ನನ್ನ ಆ ವೀಡಿಯೋ ಮಾಡಿ ಅದಿಲ್ ಖಾನ್ ಮಾರಾಟ ಮಾಡಿದ್ದಾನೆ -ರಾಖಿ ಸಾವಂತ್

ರಾಖಿ ಸಾವಂತ್ ಹಾಗೂ ಮೈಸೂರಿನ ಅದಿಲ್ ಖಾನ್ ನಡುವಿನ ಸಂಬಂಧ ಮುರಿದು ಬಿದ್ದಿದೆ.ರಾಖಿ ಆದಿಲ್ ವಿರುದ್ದ ಆರೋಪಗಳನ್ನು ಮಾಡುತ್ತಿದ್ದಾರೆ.ಇದೀಗ ಹೊಸತೊಂದು ವಿಚಾರವನ್ನು ರಾಖಿ ಲೀಕ್ ಮಾಡಿದ್ದಾರೆ.

 

ಅದೇನೆಂದರೆ ,ಅದಿಲ್ ಖಾನ್ ನನ್ನ ಬೆತ್ತಲೆ ವಿಡಿಯೋ ಮಾಡಿ ಮಾರಾಟ ಮಾಡಿದ್ದಾನೆ ಎಂದು ರಾಖಿ ಸಾವಂತ್ ಆರೋಪಿಸಿದ್ದಾಳೆ.

ಅದಿಲ್ ಈಗ ಮೂರನೇ ಬಾರಿಗೆ ತನು ಎನ್ನುವ ಹುಡುಗಿಯನ್ನು ಮದುವೆಯಾಗಬೇಕು ಎಂದುಕೊಂಡಿದ್ದಾನೆ”
ಆದಿಲ್‌ಗೆ ಬೇಲ್ ಸಿಕ್ಕಿಲ್ಲ. ನಾನು ಮೆಡಿಕಲ್ ಟೆಸ್ಟ್ ಮಾಡಿ ಸಾಕ್ಷಿಯನ್ನೆಲ್ಲ ಓಶಿವಾರ ಪೊಲೀಸ್ ಠಾಣೆಗೆ ನೀಡಿದ್ದೇನೆ.

ಜಡ್ಜ್ ಹತ್ತಿರ ನಾನು ನ್ಯಾಯ ಕೇಳಲು ಬಂದಿದ್ದೇನೆ. ನನಗೆ ಮೋಸ ಮಾಡಿರುವ, ದೌರ್ಜನ್ಯ ನೀಡಿರುವ ಆದಿಲ್‌ಗೆ ಜಾಮೀನು ಸಿಗಬಾರದು. ನಾನು ಅವನಿಗೆ ನನ್ನ ಬ್ಯಾಂಕ್ ಸ್ಟೇಟ್‌ಮೆಂಟ್‌ ಕೊಟ್ಟಿದ್ದೇನೆ, ಓಟಿಪಿಯನ್ನೂ ಪಡೆದುಕೊಂಡು, ಬ್ಯಾಂಕ್‌ನಲ್ಲಿರುವ ಹಣ ಪಡೆದಿದ್ದಾನೆ. ನನ್ನ ನಂಬಿಕೆಯನ್ನು ಹಾಳು ಮಾಡಿದ್ದಾನೆ” ಎಂದು ರಾಖಿ ಸಾವಂತ್ ಹೇಳಿದ್ದಾರೆ.

ರಾಖಿ ಸಾವಂತ್ ಅವರ ವಕೀಲರು ಮಾಧ್ಯಮದ ಜೊತೆ ಮಾತನಾಡಿ, “ಆರೋಪಿ ವಕೀಲರು ಕೋರ್ಟ್‌ಗೆ ಬರದೆ ಇರೋದಿಕ್ಕೆ ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ನಮಗೆ ಪೊಲೀಸರ ಸಹಕಾರವಿದೆ” ಎಂದು ಹೇಳಿದ್ದಾರೆ.

ಫೆಬ್ರವರಿ 7ರಂದು ಆದಿಲ್ ಖಾನ್‌ ಅವರನ್ನು ಅರೆಸ್ಟ್ ಮಾಡಲಾಗಿತ್ತು. “ಆದಿಲ್ ಖಾನ್ ಉದ್ಯಮಿಯೇ ಅಲ್ಲ, ಅವನಿಗೆ ಬಾಲಿವುಡ್‌ಗೆ ಎಂಟ್ರಿ ಬೇಕಿತ್ತು, ಹೀರೋ ಆಗಬೇಕಿತ್ತು. ಅದಕ್ಕೆ ಅವನು ನನ್ನನ್ನು ಮೆಟ್ಟಿಲಾಗಿ ಬಳಸಿಕೊಂಡ. ನಾನು ಉದ್ಯಮಿ ಅಂತ ಎಲ್ಲರೆದುರು ಹೇಳು ಅಂತ ಅವನೇ ಒತ್ತಾಯ ಮಾಡುತ್ತಿದ್ದ. ನಾನು ಅವನ ವಿರುದ್ಧ ಹೋದರೆ ಯಾರಿಗಾದರೂ 50 ಸಾವಿರ ರೂಪಾಯಿ ಕೊಟ್ಟು ನಿನ್ನ ಮೇಲೆ ಟ್ರಕ್ ಹರಿಸ್ತೀನಿ ಅಂತ ಅವನು ಧಮ್ಕಿ ಹಾಕಿದ್ದಾನೆ. ನನ್ನ ದುಡ್ಡೆಲ್ಲ ತಗೊಂಡು ತಾಯಿ ಚಿಕಿತ್ಸೆಗೂ ಹಣ ಕೊಡಲಿಲ್ಲ. ಅವಳಿಗೆ ಸರಿಯಾಗಿ ಚಿಕಿತ್ಸೆ ಸಿಕ್ಕಿದ್ರೆ ಬದುಕಿರುತ್ತಿದ್ದಳು” ಎಂದು ರಾಖಿ ಸಾವಂತ್ ಅವರು ಅಳಲನ್ನು ತೋಡಿಕೊಂಡಿದ್ದಾರೆ.

ಕಳೆದ ವರ್ಷ ಜುಲೈ ತಿಂಗಳಲ್ಲಿ ರಾಖಿ ಸಾವಂತ್ ಹಾಗೂ ಆದಿಲ್ ಕೋರ್ಟ್ ಮ್ಯಾರೇಜ್ ಮಾಡಿಕೊಂಡಿದ್ದರಂತೆ. ಆದಿಲ್ ಸುಮ್ಮನಿರು ಎಂದು ಹೇಳಿದ್ದಕ್ಕೆ ರಾಖಿ ಅವರು ಮದುವೆ ವಿಷಯವನ್ನು ಯಾರಿಗೂ ಹೇಳಿರಲಿಲ್ಲವಂತೆ.

Leave A Reply

Your email address will not be published.