Surveyor District Wise Post List : ಸರ್ವೇಯರ್ ಹುದ್ದೆ ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಇದೆ? ಇಲ್ಲಿದೆ ಸಂಪೂರ್ಣ ವಿವರ
ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು 2000 ಭೂಮಾಪಕರ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ಕೆಳಗೆ ನೀಡಿರುವ ಪಟ್ಟಿಯಂತೆ ವಿವಿಧ ಜಿಲ್ಲೆಗಳಿಗೆ ಪರವಾನಗಿ ಭೂಮಾಪಕರ ಅವಶ್ಯಕತೆ ಇದ್ದು, ಭರ್ತಿ ಮಾಡಲು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಇದೀಗ ಒಟ್ಟು 2000 ಹುದ್ದೆಗಳ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿಗೆ ಎಂದು ಕೆಳಗಿನಂತೆ ತಿಳಿಯಿರಿ.
ಹುದ್ದೆಯ ಇಲಾಖೆ : ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ
ಹುದ್ದೆ ಹೆಸರು : ಭೂಮಾಪಕರು
ಹುದ್ದೆಗಳ ಸಂಖ್ಯೆ : 2000
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 02-02-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 20-02-2023 ರ ಸಂಜೆ 05-00 ಗಂಟೆವರೆಗೆ.
ಅರ್ಜಿ ಶುಲ್ಕ ರೂ.1000.
ಜಿಲ್ಲಾವಾರು ಭೂಮಾಪಕರ ಹುದ್ದೆಗಳ ವಿವರ
- ಉಡುಪಿ: 86
- ಉತ್ತರಕನ್ನಡ : 75
- ಕೊಡಗು: 25
- ಕೋಲಾರ: 53
- ಗದಗ : 54
- ಚಿಕ್ಕಮಗಳೂರು: 83
- ಚಿತ್ರದುರ್ಗ: 73
- ಚಾಮರಾಜನಗರ : 35
- ತುಮಕೂರು : 110
- ದಕ್ಷಿಣ ಕನ್ನಡ : 36
- ದಾವಣಗೆರೆ : 95
- ಧಾರವಾಡ : 92
- ಬೆಂಗಳೂರು ಗ್ರಾಮಾಂತರ: 66
- ಬೆಂಗಳೂರು ಜಿಲ್ಲೆ : 125
- ಬಿಜಾಪುರ : 32
- ಬೆಳಗಾವಿ : 85
- ಬಳ್ಳಾರಿ : 55
- ವಿಜಯನಗರ : 47
- ಬಾಗಲಕೋಟೆ : 47
- ಬೀದರ್ : 35
- ಮಂಡ್ಯ : 71
- ಮೈಸೂರು : 40
- ಯಾದಗಿರಿ : 20
- ರಾಮನಗರ : 100
- ರಾಯಚೂರು : 40
- ಶಿವಮೊಗ್ಗ : 125
- ಹಾವೇರಿ : 152
- ಹಾಸನ : 60
- ಕೊಪ್ಪಳ : 28
- ಕಲಬುರಗಿ : 10
- ಚಿಕ್ಕಬಳ್ಳಾಪುರ : 45
ಶೈಕ್ಷಣಿಕ ಅರ್ಹತೆಗಳು
- ಪಿಯುಸಿ ಅಥವಾ 12ನೇ ತರಗತಿ ಸಿಬಿಎಸ್ಇ ಅಥವಾ ಐಸಿಎಸ್ಇ ಇವುಗಳಲ್ಲಿ ವಿಜ್ಞಾನ ವಿಷಯವನ್ನು ಪಡೆದು ಗಣಿತ ವಿಷಯದಲ್ಲಿ ಶೇಕಡ.60 ಕ್ಕಿಂತ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
- ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿಇ /ಬಿ.ಟೆಕ್ ಸಿವಿಲ್ ಅಥವಾ ಸಿವಿಲ್ ಇಂಜಿನಿಯರಿಂಗ್ ಇನ್ ಡಿಪ್ಲೊಮ ಪಾಸ್ ಮಾಡಿರಬೇಕು.
