‘ನೀವ್ಯಾಕೆ ನಿಮ್ಮ ಹೆಸರಲ್ಲಿ ನೆಹರು ಸರ್‌ನೇಮ್ ಇಟ್ಕೊಂಡಿಲ್ಲ’? ಗಾಂಧಿ ಕುಟುಂಬಕ್ಕೆ ಪ್ರಶ್ನೆಯ ಸುರಿಮಳೆ ಗೈದು ನೇರ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ!
ನಿನ್ನೆ ತಾನೆ ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯದ ಮಾತುಗಳನ್ನಾಡುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸರ್ಕಾರದ ವಿರುದ್ಧ, ಪ್ರಧಾನಿ ಮೋದಿ ವಿರುದ್ಧ ಸಾಕಷ್ಟು ವಾಗ್ದಾಳಿ ನಡೆಸಿದರು. ಅದಾನಿ ವಿಚಾರವನ್ನೆತ್ತಿ ಕುಟುಕಿದರು. ಆದರೀಗ ಪ್ರಧಾನಿ ಮೋದಿ ಅವರು ಕೂಡ ಒಂದೊಂದಕ್ಕೂ ಸರಿಯಾದ ಪ್ರತ್ಯುತ್ತರಗಳನ್ನು ನೀಡುತ್ತ ಕಾಂಗ್ರೆಸ್ಸಿನ ಕಾಲೆಳೆದಿದ್ದಾರೆ. ಅಲ್ಲದೆ ಗಾಂಧಿ ಕುಟುಂಬದ ವಿರುದ್ಧ ನೇರ ದಾಳಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಅವರ ಮನೆತನದ ಹೆಸರಿನ ವಿಚಾರ ಹಿಡಿದು ಕಾಲೆಳೆಯಲೆತ್ನಿಸಿದ್ದಾರೆ.
ಹೌದು, ಕಾಂಗ್ರೆಸ್ ಪಕ್ಷದ ಒಂದೊಂದು ತಪ್ಪುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ದೇಶದ ತಂತ್ರಜ್ಞಾನದ ದೇಶದ ವಿಜ್ಞಾನದ ವಿರೋಧಿಗಳು ಎಂದು ಟೀಕೆ ಮಾಡಿದರು. ನಂತರ ಕಾರ್ಯಕ್ರಮಗಳಲ್ಲಿ ನೆಹರು ಹೆಸರನ್ನು ಹೇಳುವ ಕುರಿತು ಸದನದಲ್ಲಿ ವಿಷಯ ಪ್ರಸ್ತಾಪ ಆಗಿ, ಅದು ಗಾಂಧಿ ಕುಟುಂಬದ ಬುಡಕ್ಕೆ ಬಂದು ತಲುಪಿತು. ಮೋದಿಯವರು ಬಹಳ ಬುದ್ಧಿವಂತಿಕೆಯಿಂದಲೇ ಇದನ್ನು ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬದ ಮೇಲೆ ಪ್ರಯೋಗಿಸಿದರು.
‘ಸಾಮಾನ್ಯವಾಗಿ ನಮ್ಮ ಪಕ್ಷದ ಮೇಲೆ ಆರೋಪಗಳನ್ನು ವಿರೋಧ ಪಕ್ಷಗಳು ಮಾಡುತ್ತಲೇ ಇರುತ್ತವೆ. ದೇಶದ ಯಾವುದೇ ಕಾರ್ಯಕ್ರಮಗಳಾದರೂ ಅಲ್ಲಿ ನೆಹರು ಅವರ ಹೆಸರು ಹೇಳಲೇಬೇಕು ಎನ್ನುವ ರೀತಿಯಲ್ಲಿ ವರ್ತನೆ ಮಾಡುತ್ತವೆ. ಅವರು ದೇಶದ ಮೊದಲ ಪ್ರಧಾನಿಗಳು, ಅವರ ಹೆಸರನ್ನು ನಾವು ಹೇಳುತ್ತೇವೆ. ಕೆಲವೊಮ್ಮೆ ನಮ್ಮಿಂದಲೂ ಅಚಾತುರ್ಯಗಳಾಗುತ್ತವೆ. ಅವರ ಹೆಸರು ಹೇಳದೇ ಬಿಟ್ಟಿರುತ್ತೇವೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷ ಯಾವ ರೀತಿ ವರ್ತಿಸುತ್ತದೆ ಎನ್ನುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಎಂದು ಅವರು ಹೇಳಿದರು.
