ಭಾರತೀಯ ರೈಲ್ವೇ ಉದ್ಯೋಗ | 1.35 ಲಕ್ಷ ಹುದ್ದೆಗಳಿಗೆ ಶೀಘ್ರದಲ್ಲೇ ನಡೆಯಲಿದೆ ನೇಮಕಾತಿ!
ಭಾರತೀಯ ರೈಲ್ವೇಯಲ್ಲಿ ಉದ್ಯೋಗ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ಇಲಾಖೆಯಿಂದ ಗುಡ್ ನ್ಯೂಸ್ ಇದ್ದು, ಶೀಘ್ರದಲ್ಲಿಯೇ ಖಾಲಿ ಇರುವ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಮಾಹಿತಿ ನೀಡಿದ್ದು, ಭಾರತೀಯ ರೈಲ್ವೇ ಈ ವರ್ಷ ಸುಮಾರು 1.35 ಲಕ್ಷ ಹುದ್ದೆಗಳನ್ನ ಭರ್ತಿ ಮಾಡುವ ಗುರಿಯನ್ನ ಹೊಂದಿದೆ. ಭಾರತೀಯ ರೈಲ್ವೆಯಲ್ಲಿ 14.93 ಲಕ್ಷ ಮಂಜೂರಾದ ಹುದ್ದೆಗಳಲ್ಲಿ ಪ್ರಸ್ತುತ 3.14 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ ಎಂದು ಹೇಳಿದ್ದಾರೆ.
2020 ಮತ್ತು 2022ರ ನಡುವೆ ರೈಲ್ವೆ ನೇಮಕಾತಿಯ ಭಾಗವಾಗಿ ಸುಮಾರು 3.65 ಕೋಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಇತ್ತೀಚಿನ ವರ್ಷಗಳಲ್ಲಿ ನೇಮಕಾತಿ ಪರೀಕ್ಷೆಗಳಲ್ಲಿ ಕಾಣಿಸಿಕೊಂಡ ಅಭ್ಯರ್ಥಿಗಳಲ್ಲಿ ಖಾಲಿ ಹುದ್ದೆಗಳನ್ನ ಭರ್ತಿ ಮಾಡಲು ತೀರ್ಮಾನಿಸಿದೆ. ಒಟ್ಟು ಮಂಜೂರಾದ ಹುದ್ದೆಗಳು ಮತ್ತು ಖಾಲಿ ಇರುವ ಹುದ್ದೆಗಳ ನಡುವಿನ ಅಂತರವನ್ನ ಏಪ್ರಿಲ್ ವೇಳೆಗೆ ಶೇಕಡಾ 43ರಷ್ಟು ಕಡಿಮೆ ಮಾಡುವ ಗುರಿಯನ್ನ ರೈಲ್ವೇ ಹೊಂದಿದೆ.
ಪರೀಕ್ಷೆಯು ಮುಗಿದ ನಂತರ, ಮುಂದಿನ ಹಂತವು ಟ್ರಾನ್ಸ್ಪರ್ಸನ್ಗಳಂತಹ ಖಾಲಿ ಹುದ್ದೆಗಳಿಗೆ ದೈಹಿಕ ದಕ್ಷತೆ ಪರೀಕ್ಷೆಗಳು (PET) ಆಗಲಿದೆ. ಪುರುಷರು 1,500 ಮೀಟರ್ಗಳನ್ನು 4.15 ನಿಮಿಷಗಳಲ್ಲಿ ಮತ್ತು ಮಹಿಳಾ ಅಭ್ಯರ್ಥಿಗಳು 5.40 ನಿಮಿಷಗಳಲ್ಲಿ 1,000 ಮೀಟರ್ಗಳನ್ನು ಓಡಬೇಕು. ಈ ದೈಹಿಕ ಪರೀಕ್ಷೆಗಳು ಫೆಬ್ರವರಿಯಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ವರದಿ ಪ್ರಕಾರ, ಲೆವೆಲ್ 1 ವರ್ಗದಲ್ಲಿ 1,03,769 ಹುದ್ದೆಗಳಿವೆ. ಪಾಯಿಂಟ್ಮೆನ್, ಎಲೆಕ್ಟ್ರಿಕಲ್ ವರ್ಕ್ಸ್, ಟ್ರಾನ್ಸ್ಪರ್ಸನ್ಸ್, ಸಿಗ್ನಲ್, ಟೆಲಿಕಾಂ ಅಸಿಸ್ಟೆಂಟ್ ಹುದ್ದೆಗಳು ಸೇರಿದಂತೆ ಲೆವೆಲ್ 1 ಹುದ್ದೆಗಳಿಗೆ ಇದುವರೆಗೆ 1.1 ಕೋಟಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಸದ್ಯದಲ್ಲಿಯೇ ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ.