Oneplus Earbuds: ಒನ್ಪ್ಲಸ್ ಕಂಪೆನಿ ಲಾಂಚ್ ಮಾಡಿದೆ ಹೊಸ ಇಯರ್‌ಬಡ್ಸ್ ! ಖಂಡಿತ ಇಷ್ಟ ಪಡ್ತೀರ!
ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳು ಹೆಚ್ಚು ಬೇಡಿಕೆಯಲ್ಲಿವೆ. ಸದ್ಯ ಇಯರ್‌ಬಡ್ಸ್ ಗಳು ಕೂಡ ತಮ್ಮ ಸ್ಥಾನವನ್ನು ಗಳಿಸಿಕೊಂಡಿದೆ. ಒನ್ಪ್ಲಸ್ ಕಂಪೆನಿಯು ಹೊಸ ಇಯರ್‌ಬಡ್ಸ್ ಲಾಂಚ್ ಮಾಡುತ್ತಿದ್ದು, ಈಗಾಗಲೇ ಭಾರತದ ಮಾರುಕಟ್ಟೆಯಲ್ಲಿ ಒನ್ ಪ್ಲಸ್ ಕಂಪೆನಿಯ OnePlus Buds Pro 2 ಎಂಬ ಇಯರ್‌ಬಡ್ಸ್ ಫೆಬ್ರವರಿ 14 ರಂದು ಬಿಡುಗಡೆಗೆ ಸಜ್ಜಾಗಿದೆ. ಇದೀಗ OnePlus Buds Pro 2 ಸಾಧನದ ಜೊತೆಗೆ ನಿರ್ಮಿಸಲಾದ OnePlus Buds Pro 2R ಎಂಬ ಇಯರ್‌ಬಡ್ಸ್ ನ ವಿಶೇಷ ಮಾದರಿಯನ್ನು ಘೋಷಿಸಲಾಗಿದ್ದು, ಶೀಘ್ರದಲ್ಲೇ ಈ ಡಿವೈಸ್ ಬಿಡುಗಡೆಯಾಗಲಿದೆ ಎಂದು ಕಂಪನಿ ತಿಳಿಸಿದೆ. ಹಾಗಿದ್ರೆ ಇದರ ಫೀಚರ್ಸ್ ಹೇಗಿದೆ ನೋಡೋಣ.
OnePlus Buds Pro 2R ಫೀಚರ್ಸ್ :
ಈ ಇಯರ್ ಬಡ್ಸ್ ವೈರ್ಲೆಸ್ ಚಾರ್ಜಿಂಗ್ ಮತ್ತು ಹೆಡ್ ಟ್ರ್ಯಾಕಿಂಗ್ ಫೀಚರ್ ಎಂಬ ಸ್ಪೆಷಲ್ ಫೀಚರ್ ಅನ್ನು ಒಳಗೊಂಡಿದೆ. ಈ ಇಯರ್‌ಬಡ್‌ಗಳು ಗ್ಲೋಸಿ ಸ್ಟೆಮ್ ಮತ್ತು ಮೇಲ್ಭಾಗದಲ್ಲಿ ಮ್ಯಾಟ್ ಫಿನಿಶ್ ಆಯ್ಕೆಯೊಂದಿಗೆ ಕಾಣಿಸಿಕೊಂಡಿದ್ದು, ಡ್ಯುಯಲ್-ಟೋನ್ ವಿನ್ಯಾಸವನ್ನು ಹೊಂದಿದೆ. OnePlus Buds Pro 2R ಗುಣಮಟ್ಟದ ಆಡಿಯೋ, ಡೈನಾಡಿಯೋ ಟ್ಯೂನಿಂಗ್, ಅಡಾಪ್ಟಿವ್ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್ ಸೇರಿದಂತೆ ಉತ್ತಮ ಫೀಚರ್ಸ್ಗಳನ್ನು ಒಳಗೊಂಡಿದೆ.
