ವಿಶ್ವದ ಅತ್ಯಂತ ದುಬಾರಿ ಟೆಡ್ಡಿ ಬೇರ್​​ಗಳಿವು | ಇವುಗಳ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!!

ಟೆಡ್ಡಿ ಬೇರ್ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಹುಡ್ಗೀರ್ ಗಂತು ತುಂಬಾನೇ ಇಷ್ಟ. Teddy Day ಅಂತ ದಿನ ಬೇರೆ ಇದೆ. ಪ್ರೇಮಿಗಳು ತಮ್ಮ ಪ್ರೀತಿ ಪಾತ್ರರಿಗೆ ಟೆಡ್ಡಿ ಗಿಫ್ಟ್ ಕೊಡೊವಂತದ್ದು. ಟೆಡ್ಡಿಗಳಲ್ಲೂ ಮನುಷ್ಯನಷ್ಟು ಎತ್ತರದ್ದೂ ಇದೆ. ಸಣ್ಣದ್ದೂ ಇದೆ. ಆದ್ರೆ ಇಲ್ಲಿರೊ ಟೆಡ್ಡಿ ಬಗ್ಗೆ ನೀವೇನಾದ್ರೂ ಕೇಳಿದ್ರೆ ಆಶ್ಚರ್ಯ ಪಡ್ತೀರಾ!! ಯಾಕೆ ಗೊತ್ತಾ? ಅಷ್ಟು ದುಬಾರಿ ಟೆಡ್ಡಿ. ಎಷ್ಟು ಅಂದ್ರೆ ನೀವೂ ಈ ಟೆಡ್ಡಿಗಳ ಬಗ್ಗೆ ಮಾಹಿತಿ ಕೇಳಿರೋದೇ ಇಲ್ಲಾ!! ಬನ್ನಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸ್ಟೀಫ್ ಲೂಯಿ ವಿಟಾನ್ ಟೆಡ್ಡಿ :

ಈ ಟೆಡ್ಡಿಯನ್ನು ಐಷಾರಾಮಿ ಬ್ರಾಂಡ್ ಆಗಿರುವ ಸ್ಟೀಫ್ ಆಂಡ್ ಲೂಯಿ ವಿಟಾನ್ ವಿನ್ಯಾಸಗೊಳಿಸಿದೆ. 2000 ರಲ್ಲಿ, ಇದು ಸುಮಾರು $ 182,550 ಗೆ ಮಾರಾಟವಾಯಿತು. ಅನೇಕ ವೆಬ್‌ಸೈಟ್‌ಗಳು ಅದರ ಮೌಲ್ಯವನ್ನು 2 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ಎಂದು ಹೇಳುತ್ತವೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅದರ ಬೆಲೆಯನ್ನು ಸುಮಾರು $ 182550 ಎಂದು ದಾಖಲಿಸಿದೆ. ಅಂದರೆ, ಇಂದಿನ ವಿನಿಮಯ ದರದ ಪ್ರಕಾರ, ಸುಮಾರು 1.36 ಕೋಟಿ ರೂ. ಸದ್ಯ ಈ ದುಬಾರಿ ಟೆಡ್ಡಿ ಬೆಲೆ ರೂ 13,51,25,550 ಅಂದ್ರೆ 2.1 ಮಿಲಿಯನ್ ಡಾಲರ್​​​ ಆಗಿದೆ.

ಸ್ಟೀಫ್ ಟೈಟಾನಿಕ್ ಟೆಡ್ಡಿ ಬೇರ್ :

1912 ರಲ್ಲಿ ಟೈಟಾನಿಕ್ ಹಡಗು ಮುಳುಗಿದ ಸಂದರ್ಭದಲ್ಲಿ, ಆ ಘಟನೆಯ ಸ್ಮರಣಾರ್ಥವಾಗಿ ಸ್ಟೆಫ್ 600 ಕಪ್ಪು ಟೆಡ್ಡಿಗಳನ್ನು ತಯಾರಿಸಿದ್ದು, ಅವುಗಳಲ್ಲಿ ಇದೂ ಒಂದು. ದಶಕಗಳ ಕಾಲ ಸ್ಟೋರ್ ರೂಂನಲ್ಲಿದ್ದ ನಂತರ ಅದನ್ನು $133,285 ಗೆ ಹರಾಜು ಮಾಡಲಾಯಿತು. ಭಾರತೀಯ ಕರೆನ್ಸಿಯಲ್ಲಿ ಇಂದಿನ ಬೆಲೆಯಲ್ಲಿ ಲೆಕ್ಕ ಹಾಕಿದರೆ ಇದರ ಬೆಲೆ 99,64,999 ರೂ. ಆಗಿದೆ.