- ಕರ್ನಾಟಕ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ ಲ್ಯಾಂಡ್ ಅಂಡ್ ಸಿಟಿ ಸರ್ವೆ’ಯಲ್ಲಿ ಪದವಿ ಪೂರ್ವ ಡಿಪ್ಲೊಮ ಪಾಸ್ ಮಾಡಿರಬೇಕು. ಅಥವಾ
- ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ ಐಟಿಐ ಇನ್ ಸರ್ವೆ ಟ್ರೇಡ್ನಲ್ಲಿ ಉತ್ತೀರ್ಣರಾಗಿರಬೇಕು. ಅಥವಾ
- ಕನಿಷ್ಠ 10 ವರ್ಷಗಳ ಭೂಮಾಪನ ಸೇವೆ ಸಲ್ಲಿಸಿ ನಿವೃತ್ತರಾದವರು ಸಹ ಪರವಾನಗಿ ಪಡೆಯಲು ಅರ್ಹರು.
ವಯಸ್ಸಿನ ಅರ್ಹತೆ - ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 65 ವರ್ಷ ಮೀರಿರಬಾರದು.
ಆಯ್ಕೆ ವಿಧಾನ:
2 ವಿಷಯಗಳಲ್ಲಿ ತಲಾ 100 ಅಂಕಗಳಿಗೆ, ವಸ್ತುನಿಷ್ಠ ಬಹು ಆಯ್ಕೆಯ ಪ್ರಶ್ನೆಗಳನ್ನೊಳಗೊಂಡಂತೆ ಪ್ರತ್ಯೇಕ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಿಗದಿಪಡಿಸಿದ ಕೇಂದ್ರಗಳಲ್ಲಿ ರಾಜ್ಯದಲ್ಲಿ ಒಂದೇ ದಿನದಂದು ಆನ್ಲೈನ್ ಟೆಸ್ಟ್ ನಡೆಸಿ ಅಥವಾ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಪಡೆಯುವ ಗರಿಷ್ಠ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಯಾವುದೇ ಸಂದರ್ಶನ ಇರುವುದಿಲ್ಲ.
ಅಭ್ಯರ್ಥಿಗಳಿಗೆ ಮೊದಲು ತರಬೇತಿ ನೀಡಿ, ಇದರಲ್ಲಿ ಉತ್ತೀರ್ಣರಾದವರಿಗೆ ಪರವಾನಗಿ ನೀಡಲಾಗುತ್ತದೆ.
ಮೇಲಿನ ಯಾವುದೇ ಜಿಲ್ಲೆಗೆ ಅರ್ಜಿ ಸಲ್ಲಿಸಲು ಅವಕಾಶ ಇದ್ದು ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಜಿಲ್ಲೆ ಆಯ್ಕೆ ಮಾಡಿಕೊಳ್ಳಬಹುದು. ಆದರೆ ನೇಮಕಾತಿ ಅಂತಿಮ ಹಂತದಲ್ಲಿ ಯಾವುದಾದರೂ ಒಂದು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು.
ಭೂಮಾಪಕನ ಕೆಲಸ ನಿರ್ವಹಿಸಲು ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ ಮೊದಲು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಿರ್ಧಿಷ್ಟಪಡಿಸಿದ ಜಿಲ್ಲಾ ಕೇಂದ್ರಗಳಲ್ಲಿ ಮಾರ್ಚ್ ಅಥವಾ ಏಪ್ರಿಲ್ 2023 ರಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಆದರೆ ಪರೀಕ್ಷೆಯ ಖಚಿತ ದಿನಾಂಕವನ್ನು ಮುಂದಿನ ದಿನಗಳಲ್ಲಿ ವೆಬ್ಸೈಟ್ನಲ್ಲಿ ತಿಳಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.