ಕೆಲವು ಫೀಚರ್ ಗಳು OnePlus Buds Pro 2 ಇಯರ್ ಬಡ್ ನಲ್ಲಿರುವಂತದ್ದೇ ಆಗಿದ್ದು, ಆದರೆ ಇನ್ನು ಕೆಲವೊಂದು ವಿಶೇಷ ಫೀಚರ್ ಗಳು ಇದರಲ್ಲಿವೆ. OnePlus Buds Pro 2R ನಲ್ಲಿ 11 mm ಮತ್ತುmm ಗಾತ್ರದ ಡ್ಯುಯಲ್ ಡ್ರೈವರ್ ಆಯ್ಕೆಯನ್ನು ನೀಡಲಾಗಿದೆ. ಇವು 48 ಡಿಬಿವರೆಗೆ ಅಡಾಪ್ಟಿವ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ (ANC) ಫೀಚರ್ಸ್ ಅನ್ನು ಅಳವಡಿಸಲಿದ್ದು, ಇದರಿಂದ ಕಾಲ್ನಲ್ಲಿ ಮಾತನಾಡುವಾಗ ಹೊರಗಿನ ಶಬ್ದದಿಂದ ತೊಂದರೆ ಉಂಟಾಗಲ್ಲ.
ಸುತ್ತಮುತ್ತಲಿನ ಶಬ್ದಗಳನ್ನು ಆಲಿಸಲು ಟ್ರಾನ್ಸ್ಪರೆನ್ಸಿ ಮೋಡ್ ಆಯ್ಕೆ ಇದ್ದು, ಬಡ್ಸ್ ಗಳು ಎಲ್ಹೆಚ್ಡಿಸಿ 5.0 ಆಡಿಯೋ ಕೋಡೆಕ್ ಮತ್ತು ಗೇಮಿಂಗ್‌ಗಾಗಿ 54ms ಕಡಿಮೆ ಲೇಟೆನ್ಸಿಯನ್ನು ಬೆಂಬಲಿಸುತ್ತವೆ. ಇದರಿಂದ ಬಳಕೆದಾರರು ಅತ್ಯುತ್ತಮವಾದ ಗೇಮಿಂಗ್ ಅನುಭವವನ್ನು ಪಡೆಯಬಹುದು.
ಬ್ಯಾಟರಿ ಸಾಮರ್ಥ್ಯ :
OnePlus Buds Pro 2R ಇಯರ್‌ಬಡ್ಸ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ ಸಾಕು 39 ಗಂಟೆಗಳವರೆಗೆ ನಿರಂತರವಾಗಿ ಬಳಸಬಹುದು. ಈ ಡಿವೈಸ್ನಲ್ಲಿ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ ಅನ್ನು ಆಫ್ ಮಾಡಿ ಬಳಸಿದ್ರೆ 9 ಗಂಟೆಗಳ ಕಾಲ ಹೆಚ್ಚುವರಿಯಾಗಿ ಬಳಸಬಹುದು. ಹಾಗೇ ಎಎನ್ಸಿ ಫೀಚರ್ ಅನ್ನು ಆನ್ ಮಾಡಿದ್ರೆ ಈ ಬಡ್ಸ್ಗಳು 6 ಗಂಟೆಗಳವರೆಗೆ ಪ್ಲೇ ಬ್ಯಾಕ್ ಟೈಮ್ ಅನ್ನು ನೀಡುತ್ತದೆ ಎಂದು ಕಂಪೆನಿ ಹೇಳಿದೆ.
ಬೆಲೆ ಮತ್ತು ಲಭ್ಯತೆ :
OnePlus Buds Pro 2R ಇಯರ್‌ಬಡ್ಸ್ ಭಾರತದ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಇದರ ಬೆಲೆ 9,999 ರೂ. ಆಗಿದೆ. ಹಾಗೆಯೇ OnePlus Buds Pro 2R ಮುಂದಿನ ಮಾರ್ಚ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ ಎಂದು ಕಂಪೆನಿ ಹೇಳಿದೆ. ಈ ಇಯರ್ ಬಡ್ಸ್ ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ.