Kiara Pregnant : ಮದುವೆಗೆ ಮೊದಲೇ ಕಿಯಾರಾ ಗರ್ಭಿಣಿಯಾಗಿದ್ದಾರಾ? ಸಂದೇಹ ಬರಲು ಕಾರಣ ಇಲ್ಲಿದೆ

ಶೇರ್‌ಷಾ’ ಚಿತ್ರದ ಮೂಲಕ ಮೋಡಿ ಮಾಡಿದ್ದ ಜೋಡಿ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ. ಬಿಟೌನ್‌ನಲ್ಲಿ  ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಇಬ್ಬರು ಲವ್ ಬರ್ಡ್ಸ್ ಆಗಿಯೇ ಹೆಚ್ಚು ಗುರುತಿಸಿಕೊಂಡಿದ್ದರು. ಇದೀಗ, ಬಾಲಿವುಡ್‌ನ ಮುದ್ದಾದ ಜೋಡಿ ಸಿದ್ಧಾರ್ಥ್ (Siddarth Malhotra) ಮತ್ತು ಕಿಯಾರಾ (Kiara Advani) ಜೈಸಲ್ಮೇರ್‌ನ ಅರಮನೆಯಲ್ಲಿ ಹಸೆಮಣೆ ಏರಿ ಹೊಸ ಜೀವನಕ್ಕೆ ಮುನ್ನುಡಿ ಬರೆದಿದ್ದಾರೆ. ಈಗ ದೆಹಲಿಯಲ್ಲಿ ಆರತಕ್ಷತೆ ನಡೆಯಲಿದ್ದು,  ದಂಪತಿಗಳು ಫೆಬ್ರವರಿ 12 ರಂದು ಮುಂಬೈನ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ರಿಸೆಪ್ಶನ್‌ ಕೂಡ ಮಾಡಿಕೊಳ್ಳಲಿದ್ದಾರೆ. ಈ ಜೋಡಿಗೆ ಶುಭ ಹಾರೈಕೆಗಳ ಮಹಾಪುರವೇ ಹರಿದು ಬರುತ್ತಿದೆ. ಈ ನಡುವೆ ಕಿಯಾರ ಕುರಿತು ಅಚ್ಚರಿಯ ವಿಚಾರವೊಂದು ಜೋರಾಗಿ ಸದ್ದು ಮಾಡುತ್ತಿದೆ.

 

ಹೌದು!!, ಮೊನ್ನೆಯಷ್ಟೇ  ದಾಂಪತ್ಯ ಜೀವನಕ್ಕೆ ಕಾಲಿಟ್ಟ  ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಮದುವೆಯಾದ ಕೆಲವೇ ದಿನಗಳಲ್ಲಿ  ಕಿಯಾರಾ ಅಡ್ವಾಣಿ ಗರ್ಭಧಾರಣೆಯ ಕುರಿತ ಊಹಾಪೋಹಗಳು ಹರಿದಾಡಿ ಜೋರಾಗಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ಗುಮಾನಿ ಭುಗಿಳೆಲೂ ಕಾರಣವೂ ಇದೆ. ಮದುವೆಯ ನಂತರ ಜೈಸಲ್ಮೇರ್‌ನಿಂದ ದೆಹಲಿಗೆ ಹಿಂದಿರುಗುವಾಗ, ಕಿಯಾರಾ ಅಡ್ವಾಣಿ ಕಪ್ಪು ಬಣ್ಣದ ಉಡುಪು ಧರಿಸಿ ಮಿಂಚುತ್ತಿದ್ದರು. ಇದರೊಂದಿಗೆ, ನಟಿ ಬೂದು-ಕಪ್ಪು ಬಣ್ಣದ ಶಾಲು ಧರಿಸಿದ್ದಾರೆ. ಈ ನಡುವೆ,  ಕಿಯಾರಾ ಅಡ್ವಾಣಿ ಫೋಟೋಗಳಿಗೆ ಪೋಸ್‌ ನೀಡುವ ಸಂದರ್ಭ ಶಾಲು ಹೊದ್ದುಕೊಂಡು ಆಗಾಗ ಶಾಲು ಸರಿಪಡಿಸಿಕೊಳ್ಳುತ್ತಾ ಅಡ್ಜಸ್ಟ್ ಮಾಡಿಕೊಂಡು ಹೊಟ್ಟೆ ಕಾಣದಂತೆ ಒದ್ದಾಡುತ್ತಿದ್ದ ವೈಖರಿ ಕಂಡು ಅಭಿಮಾನಿಗಳಿಗೆ ಕಿಯರಾ  ಗರ್ಭಧಾರಣೆಯ ಕುರಿತು ಸುದ್ದಿ ಕೇಳಿ ಬರುತ್ತಿದೆ.


ಸದ್ಯ, ಕಿಯಾರಾ ಅಡ್ವಾಣಿ ಅವರ‌ ಈ ವಿಮಾನ ನಿಲ್ದಾಣದ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳ ಪಾಲಿಗೆ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.  ಕಪ್ಪು ಬಟ್ಟೆ ಧರಿಸಿ, ಈಗ ಶಾಲು ಹೊದ್ದು ಹೊಟ್ಟೆ ಮುಚ್ಚುವ ಸ್ಟೈಲ್ ಕಂಡ ನೆಟ್ಟಿಗರು ನಟಿಯ ಕಾಲೆಳೆಯುವ ಪ್ರಯತ್ನ ನಡೆಸಿದ್ದಾರೆ. ವೈರಲ್ ಆಗುತ್ತಿರುವ ಫೋಟೋ ನೋಡಿ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಕೂಡ ಮಾಡುತ್ತಿದ್ದು, “ಈ ಮೇಡಮ್ 3-4 ತಿಂಗಳಲ್ಲಿ ಒಳ್ಳೆಯ ಸುದ್ದಿ ನೀಡಲಿದ್ದಿ, ಅವರ ಗರ್ಭಧಾರಣೆಯ ಸುದ್ದಿ ಶೀಘ್ರದಲ್ಲೇ ಬರಲಿದೆ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ದುಪಟ್ಟಾದಿಂದ ಹೊಟ್ಟೆ ಮರೆಮಾಚಿಕೊಂಡಿದ್ದಾರೆ ಎಂದು ಕೂಡಾ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.  ಆದರೆ, ನಟ ನಟಿಯರು ಎಂದ ಮಾತ್ರಕ್ಕೆ ಅವರು ಹೋದರು ಬಂದರೂ ಸುದ್ದಿಯಾಗೋದು ಕಾಮನ್. ಅಷ್ಟೆ ಏಕೆ ಸೆಲೆಬ್ರಿಟಿ ಗಳು ಮನೆಯಿಂದ ಕಾಲು ಹೊರಗಿಟ್ಟ ಕೂಡಲೇ ಸಾವಿರ ಕ್ಯಾಮರಾ ಕಣ್ಣಲ್ಲಿ ಅವರು ಸೆರೆಯಾಗಿ ಗಾಸಿಪ್ ಸೃಷ್ಟಿಗೆ ಹಾಟ್ ಟಾಪಿಕ್ ಆಗೋದು ಫಿಕ್ಸ್ ಅಂತಾನೆ ಲೆಕ್ಕ. ಇದೀಗ, ಕಿಯಾರಾ ಗರ್ಭಧಾರಣೆಯ ಬಗ್ಗೆ ಎಷ್ಟೇ ಚರ್ಚೆ ನಡೆದರೂ ಕೂಡ  ಚರ್ಚೆಗಳು ನಡೆಯುತ್ತಿದ್ದರೂ ಕೂಡ ಅವೆಲ್ಲ ಕೇವಲ್ಲ ಗಾಳಿ ಸುದ್ದಿ ಅನ್ನೋದು ಸದ್ಯದ ಮಾಹಿತಿ. ಏನೇ ಆಗಲಿ ಈ ಕ್ಯೂಟ್ ಜೋಡಿಗೆ ಶುಭವಾಗಲಿ ಅಂತಾ ಹಾರೈಸೋಣ ಅಲ್ವಾ!!

Leave A Reply

Your email address will not be published.