DJI ಯಿಂದ ಡ್ರೋನ್‌ ಅನಾವರಣ | ಆಕರ್ಷಕ ಲುಕ್‌ನೊಂದಿಗೆ ಹೊಸ ವಿನ್ಯಾಸ ಕೂಡಾ, ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ರೆಡಿ!

ಹೇಳಿಕೇಳಿ ಇದು ಡ್ರೋನ್ ಯುಗ, ಇಂದಿನ ದಿನಗಳಲ್ಲಿ ಡ್ರೋನ್ ಟೆಕ್ನಾಲಜಿ ಸಾಕಷ್ಟು ಮುಂದುವರೆದಿದೆ. ಹಲವು ಕ್ಷೇತ್ರಗಳಲ್ಲಿ ಡ್ರೋನ್ ಬಳಸುವ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಗ್ರಾಹಕರನ್ನು ಸೆಳೆಯಲು ಜನಪ್ರಿಯ ಬ್ರ್ಯಾಂಡ್ ಕಂಪೆನಿಗಳು ಕೂಡ ಒಂದಲ್ಲಾ ಒಂದು ವಿಭಿನ್ನ ಹಾಗೂ ವಿಶಿಷ್ಟ ಶೈಲಿಯ ಡ್ರೋನ್’ಗಳನ್ನು ಪರಿಚಯಿಸುತ್ತಾ ಬಂದಿವೆ. ಸದ್ಯ ಇದೀಗ ವಿವಿಧ ಉದ್ದೇಶಕ್ಕೆ ಬಳಕೆಯಾಗುವ ಡ್ರೋನ್ ತಯಾರಿಕೆಯಲ್ಲಿ ಪ್ರಸಿದ್ಧವಾಗಿರುವ ಡಿಜೆಐ ಕಂಪನಿ, ಆಕರ್ಷಕ ವಿನ್ಯಾಸದ ಹೊಸ ಲುಕ್’ನೊಂದಿಗೆ ಧೂಳೆಬ್ಬಿಸಲು ತಯಾರಾಗಿದೆ. ಇದರ ಕಲರ್, ಡಿಸೈನ್, ಲುಕ್ ಜನರನ್ನು ಗಮನಸೆಳೆಯುವಂತಿದೆ. ಹಾಗಾದ್ರೆ, ಬನ್ನಿ ಇದರ ವಿನ್ಯಾಸ, ವೈಶಿಷ್ಟ್ಯ, ತಂತ್ರಜ್ಞಾನ, ಬೆಲೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

DJI ಕಂಪೆನಿ ಹೊಸ ಎಂಟ್ರಿ ಲೆವೆಲ್ ಡ್ರೋನ್ DJI Mini 2 SE ಅನ್ನು ಲಾಂಚ್ ಮಾಡಿದ್ದು, ಈ ಡೋನ್ ಆಧುನಿಕ ಶೈಲಿಯ ಟೆಕ್ನಾಲಜಿಯಿಂದ ಕೂಡಿದೆ. ಇದು OcuSync 2.0 ಪ್ರಸರಣ ವ್ಯವಸ್ಥೆಯನ್ನು ಹೊಂದಿದ್ದು, ಈ ಹಿಂದಿನ ಆವೃತ್ತಿ DJI Mini SE ಗಿಂತ ಎರಡು ಪಟ್ಟು ಹೆಚ್ಚು ದೂರದಲ್ಲಿ ಹಾರುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರಲ್ಲಿ ಹಾರುವ ವ್ಯಾಪ್ತಿಯನ್ನು 4km ವರೆಗೆ ಸೀಮಿತಗೊಳಿಸಿದೆ. ಅಷ್ಟೇ ಅಲ್ಲದೆ ಇದರ ಸಿಸ್ಟಂ ಹೆಚ್ಚಿನ ದೂರದಲ್ಲಿ ಹೆಚ್ಚು ಸ್ಥಿರವಾದ ವೀಡಿಯೋ ಫೀಡ್ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೂ ಇದರಲ್ಲಿ ವರ್ಧಿತ WiFi ವ್ಯವಸ್ಥೆಯು ಇರಲಿದೆ.

