ಟಾಟಾ ಕಂಪನಿಯ ಈ ಬೆಸ್ಟ್‌ ಕಾರುಗಳು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸೇಲ್‌ ! ಯಾಕೆ ? ಕಾರಣ ಇಲ್ಲಿದೆ

ಭಾರತದ ಮಾರುಕಟ್ಟೆಗೆ ಹೊಚ್ಚ ಹೊಸ ಕಾರುಗಳು ಎಂಟ್ರಿ ನೀಡುತ್ತಲೇ ಇವೆ. ವಾಹನ ತಯಾರಕ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಮಾಡೆಲ್’ಗಳನ್ನು ಪರಿಚಯಿಸುತ್ತಿದ್ದಾರೆ. ಅದರಲ್ಲಿ ಕೆಲವು ವಾಹನಗಳು ತಮ್ಮ ವಿಭಿನ್ನ ವಿನ್ಯಾಸ, ಫೀಚರ್, ಬೆಲೆಯಿಂದ ಅತಿ ಬೇಗನೆ ಮಾರಾಟವಾಗಿ, ಉತ್ತಮ ಪ್ರತಿಕ್ರಿಯೆ ಪಡೆದಿರುತ್ತದೆ. ಇದೀಗ ಮಾರುಕಟ್ಟೆ ಕ್ಷೇತ್ರದಲ್ಲಿ ಜನಪ್ರಿಯ ಕಂಪನಿಗಳಲ್ಲೊಂದಾದ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಹೆಚ್ಚು ಮಾರಾಟವಾದ ಕಾರುಗಳ ಬಗ್ಗೆ ಮಾಹಿತಿ ನೀಡಿದ್ದು, ಕಳೆದ ತಿಂಗಳು ಅಂದ್ರೆ, ಜನವರಿಯಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಲಿಸ್ಟ್ ಇಲ್ಲಿದೆ.

ಜನವರಿಯಲ್ಲಿ ಟಾಟಾ ಮೋಟಾರ್ಸ್ 47,987 ಕಾರುಗಳನ್ನು ಮಾರಾಟ ಮಾಡಿದೆ. ವಾರ್ಷಿಕ ಆಧಾರದ ಅಂಕಿ ಅಂಶಗಳನ್ನು ನೋಡುವುದಾದರೆ ಕಾರಿನ ಮಾರಾಟ 17.68 ಪ್ರತಿಶತದಷ್ಟು ಹೆಚ್ಚಾಗಿದೆ. ಕಳೆದ ವರ್ಷ ಈ ಜನವರಿಯಲ್ಲಿ ಕೇವಲ 40777 ಯೂನಿಟ್‌ಗಳಷ್ಟು ಟಾಟಾ ಕಾರು ಮಾರಾಟವಾಗಿತ್ತು. ಆದರೆ, ಈ ಬಾರಿ ಜನವರಿ 2023 ರಲ್ಲಿ, ಕಂಪನಿಯು ಇದಕ್ಕಿಂತ 7210 ಹೆಚ್ಚು ಯುನಿಟ್‌ಗಳನ್ನು ಕಂಪನಿ ಮಾರಾಟ ಮಾಡಿದೆ. ಟಾಟಾ ಮೋಟಾರ್ಸ್ ದೇಶದ ಮೂರನೇ ಅತಿದೊಡ್ಡ ಕಾರು ಮಾರಾಟ ಕಂಪನಿಯಾಗಿ ಹೊರ ಹೊಮ್ಮಿದೆ. ಕಂಪನಿಯ

