ಶುಭ್ಮನ್ ಗಿಲ್‌ಗೆ ಮತ್ತೊಮ್ಮೆ ನಾಮಕರಣ ಮಾಡಿದ ಸುನಿಲ್ ಗವಾಸ್ಕರ್ | ಯಾವುದಾ ಹೊಸ ಹೆಸರು, ಅದರ ಗುಟ್ಟೇನು ಗೊತ್ತಾ?

ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಸದ್ಯ ತಂಡದಲ್ಲಿ ಅತ್ಯುತ್ತಮ ಫಾರ್ಮ್‌ನೊಂದಿಗೆ ರನ್ ಗಳಿಸುವ ಆಟಗಾರನಾಗಿದ್ದಾರೆ. ಅಲ್ಲದೆ ಭಾರತ ತಂಡದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಬ್ಯಾಟಿಂಗಿಗೆ ಸಾಕಷ್ಟು ಮಂದಿ ಪ್ರಭಾವಿತರಾಗಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಶುಭಮ್ ದ್ವಿಶತಕ ಬಾರಿಸಿ ಏಕದಿನ ಮಾದರಿಯಲ್ಲಿ ದ್ವಿಶತಕ ಸಿಡಿಸಿದ ಐದನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು.

 

ಇದೀಗ ಶುಭ್ಮನ್ ಗಿಲ್ ಬ್ಯಾಟಿಂಗ್‌ಗೆ ಮಾಜಿ ಕ್ರಿಕೆಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದು, ಮಾಜಿ ಶ್ರೇಷ್ಠ ಬ್ಯಾಟರ್ ಸುನಿಲ್ ಗವಾಸ್ಕರ್ ಕೂಡ ಅವರ ಅಭಿಮಾನಿಗಳಲ್ಲಿ ಒಬ್ಬರಾಗಿದ್ದಾರೆ. ಆಗಾಗ್ಗ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರನ್ನು ಕಾಮೆಂಟರಿ ಸಮಯದಲ್ಲಿ ಹೊಗಳುವುದನ್ನು ಕೂಡ ನೀವು ಕೇಳಿರಬಹುದು. ಇದೀಗ ಶುಭಮ್ ದ್ವಿಶತಕ ಭಾರಿಸಿ ಸಾಧನೆ ಮಾಡಿದ ಬೆನ್ನಲ್ಲೇ ಭಾರತದ ಮಾಜಿ ಆಟಗಾರ ಸುನಿಲ್ ಗವಾಸ್ಕರ್, ಶುಭ್ಮನ್ ಗಿಲ್ ಗೆ ಹೊಸ ಹೆಸರಿಟ್ಟಿದ್ದಾರೆ.

ಹೌದು, ಸುನಿಲ್ ಗವಾಸ್ಕರ್ ಅವರು ಹೈದರಾಬಾದ್ ಏಕದಿನ ಪಂದ್ಯದಲ್ಲಿ ಕಾಮೆಂಟರಿ ಮಾಡುವಾಗ ಶುಭಮನ್ ಗಿಲ್‌ಗೆ ‘ಸ್ಮೂತ್‌ಮ್ಯಾನ್ ಗಿಲ್’ ಎಂಬ ಅಡ್ಡಹೆಸರನ್ನು ನೀಡಿದರು. ಅದೇ ಸಮಯದಲ್ಲಿ, ಹೈದರಾಬಾದ್ ಏಕದಿನ ಪಂದ್ಯದ ನಂತರ, ಸುನಿಲ್ ಗವಾಸ್ಕರ್ ‘ನಾನು ನಿಮಗೆ ಹೊಸ ಅಡ್ಡಹೆಸರನ್ನು ಇಟ್ಟಿದ್ದೇನೆ. ನೀವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನನಗೆ ಖಾತ್ರಿಯಿದೆ’ ಎಂದು ಹೇಳಿದ್ದಾರೆ. ಇದಾದ ನಂತರ ಶುಭ್ಮನ್ ಗಿಲ್ ಮುಖದಲ್ಲಿ ನಗು ಮೂಡಿತು. ಅಲ್ಲದೆ, ‘ಈ ಹೆಸರು ನನಗೆ ಇಷ್ಟವಾಗಿದೆ’ ಎಂದು ಯುವ ಆರಂಭಿಕ ಶುಭ್ಮನ್ ಹೇಳಿದ್ದಾರೆ.

ದಾಖಲೆಯ ದ್ವಿಶತಕ ಸಿಡಿಸಿದ್ದರು. ಶುಭಮನ್ ಗಿಲ್ 149 ಎಸೆತಗಳಲ್ಲಿ 208 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು. ತಮ್ಮ ಇನ್ನಿಂಗ್ಸ್‌ನಲ್ಲಿ 19 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ ಶುಭಮನ್ ಗಿಲ್ ದೊಡ್ಡ ದಾಖಲೆ ಬರೆದಿದ್ದಾರೆ. ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ 23 ವರ್ಷ ವಯಸ್ಸಿನ ಶುಭ್ಮನ್ ಗಿಲ್ 20 ಏಕದಿನ ಪಂದ್ಯಗಳನ್ನು ಆಡಿದ ನಂತರ 71.38 ಸರಾಸರಿಯನ್ನು ಹೊಂದಿದ್ದಾರೆ. ಅವರು 50 ಓವರ್‌ಗಳ ಸ್ವರೂಪದಲ್ಲಿ ಮೂರು ಬಾರಿ ಮೂರಂಕಿ ಮೊತ್ತ ದಾಟಿದ್ದಾರೆ.

ಕಳೆದ ವರ್ಷದಿಂದ ಭಾರತ ತಂಡದ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಶುಭ್ಮನ್ ಗಿಲ್ ಅವರನ್ನು ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಬಟ್ ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ‘ಶುಭ್ಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುವುದನ್ನು ನಾನು ನೋಡಿದಾಗಿನಿಂದ ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ಅವರ ಸ್ಟ್ರೋಕ್‌ಗಳಲ್ಲಿನ ಅವರ ಸೊಬಗು ಮತ್ತು ಶೈಲಿ ನಿಜವಾಗಿಯೂ ಶ್ಲಾಘನೀಯ,’ ಎಂದಿದ್ದಾರೆ.

Leave A Reply

Your email address will not be published.