ಉಡುಪಿ : ಪ್ರಯೋಗ ಶಾಲಾ ತಂತ್ರಜ್ಞರ ಹುದ್ದೆಗೆ ಅರ್ಜಿ ಆಹ್ವಾನ

ಜಿಲ್ಲಾ ಆರೋಗ್ಯ ಮತ್ತು ಕು, ಕ. ಸೊಸೈಟಿ (ರಿ), – ಕ್ಷಯ ವಿಭಾಗ ಉಡುಪಿ ಜಿಲ್ಲೆ, ಉಡುಪಿ ಇದರಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವಂಡ್ಸೆಗೆ ಈ ಕೆಳಗೆ ನಮೂದಿಸಿರುವಂತೆ, ನೇರ ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ (ಅಥವಾ 31-03-2023ವರೆಗೆ) ಕಾರ್ಯ ನಿರ್ವಹಿಸಲು ಆರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

 

ಅರ್ಜಿ ನಮೂನೆಯನ್ನು Udupi.nic.in. ನಲ್ಲಿ ಕೊಡಲಾಗಿದೆ. ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಎಲ್ಲಾ ಮೂಲ ದಾಖಲಾತಿ ಹಾಗೂ ದೃಢೀಕೃತ ದಾಖಲೆಗಳೊಂದಿಗೆ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕು, ಕ. ಅಧಿಕಾರಿಗಳ ಕಛೇರಿ, ಹಿಂಭಾಗ, ಅಜ್ಜರಕಾಡು, ಉಡುಪಿ, ಇಲ್ಲಿ Walk in Intrew ಗೆ ದಿನಾಂಕ 15-02-2023 ರಂದು ಪೂರ್ವಾಹ್ನ 10 ಘಂಟೆಯಿಂದ 11-00 ಘಂಟೆಯ ಒಳಗೆ ಹಾಜರಾಗುವುದು.

ನಂತರ ಬಂದ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳು ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.

ಹುದ್ದೆ : ಪ್ರಯೋಗ ಶಾಲಾ ತಂತ್ರಜ್ಞರು
ಹುದ್ದೆ ಸಂಖ್ಯೆ : 01
ಮಾಸಿಕ ವೇತನ : ರೂ.16,100
ವಯೋಮಿತಿ : ಗರಿಷ್ಠ 35.

ಹುದ್ದೆಯ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.