ಇದರಲ್ಲಿ ಸೂಪರ್ ಕ್ಯಾಮೆರಾ ವ್ಯವಸ್ಥೆಯನ್ನು ನೀಡಲಾಗಿದ್ದು, ಇದು ಮೂರು-ಆಕ್ಸಿಸ್ ಗಿಂಬಲ್ ಮತ್ತು 1/2.3-ಇಂಚಿನ CMOS ಸೆನ್ಸಾರ್‌ನೊಂದಿಗೆ ಬರಲಿದೆ. ಇನ್ನು ಈ ಕ್ಯಾಮೆರಾ 2.7K ವೀಡಿಯೊ ಮತ್ತು 12 ಮೆಗಾಪಿಕ್ಸೆಲ್ ಸ್ಟಿಲ್ ಚಿತ್ರಗಳನ್ನು ಕ್ಯಾಪ್ಚರ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು 10km (6.2mi) ವರೆಗೆ HD ವೀಡಿಯೋ ಪ್ರಸರಣವನ್ನು ಬೆಂಬಲಿಸಲಿದ್ದು, 5 ಸ್ಟೆಪ್ಸ್ ಗಾಳಿಯ ಪ್ರತಿರೋಧವನ್ನು ಹೊಂದಿದೆ. ಇದರಿಂದಾಗಿ ಡ್ರೋನ್ 10.7 m/s (24mph) ಗಾಳಿಯಲ್ಲಿ ಸ್ಥಿರವಾಗಿ ಸುಳಿದಾಡಲು ಅನುಮತಿಸಲಿದೆ. ಹಾಗಾಗಿ ಎತ್ತರದ ಪ್ರದೇಶದಲ್ಲಿಯೂ ಸುಲಭವಾಗಿ ನೀವು ಡ್ರೋನ್ ಮೂಲಕ ವೀಡಿಯೋ ರೆಕಾರ್ಡ್ ಮಾಡಬಹುದು.

DJI Mini 2 SE ಡ್ರೋನ್ ನ ಬ್ಯಾಟರಿ ವ್ಯವಸ್ಥೆಯನ್ನು ನೋಡುವುದಾದರೆ ಉತ್ತಮವಾದ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಸಿಂಗಲ್ ಚಾರ್ಜ್‌ನಲ್ಲಿ ಅಂದಾಜು 31 ನಿಮಿಷಗಳವರೆಗೆ ಹಾರಾಟವಾಗುತ್ತದೆ ಎನ್ನಲಾಗಿದೆ. ಅಂದರೆ ಈ ಹಿಂದಿನ ಆವೃತ್ತಿಯ ಡ್ರೋನ್’ಗಿಂತ ಒಂದು ನಿಮಿಷ ಹೆಚ್ಚಿನ ಹಾರಾಟ ನಡೆಸಲಿದೆ. ಜೊತೆಗೆ ಈ ಡ್ರೋನ್ ಲೈಟ್ ವೆಯಿಟ್ ಆಗಿದ್ದು, ಕೇವಲ 249 ಗ್ರಾಂ ತೂಕವನ್ನು ಹೊಂದಿದೆ. ಹಾಗಾಗಿ ಸುಲಭವಾಗಿ ಕ್ಯಾರಿ ಮಾಡಬಹುದಾಗಿದೆ.

ಇನ್ನು ಈ ಡ್ರೋನ್ಅನ್ನು ನೀವು ಯಾವುದೇ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ನಲ್ಲಿ ರಿಜಿಸ್ಟರ್ ಮಾಡಿಸದೆ ಕೂಡಾ ಬಳಸಲು ಅವಕಾಶವಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಂಡಿರುವ ಹೊಸ DJI Mini 2 SE ಡ್ರೋನ್’ನ ಬೆಲೆಯು ಅಂದಾಜು 30,469ರೂ ಆಗಿದೆ. ಮುಂದಿನ ತಿಂಗಳಿನಿಂದ ಮಾರಾಟಕ್ಕೆ ಬರಲಿದೆಯಾದರೂ, ಭಾರತದಲ್ಲಿ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಡ್ರೋನ್’ಗಳ ಕಲರ್ ಆಯ್ಕೆಯ ವಿವರ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ.

Leave A Reply

Your email address will not be published.