ಸ್ಟೀಫ್ ಡೈಮಂಡ್ ಐಸ್ ಟೆಡ್ಡಿ ಬೇರ್ :

ಈ ಟೆಡ್ಡಿ ಬೇರ್ ನೋಡಲು ಸಂಪೂರ್ಣವಾಗಿ ಚಿನ್ನದಿಂದಲೇ ಮಾಡಿದಂತೆ ಇದೆ. ಆದರೆ ಇದರ ವಿಶೇಷತೆ ಏನೆಂದರೆ ಅದರ ಬಾಯಿಯನ್ನು ಚಿನ್ನದಿಂದ ಮಾಡಲಾಗಿದೆ ಮತ್ತು ಅದರ ಕಣ್ಣುಗಳನ್ನು ನೀಲಮಣಿಗಳು ಮತ್ತು ವಜ್ರಗಳಿಂದ ಮಾಡಲಾಗಿದೆ. ಈ ಸುಂದರವಾದ, ವಿಶೇಷವಾದ ಟೆಡ್ಡಿಯ ಬೆಲೆ 54,05,022ರೂ ಅಂದ್ರೆ 84,000ಡಾಲರ್​​ ಇದೆ.

​​​ಹಾರ್ಲೆಕ್ವಿನ್ ಟೆಡ್ಡಿ ಬೇರ್ :

ಹಾರ್ಲೆಕ್ವಿನ್ ಬೇರ್ ಅನ್ನು1925 ರಲ್ಲಿ ಸ್ಟೆಫ್ ಕಂಪನಿ ತಯಾರಿಸಿತು. ಇದು ವಿಶ್ವದ ಅತ್ಯಂತ ದುಬಾರಿ ಟೆಡ್ಡಿ ಬೇರ್ಗಳಲ್ಲಿ ಒಂದಾಗಿದೆ. ಈ ಟೆಡ್ಡಿಗೆ ಹಾರ್ಲೆಕ್ವಿನ್ ಎಂದು ಹೆಸರಿಡಲಾಗಿದೆ. ಈ ಟೆಡ್ಡಿಯ ಬೆಲೆ 48 ಲಕ್ಷ ರೂಪಾಯಿ ಇದೆ. ಇದು ಆ ಸಮಯದಲ್ಲಿ ತಯಾರಿಸಿದ ಅತ್ಯಂತ ದುಬಾರಿ ಆಟಿಕೆಗಳಲ್ಲಿ ಒಂದಾಗಿದೆ. ಇದರ ಬೆಲೆ ರೂ 48,80,161 ಅಂದ್ರೆ 75,826 ಡಾಲರ್​​ ಆಗಿದೆ.

ಸ್ಟೀಫ್ ಬ್ಲೂ ಎಲಿಯಟ್ ಟೆಡ್ಡಿ ಬೇರ್ :

1908 ರಲ್ಲಿ ಈ ಟೆಡ್ಡಿ ಬೇರ್​​ಗಳನ್ನು ಸ್ಟೀಫ್ ಬ್ರಾಂಡ್​ ಕಂಪೆನಿಯು ತಯಾರಿಸಿತು. ಕಂಪನಿಯು ಒಟ್ಟು ಆರು ವಿಭಿನ್ನ ಬಣ್ಣಗಳಲ್ಲಿ ಟೆಡ್ಡಿಯನ್ನು ತಯಾರಿಸಿದ್ದು, ನಂತರ ಮಾರಾಟಕ್ಕಾಗಿ ಲಂಡನ್‌ಗೆ ಕಳುಹಿಸಲಾಯಿತು. ನೋಡಲು ಸುಂದರವಾಗಿದ್ದು, ದುಬಾರಿ ಟೆಡ್ಡಿಯಲ್ಲಿ ಇದೂ ಒಂದು. 1993 ರಲ್ಲಿ ಇದನ್ನು ಹರಾಜಿಗೆ ಇಡಲಾಯಿತು. ಸದ್ಯ ಇದರ ಬೆಲೆ 42,98,246 ರೂ ಅಂದ್ರೆ 66,800 ಡಾಲರ್​​​ ಆಗಿದೆ.

Leave A Reply

Your email address will not be published.