ಅಕ್ರಮ ಸಕ್ರಮ ನಿವೇಶನ ಹಕ್ಕು ಪತ್ರ ಪಡೆದವರಿಗೆ ಗುಡ್ ನ್ಯೂಸ್!

Share the Article

ಈಗಾಗಲೇ ರಾಜ್ಯ ಸರ್ಕಾರವು ಈ ಹಿಂದೆ ಅಕ್ರಮ-ಸಕ್ರಮ ನಿವೇಶನ ಹಕ್ಕುಪತ್ರ ಪಡೆದವರು ಅಡಮಾನ ಮಾಡಬಾರದೆಂಬ ಷರತ್ತು ವಿಧಿಸಿತ್ತು. ಈ ಮೊದಲು ಯೋಜನೆಯಡಿ ನಿವೇಶನ ಹಕ್ಕುಪತ್ರ ಪಡೆದವರಿಗೆ ಇದನ್ನು ಅಡಮಾನ ಮಾಡಬಾರದೆಂಬ ಷರತ್ತನ್ನು ವಿಧಿಸಲಾಗಿತ್ತು. ಅಲ್ಲದೆ ಇದನ್ನು ಹಕ್ಕುಪತ್ರದಲ್ಲಿ ಸಹ ಮುದ್ರಿಸಲಾಗಿತ್ತು. ಹೀಗಾಗಿ ಫಲಾನುಭವಿಗಳು ಬ್ಯಾಂಕ್ ಮೂಲಕ ಸಾಲ ಪಡೆಯಲು ಹೋದರೆ ತೊಂದರೆಯಾಗುತ್ತಿತ್ತು.

ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದ ಬಳಿಕ ಇದೀಗ ಗೃಹ ನಿರ್ಮಾಣ ಅಡಮಾನ ಸಾಲಕ್ಕೆ ಯಾವುದೇ ನಿರ್ಬಂಧ ವಿಧಿಸದೆ ಬ್ಯಾಂಕಿನಲ್ಲಿ ಸಾಲ ಹೊರಡಿಸಲಾಗಿದೆ. ಹೀಗಾಗಿ ಅಕ್ರಮ ನೀಡುವಂತೆ ಆದೇಶ ಸಕ್ರಮ ನಿವೇಶನ ಯೋಜನೆಯಡಿ ಹಕ್ಕು ಪತ್ರ ಪಡೆದ ಫಲಾನುಭವಿಗಳು ಬ್ಯಾಂಕುಗಳಿಂದ ಅಡಮಾನ ಸಾಲ ಪಡೆಯುವ ಅವಕಾಶ ಲಭ್ಯವಾದಂತಾಗಿದೆ.

ಹೌದು ಇದೀಗ ರಾಜ್ಯ ಸರ್ಕಾರ ಅಕ್ರಮ-ಸಕ್ರಮ ನಿವೇಶನ ಯೋಜನೆಯಡಿ ಹಕ್ಕು ಪತ್ರ ಪಡೆದವರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ನಿವೇಶನ ಹಕ್ಕುಪತ್ರ ಅಡಮಾನವಿಟ್ಟು ಬ್ಯಾಂಕ್ ಸಾಲ ಪಡೆಯಲು ಅವಕಾಶ ನೀಡಿದೆ.

ಸದ್ಯ ರಾಜ್ಯ ಸರ್ಕಾರವು ಗೃಹ ನಿರ್ಮಾಣ ಅಡಮಾನ ಸಾಲಕ್ಕೆ ಯಾವುದೇ ನಿರ್ಬಂಧ ವಿಧಿಸದೆ ಬ್ಯಾಂಕಿನಲ್ಲಿ ಸಾಲ ನೀಡುವಂತೆ ಆದೇಶ ಹೊರಡಿಸಲಾಗಿದೆ. ಈ ಮೂಲಕ ಅಕ್ರಮ-ಸಕ್ರಮ ನಿವೇಶನ ಯೋಜನೆಯಡಿ ಹಕ್ಕುಪತ್ರ ಅಡಮಾನವಿಟ್ಟು ಬ್ಯಾಂಕ್ ಸಾಲ ಪಡೆಯಲು ಅವಕಾಶ ನೀಡಲಾಗಿದೆ. ರಾಜ್ಯ ಸರ್ಕಾರ ಈ ನಿರ್ಧಾರ ಸಾಮಾನ್ಯ ಜನರನ್ನು ಕೊಂಚ ಮಟ್ಟಿಗೆ ನಿರಾಳ ಮಾಡಿದೆ.

Leave A Reply