‘ಅಗತ್ಯವಿದಲ್ಲಿ ಅವರ ಹೆಸರು ಹೇಳಿದ್ದೇವೆ. ತಪ್ಪಾದಲ್ಲಿ ಸರಿ ಪಡಿಸಿಕೊಂಡಿದ್ದೇವೆ. ವಿರೋಧ ಪಕ್ಷ ಅಧಿಕಾರದಲ್ಲಿದ್ದಾಗ ಕನಿಷ್ಠ 600 ಯೋಜನೆಗಳಿಗೆ ನೆಹರು ಹಾಗೂ ಗಾಂಧಿ ಹೆಸರು ನೀಡಿದೆ. ಪ್ರತಿ ಬಾರಿಯೂ ನೆಹರು ಹೆಸರು ಹೇಳಿಲ್ಲ ಎಂದಾದರೆ ಅವರು ಅದನ್ನು ದೊಡ್ಡ ತಪ್ಪು ಎನ್ನುವಂತೆ ಬಿಂಬಿಸುತ್ತಾರೆ. ನಾನು ಎಲ್ಲರಿಗೂ ಒಂದು ಮಾತು ಹೇಳಲು ಬಯಸುತ್ತೇನೆ. ಈ ದೇಶ ಯಾವುದೇ ಕುಟುಂಬದ ರಿಯಲ್ ಎಸ್ಟೇಟ್ ಆಸ್ತಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಅವರು ‘ನೆಹರು ಹೆಸರು ಹೇಳಿಲ್ಲ ಎಂದಾಗ ತಲೆಕೆಡಿಸಿಕೊಳ್ಳುವ ಇವರಿಗೆ ನಾನು ಒಂದೇ ಪ್ರಶ್ನೆ ಕೇಳಲು ಬಯಸುತ್ತೇನೆ. ನೆಹರು ಹೆಸರು ಹೇಳಿಲ್ಲ ಎಂದು ಯಾವಾಗ್ಲೂ ತಲೆ ಕೆಡಿಸಿಕೊಳ್ಳುವ ನೀವು ನಿಮ್ಮ ಸರ್‌ನೇಮ್‌ನಲ್ಲಿ ಯಾಕೆ ಅವರ ಹೆಸರು ಇಟ್ಟುಕೊಂಡಿಲ್ಲ ಎಂದು ಪ್ರಶ್ನೆ ಮಾಡಿದರು. ಅವರ ತಲೆಮಾರಿನ ಯಾವುದೇ ವ್ಯಕ್ತಿ ನೆಹರೂ ಸರ್‌ನೇಮ್ ಅನ್ನು ಹೊಂದಲು ಏಕೆ ನಾಚಿಕೆ ಪಟ್ಟುಕೊಳ್ಳುತ್ತಾರೆ ಅನ್ನೋದೆ ನನಗೆ ಅರ್ಥವಾಗಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹೆಚ್ಚಿನ ಎಲ್ಲಾ ಯೋಜನೆಗಳಿಗೆ ನೆಹರು, ಗಾಂಧಿ ಹೆಸರನ್ನು ಇಟ್ಟಿದೆ ಎನ್ನುವುದನ್ನು ಪತ್ರಿಕೆಯಲ್ಲಿ ನೋಡಿದ್ದೇನೆ. ನೆಹರು ಅಷ್ಟು ಗ್ರೇಟ್ ಎಂದಾದಲ್ಲಿ ಅವರು ಕುಟುಂಬದವರೇಕೆ ನೆಹರು ಸರ್ ನೇಮ್ ಇರಿಸಿಕೊಂಡಿಲ್ಲ ಎಂದು ಪ್ರಶ್ನೆ ಮಾಡಿ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.
ಕೆಲವರಿಗೆ ಸರ್ಕಾರದ ಯೋಜನೆಗಳ ಹೆಸರುಗಳು ಮತ್ತು ಸಂಸ್ಕೃತ ಪದಗಳ ಹೆಸರಿನಲ್ಲಿ ಸಮಸ್ಯೆಗಳಿವೆ. ನಾನು ವರದಿಯಲ್ಲಿ 600 ಸರ್ಕಾರಿ ಯೋಜನೆಗಳು ಗಾಂಧಿ-ನೆಹರೂ ಕುಟುಂಬದ ಹೆಸರಿನಲ್ಲಿವೆ ಎಂದು ನಾನು ಓದಿದ್ದೇನೆ. ನೆಹರು ಅಂತಹ ಮಹಾನ್ ವ್ಯಕ್ತಿಯಾಗಿದ್ದಲ್ಲಿ, ಕುಟುಂಬದವರು ಅವರ ಸರ್‌ನೇಮ್ ಬಳಸಿಕೊಳ್ಳಲು ಏಕೆ ಹಿಂಜರಿಯುತ್ತಿದೆ ಎಂದು ರಾಜ್ಯಸಭೆಯಲ್ಲಿ ಮೋದಿ ಮಾತಿನ ಬಾಣ ಎಸೆದರು