ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನರ್ ಆಸ್ತಿ ಪಾಲು ಯಾರಿಗೆ ಗೊತ್ತಾ?
ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಅವರು ಸ್ಪಿನ್ ಬೌಲಿಂಗ್ ಅನ್ನು ಮರು ವ್ಯಾಖ್ಯಾನಿಸಿದ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.1992ರಲ್ಲಿ ಜಾಗತಿಕ ಕ್ರಿಕೆಟ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ ವಾರ್ನ್ ಸುಮಾರು 15 ವರ್ಷಗಳ ಕಾಲದ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 145 ಟೆಸ್ಟ್ ಪಂದ್ಯಗಳನ್ನಾಡಿ 708 ಟೆಸ್ಟ್ ವಿಕೆಟ್‌ಗಳನ್ನು ಪಡೆಯುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಇವರ ವೈಯಕ್ತಿಕ ಜೀವನದ ಕುರಿತ ರೋಚಕ ಮಾಹಿತಿಯೊಂದು ಬಯಲಾಗಿದೆ.
ಕಳೆದವರ್ಷ ಥಾಯ್ಲೆಂಡ್‌ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಶೇನ್ ವಾರ್ನ್ 52 ವರ್ಷದಲ್ಲೇ ಇಹಲೋಕದ ಯಾತ್ರೆ ಮುಗಿಸಿದ್ದರು. 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ ಬಳಿಕ ಕೌಂಟಿ ಕ್ರಿಕೆಟ್, ಇಂಡಿಯನ್ ಪ್ರೀಮಿಯರ್ ಲೀಗ್ ಗಳಲ್ಲಿ ತೊಡಗಿಸಿಕೊಂಡಿದ್ದರು. ಇದಲ್ಲದೇ, ಕಾಮೆಂಟ್ರಿ ಕೂಡಾ ಮಾಡುತ್ತಿದ್ದರು. ತನ್ನ ಸ್ಪಿನ್ ಮ್ಯಾಜಿಕ್ನಿಂದ ಹಲವು ವರ್ಷ ವಿಶ್ವ ಕ್ರಿಕೆಟ್ ನಲ್ಲಿ ತನ್ನ ಛಾಪು ಮೂಡಿಸಿದ ವಾರ್ನ್, ರಾಷ್ಟ್ರೀಯ ತಂಡ ಸೇರಿದಂತೆ ನಿವೃತ್ತಿಯ ಬಳಿಕ ಅನೇಕ ಫ್ರಾಂಚೈಸಿಗಳನ್ನು ಕೂಡ ಆಡಿ ಗಮನ ಸೆಳೆದಿದ್ದರು.
ವಾರ್ನ್ 1999 ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದು, 1001 ವಿಕೆಟ್ ಗಳಿಸಿದ ಸ್ಪಿನ್ ಮಾಂತ್ರಿಕ. ಇದರಿಂದಾಗಿ ಸಾಕಷ್ಟು ಸಂಪಾದನೆ ಕೂಡ ಮಾಡಿದ್ದರು ಎನ್ನಲಾಗಿದೆ. ವಾರ್ನ್ ಅವರು ಬರೋಬ್ಬರಿ 120 ಕೋಟಿ ಮೌಲ್ಯದ ಆಸ್ತಿಯನ್ನು ಬಿಟ್ಟುಹೋಗಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ ಈ ಆಸ್ತಿಯಲ್ಲಿ ಅವರ ಮಾಜಿ ಪತ್ನಿ ಮತ್ತು ಗೆಳತಿ-ಸಿಮೋನ್ ಮತ್ತು ಲಿಸಾ ಹಾರ್ಲೆ ಇಬ್ಬರಿಗೂ ನಯಾ ಪೈಸೆ ಕೂಡ ಸಿಗುತ್ತಿಲ್ಲ ಎನ್ನಲಾಗಿದೆ.
ವಿಕ್ಟೋರಿಯಾದ ಸುಪ್ರೀಂ ಕೋರ್ಟ್ ನಿರ್ಣಯದ ಅನುಸಾರ, ವಾರ್ನ್ ಅವರ ಯಮಹಾ ಮೋಟಾರ್‌ಬೈಕ್, BMW ಮತ್ತು ಮರ್ಸಿಡಿಸ್ ಕಾರನ್ನು ಮಗ ಜಾಕ್ಸನ್‌ಗೆ ನೀಡಲು ನಿರ್ಣಯ ಕೈಗೊಳ್ಳಲಾಗಿದೆ. ವಾರ್ನರ್, ರಿಯಲ್ ಎಸ್ಟೇಟ್ ಆಸ್ತಿ ಮೌಲ್ಯ ಸರಿಸುಮಾರು ಒಟ್ಟು 39 ಕೋಟಿಯಿದೆ ಎನ್ನಲಾಗಿದೆ.ಇದರ ಜೊತೆಗೆ ವಿಕ್ಟೋರಿಯಾದಲ್ಲಿ ಬರೋಬ್ಬರಿ 39 ಕೋಟಿ ರೂಪಾಯಿ ಮೌಲ್ಯದ ಮನೆ ಹೊಂದಿದ್ದು, ಅವರ ಆಸ್ಟ್ರೇಲಿಯನ್ ಬ್ಯಾಂಕ್ ಖಾತೆಯಲ್ಲಿ 5 ಮಿಲಿಯನ್ ಡಾಲರ್ ಹಣವಿದೆ. ಇದಲ್ಲದೆ, 24 ಮಿಲಿಯನ್‌ಗಿಂತಲೂ ಹೆಚ್ಚು ಷೇರನ್ನು ವಾರ್ನ್ ಹೊಂದಿದ್ದರು ಕೂಡ ಇದರಲ್ಲಿ ಅವರ ಮಾಜಿ ಪತ್ನಿಗೆ ಏನು ಕೂಡ ಲಭ್ಯವಾಗುತ್ತಿಲ್ಲ.
ಕೆಲ ವರದಿ ಪ್ರಕಾರ ವಾರ್ನ್ 120 ಕೋಟಿ ಮೌಲ್ಯದ ಆಸ್ತಿಯಲ್ಲಿ ವಾರ್ನ್ ಅವರ ಮೂವರು ಮಕ್ಕಳಾದ ಜಾಕ್ಸನ್, ಬ್ರೂಕ್ ಮತ್ತು ಸಮ್ಮರ್ ನಡುವೆ ಹಂಚಿಕೆಯಾಗಲಿದೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ಮಾಹಿತಿ ನೀಡಲಾಗಿದೆ. ವಾರ್ನ್ ಅವರ ಮೂವರಿಗೂ ತಲಾ 31 ಪರ್ಸೆಂಟ್ ಆಸ್ತಿ ಹಂಚಿಕೆಯಾಗಲಿದ್ದು, ಇದರ ನಡುವೆ ವಾರ್ನ್ ಅವರ ಸಹೋದರನ ಕುಟುಂಬಕ್ಕೆ ವಾರ್ನ್ ಅವರ ಆಸ್ತಿಯಲ್ಲಿ ಎರಡು ಪ್ರತಿಶತ ದೊರೆಯಲಿದೆ ಎನ್ನಲಾಗಿದೆ.