ಯೂಟ್ಯೂಬ್ ಸಿನಿಮಾ ವಿಮರ್ಶಕರಿಗೆ ಚಿತ್ರಮಂದಿರಗಳಿಗೆ ಪ್ರವೇಶವಿಲ್ಲ!
ಕೇರಳ ಫಿಲ್ಮ್ ಚೇಂಬರ್ ಯೂಟ್ಯೂಬ್ ಸಿನಿಮಾ ವಿಮರ್ಶಕರಿಗೆ ಚಿತ್ರಮಂದಿರಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಲು ನಿರ್ಧರಿಸಿದೆ.
ಸಿನಿಮಾ ವಿಮರ್ಶಿಸಲು ಅವರು ಥಿಯೇಟರ್ ಗೆ ಎಂಟ್ರಿ ನೀಡಬಾರದು ಎಂಬ ಮಹತ್ವದ ನಿರ್ಧಾರ ಕೈಗೊಳ್ಳುತ್ತಿದೆ.
ಈ ರೀತಿಯ ನಿರ್ಧಾರ ಕೈಗೊಳ್ಳಲು ಕಾರಣ ಇದ್ದು, FEUOK ಅಧ್ಯಕ್ಷ ಕೆ.ವಿಜಯ್‌ಕುಮಾರ್ ಈ ಬಗ್ಗೆ ಹೇಳಿಕೆ ನೀಡಿದ್ದು, “ಸಿನಿಮಾಗಳು ಬಿಡುಗಡೆಯಾದ ಮೊದಲ ದಿನವೇ, ಆನ್‌ಲೈನ್ ಮಾಧ್ಯಮಗಳು ಚಲನಚಿತ್ರಗಳ ಬಗ್ಗೆ ತಪ್ಪು ವಿಮರ್ಶೆಯನ್ನು ನೀಡುತ್ತಿರುವ ಕಾರಣ ಈ ರೀತಿಯ ನಿರ್ಧಾರವನ್ನು ಕೈಗೊಂಡಿದ್ದೇವೆ” ಎಂದು ಹೇಳಿದರು.
ಇಂತಹ ವಿಮರ್ಶೆಯಿಂದ ಚಿತ್ರದ ಕಲೆಕ್ಷನ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಬಗ್ಗೆ ಕೇರಳ ಚಲನಚಿತ್ರೋದ್ಯಮದಲ್ಲಿ ಚರ್ಚೆ ನಡೆದಿದ್ದು, ಈ ವೇಳೆ ಕೆಲವು ಮಾಹಿತಿ ಹೊರಬಿದ್ದಿದ್ದು, ಕೆಲವು ನಿರ್ದೇಶಕರು ಚಿತ್ರಗಳ ಬಗ್ಗೆ ನಕಾರಾತ್ಮಕವಾಗಿ ಮಾತನಾಡಲು ಹಣ ತೆಗೆದುಕೊಳ್ಳುತ್ತಾರೆ ಎಂಬ ಆರೋಪದ ಮೇಲೆ ಯೂಟ್ಯೂಬ್ ವಿಮರ್ಶಕರನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಫೆಬ್ರವರಿ 8 ರಂದು, ಆನ್‌ಲೈನ್ ಮಾಧ್ಯಮಗಳು ಇನ್ನು ಮುಂದೆ ಥಿಯೇಟರ್‌ಗಳಿಗೆ ಪ್ರವೇಶಿಸುವಂತಿಲ್ಲ ಎಂದು ಕೇರಳ ಫಿಲ್ಮ್ ಚೇಂಬರ್ ನಿರ್ಧಾರವನ್ನು ತೆಗೆದುಕೊಂಡಿದೆ. ಅಲ್ಲದೆ, ಡಿಜಿಟಲ್ ಮಾಧ್ಯಮದಿಂದ, ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವಿಮರ್ಶೆಗಳು ಹುಟ್ಟಿಕೊಳ್ಳುತ್ತವೆ. ಜನರು ಥಿಯೇಟರ್‌ನಿಂದ ಹೊರಬಂದ ತಕ್ಷಣ ಆನ್‌ಲೈನ್ ಚಾನೆಲ್‌ಗಳಿಗೆ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ನೀಡುತ್ತಾರೆ. ಇದು ಒಳ್ಳೆಯದಲ್ಲ ಎಂದು ಚಿತ್ರ ನಿರ್ಮಾಪಕರೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರದ ಬಗ್ಗೆ ಅಭಿಪ್ರಾಯ ತಿಳಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಕೆಲವು ಯೂಟ್ಯೂಬ್ ಚಾನೆಲ್‌ಗಳು ಚಿತ್ರದ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಲು ಹಣವನ್ನು ಕಸಿದುಕೊಳ್ಳಲು ಮತ್ತು ಸುಲಿಗೆ ಮಾಡಲು ಪ್ರಯತ್ನಿಸುತ್ತಿವೆ ಎಂದು ಕೆಲವು ಮಲಯಾಳಂ ನಿರ್ಮಾಪಕರು ಗಂಭೀರ ಆರೋಪ ಮಾಡಿದ್ದು, ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಲು ಚರ್ಚೆ ನಡೆಯುತ್ತಿದ್ದು, ಯೂಟ್ಯೂಬ್ ಚಲನಚಿತ್ರ ವಿಮರ್ಶೆಗಳನ್ನು ನಿಷೇಧಿಸಬೇಕೇ ? ಬೇಡವೇ ? ಎಂಬ ಚರ್ಚೆ ಮುಂದುವರೆದಿದೆ ಎನ್ನಲಾಗಿದೆ. ಚಲನಚಿತ್ರದ ಬಗ್ಗೆ ಯಾರು ಎಲ್ಲಿ ಬೇಕಾದರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು. ಹಾಗಾಗಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.