Jio Fiber : ಜಿಯೋ ಗ್ರಾಹಕರೇ ಬಂದಿದೆ ನೋಡಿ ನಿಮಗೊಂದು ಧಮಾಕಾ ಆಫರ್ ! ಇಷ್ಟು ಕಡಿಮೆ ಖರ್ಚಿನಲ್ಲಿ ಒಟಿಟಿ ಫ್ಲಾಟ್ಫಾರ್ಮ್ಗಳು ಸಂಪೂರ್ಣ ಉಚಿತ!!
ಭಾರತದ ಟೆಲಿಕಾಂ ಕಂಪನಿಗಳಲ್ಲಿ ಅಗ್ರಸ್ಥಾನದಲ್ಲಿರುವ ಜಿಯೋ ರಿಲಯನ್ಸ್, ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯುತ್ತಿದೆ. ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪೈಪೋಟಿಯಲ್ಲಿ ಮುನ್ನುಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿದಿನ ಅಧಿಕ ಡೇಟಾ ಪ್ರಯೋಜನ ನೀಡುವುದರ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳ ಆಯ್ಕೆಗಳನ್ನೂ ನೀಡುತ್ತಿದೆ. ಸದ್ಯ ಜಿಯೋ ತನ್ನ ಗ್ರಾಹಕರಿಗೆ ಅದ್ಭುತ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ್ದು, ಅತ್ಯಂತ ಅಗ್ಗದ ಮತ್ತು ಉತ್ತಮ ಫೈಬರ್ (Jio Fiber) ಯೋಜನೆಗಳನ್ನು ನೀಡುತ್ತದೆ. ಕಂಪನಿಯ ಯೋಜನೆಯ ಆರಂಭಿಕ ಬೆಲೆ 399 ರೂ. ಆಗಿದೆ. ಈ ರಿಜಾರ್ಜ್ ಪ್ಲ್ಯಾನ್ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
399 ರೂ. ಬ್ರಾಡ್ಬ್ಯಾಂಡ್ ಪ್ಲ್ಯಾನ್ :
ರೂ. 399 ರಿಂದ ಜಿಯೋಫೈಬರ್ ಆರಂಭವಾಗಲಿದ್ದು, ಜಿಎಸ್ಟಿಯೂ ಅಪ್ಲೈ ಆಗುತ್ತದೆ. ಈ ಯೋಜನೆಯಲ್ಲಿ, ಗ್ರಾಹಕರು 30 Mbps ಡೇಟಾ ವೇಗದ ಸೌಲಭ್ಯ ಪಡೆಯಲಿದ್ದು, ಇದು ಅನ್ಲಿಮಿಟೆಡ್ ಆಗಿರುತ್ತದೆ. ಜೊತೆಗೆ ಉಚಿತ ಕರೆ ಸೌಲಭ್ಯವೂ ಲಭ್ಯವಿದೆ.
699 ರೂ. ರೀಚಾರ್ಜ್ ಪ್ಲ್ಯಾನ್ :
699 ರೂ. ರೀಚಾರ್ಜ್ ಪ್ಲ್ಯಾನ್ ನಲ್ಲೂ ಜಿಎಸ್ಟಿ ಅನ್ವಯವಾಗಲಿದೆ. ಗ್ರಾಹಕರಿಗೆ 100 Mbps ವೇಗದಲ್ಲಿ ಅನ್ಲಿಮಿಟೆಡ್ ಡಾಟಾ ಲಭ್ಯವಾಗುತ್ತದೆ. ಹಾಗೇ ಜಿಯೋಫೈಬರ್ ಮೂಲಕ ಗ್ರಾಹಕರು ಅನ್ಲಿಮಿಟೆಡ್ ಉಚಿತ ಕರೆ ಮತ್ತು ಜಿಯೋ ಟಿವಿ, ಜಿಯೋ ಮೂವಿಗೆ ಉಚಿತ ಪ್ರವೇಶ ಸಿಗಲಿದೆ.
999 ರೂ. ರೀಚಾರ್ಜ್ ಪ್ಲ್ಯಾನ್ :
ಈ ಯೋಜನೆಯಲ್ಲಿ ಜಿಎಸ್ಟಿ ಇದ್ದು, ಗ್ರಾಹಕರು 150 Mbps ವೇಗದ ಇಂಟರ್ನೆಟ್ ಪಡೆಯಲಿದ್ದಾರೆ. 999 ರೂ. ರೀಚಾರ್ಜ್ ಪ್ಲ್ಯಾನ್ ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು, ಇದರಲ್ಲಿ ಆ್ಯಪ್ಗಳ ಉಚಿತ ಚಂದಾದಾರಿಕೆಯನ್ನೂ ಕೂಡ ನೀಡಲಾಗಿದೆ. ಈ ರೀಚಾರ್ಜ್ ಯೋಜನೆಯಲ್ಲಿ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್ಸ್ಟಾರ್, ಝೀ5, ವೂಟ್, ಸೋನಿಲೈವ್ ನಂತಹ ಅಪ್ಲಿಕೇಶನ್ಗಳು ಒಳಗೊಂಡಿದೆ.
1499 ರೂ. ರೀಚಾರ್ಜ್ ಪ್ಲ್ಯಾನ್ :
ಈ ಯೋಜನೆಯಲ್ಲಿ 300Mbps ವೇಗದ ಅನಿಯಮಿತ ಡೇಟಾ ಸೌಲಭ್ಯ ಲಭ್ಯವಿದ್ದು, ಒಟ್ಟು 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಈ ಯೋಜನೆ ಹೊಂದಿರುತ್ತದೆ. ಗ್ರಾಹಕರಿಗೆ ಇದರಲ್ಲಿ ಓಟಿಟಿ ಅಪ್ಲಿಕೇಶನ್ಗಳ ಚಂದಾದಾರಿಕೆ ಲಭ್ಯವಿದೆ. ಇದು ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್ಸ್ಟಾರ್, ಝೀ5, ವೂಟ್, ಸೋನಿಲೈವ್ ನಂತಹ ಅಪ್ಲಿಕೇಶನ್ಗಳನ್ನು ಒಳಗೊಂಡಿದೆ.
2023 ರೂ. ಪ್ರೀಪೇಯ್ಡ್ ಪ್ಲ್ಯಾನ್ :
2023 ರೂ. ಪ್ರೀಪೇಯ್ಡ್ ಪ್ಲ್ಯಾನ್ ಈ ವರ್ಷದಲ್ಲಿ ಬಿಡುಗಡೆಯಾದ ಮೊದಲ ವಾರ್ಷಿಕ ಯೋಜನೆಯಾಗಿದೆ. ಈ ಯೋಜನೆಯು ಒಟ್ಟು 252 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಹೊಂದಿದೆ. ಪ್ರತಿದಿನ 2.5 ಜಿಬಿ ಡೇಟಾ ಲಭ್ಯವಾಗಲಿದ್ದು, ಅನ್ಲಿಮಿಟೆಡ್ ಕರೆ ಸೌಲಭ್ಯ ಹಾಗೂ ಉಚಿತ ದೈನಂದಿನ 100 ಎಸ್ಎಮ್ಎಸ್ ಸೌಲಭ್ಯಗಳು ದೊರೆಯುತ್ತದೆ. ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಸಿನೆಮಾ ಹಾಗೂ ಇತರೆ ಆ್ಯಪ್ಗಳನ್ನು ಪಡೆಯಬಹುದು.