Money Line in Palm : ನಿಮ್ಮ ಕೈಯಲ್ಲಿ ‘ಮನಿ ಲೈನ್’ ಇದೆಯೇ ? ಹಾಗಾದ್ರೆ ನಿಮ್ಮ ಮನೆಯಲ್ಲಿ ಹಣ ತುಂಬಿತುಳುಕುತ್ತೆ!!!

Share the Article

ಕೈಯಲ್ಲಿರುವ ಕೆಲವು ರೇಖೆಗಳು ನಮ್ಮ ಜೀವನದ ರಹಸ್ಯಗಳನ್ನು ಹೇಳುತ್ತದೆ. ಅದು ಶ್ರೀಮಂತಿಕೆ, ಹಣ, ಯಶಸ್ಸು ಹೀಗೇ ಕೈಯಲ್ಲಿನ ಒಂದೊಂದು ರೇಖೆ ಒಂದೊಂದು ಅಂಶಗಳನ್ನು ತಿಳಿಸುತ್ತದೆ. ಇನ್ನು, ಕೈಯಲ್ಲಿರುವ ಮನಿ ಲೈನ್, ವ್ಯಕ್ತಿಯು ತನ್ನ ಜೀವನದಲ್ಲಿ ಎಷ್ಟು ಹಣ ಮತ್ತು ಆಸ್ತಿಯನ್ನು ಪಡೆಯುತ್ತಾನೆ ಎಂಬುದನ್ನು ತಿಳಿಸುತ್ತದೆ.

ಅಲ್ಲದೆ, ಇದು ನಿಮ್ಮ ಹಣಕಾಸಿನ ಭವಿಷ್ಯ ಹೇಗಿರುತ್ತದೆ ಮತ್ತು ನೀವು ಹಣವನ್ನು ಹೇಗೆ ಸಂಗ್ರಹಿಸಬಹುದು ಎಂಬುದನ್ನೂ ತೋರಿಸುತ್ತದೆ. ಹಣದ ರೇಖೆಯು ಕೇವಲ ಒಂದು ಸಾಲು ಮಾತ್ರವಲ್ಲ, ಅಂಗೈಯಲ್ಲಿ ಇರುವ ಅನೇಕ ಸಾಲುಗಳು ಸಂಪತ್ತಿನ ವಿವಿಧ ಸಂಭಾವ್ಯ ಅಂಶಗಳನ್ನು ಪ್ರದರ್ಶಿಸುತ್ತವೆ. ಮನಿ ಲೈನ್ ಹೇಗೆ ತಿಳಿದುಕೊಳ್ಳುವುದು? ಇಲ್ಲಿದೆ ನೋಡಿ ಅದರ ಸಂಪೂರ್ಣ ವಿವರ.

ಮನಿ ಲೈನ್ ಪ್ರತಿಯೊಬ್ಬ ವ್ಯಕ್ತಿಯ ಕೈಯಲ್ಲಿ ಇರುತ್ತದೆ. ಇದು ವ್ಯಕ್ತಿಯ ಕಿರುಬೆರಳಿನ ಕೆಳಗೆ ಇರುತ್ತದೆ. ಇದರಲ್ಲಿ ಕಟ್ ರೇಖೆಯು ಉತ್ತಮ ರೇಖೆ ಎಂದು ಹೇಳಲಾಗುತ್ತದೆ. ಹಣದ ರೇಖೆಯೊಂದಿಗೆ ಮಂಗಳ ರೇಖೆಯು ಸಹ ಕೊನೆಯವರೆಗೂ ಹೋದರೆ, ಅದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯು ತನ್ನ ಕೈಯಲ್ಲಿ ಅಂತಹ ರೇಖೆಯನ್ನು ಹೊಂದಿದ್ದರೆ, ಅವನು ತನ್ನ ಜೀವನದಲ್ಲಿ ಅಪಾರವಾದ ಪೂರ್ವಜರ ಆಸ್ತಿಯನ್ನು ಪಡೆಯುತ್ತಾನೆ. ಜೊತೆಗೆ ಸಾಕಷ್ಟು ಹಣ ಗಳಿಸುತ್ತಾನೆ. ಹಣದ ಕೊರತೆ ಆತನಿಗೆ ಉಂಟಾಗುವುದಿಲ್ಲ ಎಂದು ಹೇಳಲಾಗುತ್ತದೆ.

ಇನ್ನು ಕೈಯಲ್ಲಿ ಶುದ್ಧ ಹಣದ ಗೆರೆ ಇದ್ದರೆ, ಅಂತಹ ವ್ಯಕ್ತಿಗೆ ಸಾಕಷ್ಟು ಸಂಪತ್ತು ಕೂಡ ಇರುತ್ತದೆ. ಆ ವ್ಯಕ್ತಿ ಶ್ರೀಮಂತನಾಗುತ್ತಾನೆ. ಆತನಿಗೆ ಆರ್ಥಿಕ ಸಮಸ್ಯೆ ಉಂಟಾಗೋದಿಲ್ಲ. ಆತನ ಮನೆಯಲ್ಲಿ ಸದಾ ಹಣ ತುಂಬಿರುತ್ತದೆ. ಹಾಗೇ ಹಣದ ರೇಖೆಯ ಜೊತೆಗೆ, ಕೈಯಲ್ಲಿ ಸೂರ್ಯನ ರೇಖೆಯು ನೇರವಾಗಿ ಮತ್ತು ಸ್ಪಷ್ಟವಾಗಿದ್ದರೆ, ವ್ಯಕ್ತಿಯು ಹಣದ ಜೊತೆಗೆ ಗೌರವವನ್ನು ಪಡೆಯುತ್ತಾನೆ. ಸಮಾಜದಲ್ಲಿ ಉತ್ತಮ ಗೌರವ ಲಭಿಸುತ್ತದೆ. ಹಾಗೂ ಜೀವನದಲ್ಲಿ ಸಂತೋಷ ತುಂಬಿರುತ್ತದೆ ಎನ್ನಲಾಗುತ್ತದೆ.

Leave A Reply