ಟಾಟಾ ನೆಕ್ಸನ್ : ಅತಿ ಹೆಚ್ಚು ಮಾರಾಟವಾದ ಕಾರುಗಳ ಲಿಸ್ಟ್’ನಲ್ಲಿ
ಟಾಟಾ ನೆಕ್ಸಾನ್ ಕೂಡಾ ಒಂದು. ಟಾಟಾ ಮೋಟಾರ್ಸ್ ಜನವರಿ 2023 ರಲ್ಲಿ ನೆಕ್ಸಾನ್‌ನ 15,567 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಅದರ ಮಾರಾಟದಲ್ಲಿ 13 ಪ್ರತಿಶತದಷ್ಟು ವಾರ್ಷಿಕ ಪ್ರಗತಿಯನ್ನು ದಾಖಲಿಸಿದೆ. ನೆಕ್ಸಾನ್‌ನ ಪ್ರಬಲ ಅಂಶವೆಂದರೆ ಅದರ ಪವರ್‌ಟ್ರೇನ್ ಆಯ್ಕೆಗಳು. Nexon ಪೆಟ್ರೋಲ್, ಡೀಸೆಲ್ ಮತ್ತು EV ಎಂಬ ಒಟ್ಟು ಮೂರು ಆವೃತ್ತಿಗಳಲ್ಲಿ ಲಭ್ಯವಿದೆ. ಇಷ್ಟು ಮಾತ್ರವಲ್ಲದೆ ಇದರ CNG ಆವೃತ್ತಿ ಕೂಡ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಟಾಟಾ ಪಂಚ್ : ಟಾಟಾ ಪಂಚ್ ಕಂಪನಿಯ ಇತ್ತೀಚಿನ ಮಾಡೆಲ್ ಆಗಿದೆ. ಇದು ಟಾಟಾದ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರಾಗಿದೆ. ಟಾಟಾ ಮೋಟಾರ್ಸ್ ಕಳೆದ ವರ್ಷ ಜನವರಿಯಲ್ಲಿ 10,027 ಯುನಿಟ್ ಗಳಷ್ಟನ್ನು ಮಾರಾಟ ಮಾಡಿದ್ದು, ಈ ವರ್ಷ ಕಂಪನಿ 12,006 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಅಂದರೆ ಈ ಕಾರಿನ ಮಾರಾಟದಲ್ಲಿ 20 ಪ್ರತಿಶತದಷ್ಟು ಹೆಚ್ಚಾಗಿದೆ. ಪಂಚ್ ಅನ್ನು ಪ್ರಸ್ತುತ ಪೆಟ್ರೋಲ್ ಎಂಜಿನ್‌ನೊಂದಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನೇನು ಕೆಲ ಸಮಯದಲ್ಲಿ CNG ಆವೃತ್ತಿ ಕೂಡಾ ಬಿಡುಗಡೆಯಾಗಲಿದೆ.

ಟಾಟಾ ಟಿಯಾಗೊ :ಜನವರಿ 2023 ರಲ್ಲಿ ಟಾಟಾದ ಅತ್ಯುತ್ತಮ ಮಾರಾಟವಾಗುವ ಕಾರುಗಳ ಲಿಸ್ಟ್ ನಲ್ಲಿ ಟಿಯಾಗೊ ಹ್ಯಾಚ್‌ಬ್ಯಾಕ್ ಮೂರನೇ ಸ್ಥಾನ ಪಡೆದಿದೆ. ಕಳೆದ ತಿಂಗಳು, ಟಾಟಾ ಅದರ 9,032 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಆದರೆ ಜನವರಿ 2022 ರಲ್ಲಿ ಕೇವಲ 5,195 ಯುನಿಟ್‌ಗಳಷ್ಟೇ ಮಾರಾಟವಾಗಿತ್ತು. ಅಂದರೆ ಈ ಕಾರಿನ ಮಾರಾಟದಲ್ಲಿ ಶೇ.74 ಹೆಚ್ಚಾಗಿದೆ. ಪೆಟ್ರೋಲ್ ಎಂಜಿನ್ ಜೊತೆಗೆ, ಟಾಟಾ ಟಿಯಾಗೊ ಸಿಎನ್‌ಜಿ ಆವೃತ್ತಿಯಲ್ಲಿಯೂ ಲಭ್ಯವಿದೆ. ಇದರ ಆಲ್-ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆವೃತ್ತಿಯು ಭಾರತದಲ್ಲಿ ಅಗ್ಗದ EV ಆಗಿದೆ.

Leave A Reply

Your email address will not be published.