ ರೂ. ಸಿಂಪಲ್ ಆಗಿರುವ ಟಾಪ್ ಧರಿಸಿ ಎಂಟ್ರಿ ಕೊಟ್ಟಿದ್ದು ಸದ್ಯ ನಟಿಯ 2 ಲಕ್ಷದ ಟಾಪ್ ವಿಚಾರವಾಗಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದ್ದಾರೆ.

ನಟಿ ರಶ್ಮಿಕಾ ಧರಿಸಿರುವ ಟಾಪ್ Dolce & Gabbana ಹೆಸರಿನ ಪೀಚ್ ಬಣ್ಣದ ಟಾಪ್ ಆಗಿದೆ ಇದರ ಬೆಲೆ 2 ಲಕ್ಷದ 6 ಸಾವಿರದ 336 ರೂಪಾಯಿ ಎನ್ನಲಾಗಿದೆ.

ನಟಿಯ ಬಟ್ಟೆಯ ಆಡಂಬರ ನೋಡಿ ನೆಲ ಒರೆಸುವ ಬಟ್ಟೆಯ ಹಾಗೆ ಇದೆ ಎಂದು ನೆಟ್ಟಿಗರು ನಟಿಯ ಕಾಲೆಳೆದಿದ್ದು ಜೊತೆಗೆ ದುಬಾರಿ ಬೆಲೆಯ ಡ್ರೆಸ್‌ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಟ್ರೋಲ್‌ ಆಗುತ್ತಿದೆ.

Leave A Reply

Your email address will not be published.