ಭಾರೀ ಜನಪ್ರಿಯತೆ ಪಡೆದ ವೆಬ್‌ ಸಿರೀಸ್‌ ‘ದಿ ಫ್ಯಾಮಿಲಿ ಮ್ಯಾನ್ 3’ ರಿಲೀಸ್ ದಿನಾಂಕ ರಿವೀಲ್!

Share the Article

ಅಮೆಜಾನ್ ಪ್ರೈಮ್ ವೀಡಿಯೊ ಮೂಲಕ ಜನರನ್ನು ಮತ್ತೊಮ್ಮೆ ರಂಜಿಸುವ ನಿಟ್ಟಿನಲ್ಲಿ ವೈರಸ್ ಕಥೆ ಆಧರಿತ ‘ದಿ ಫ್ಯಾಮಿಲಿ ಮ್ಯಾನ್ 3’ ಅತೀ ಶೀಘ್ರದಲ್ಲೆ ಬರಲಿದೆ.ರಾಜ್ ಹಾಗೂ ಡಿಕೆ ಒಟ್ಟಾಗಿ ಈ ಸೀರಿಸ್ ನಿರ್ದೇಶನ ಮಾಡಿದ್ದು, ಜನರು ಕಾತುರದಿಂದ ಎದುರು ನೋಡುತ್ತಿದ್ದ ಮೂರನೇ ಸೀರೀಸ್ ಬರಲು ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಹೀಗಾಗಿ, ಸದ್ಯದಲ್ಲೇ ಪ್ರೈಮ್ ವೀಡಿಯೊ ಮೂಲಕ ಮನೋಜ್ ಬಾಜ್​ಪಾಯಿ (Manoj Bajpayee) ಅವರ ನಟನೆಯ ರಂಗನ್ನು ವೀಕ್ಷಿಸಬಹುದು. ಈಗಾಗಲೇ ತೆರೆ ಕಂಡ ಸೀರೀಸ್ ನಲ್ಲಿ ಮನೋಜ್ ಬಾಜ್ ಅವರ ಪಾತ್ರದ ಮ್ಯಾನರಿಸಂ ಕಂಡು ಹೆಚ್ಚಿನವರು ಫಿದಾ ಆಗಿ ಬಿಟ್ಟಿದ್ದು ಮುಂದಿನ ಸರಣಿ ಯಾವಾಗ ಬರುತ್ತೆ ಅಂತ ಎದುರು ನೋಡುತ್ತಿದ್ದ ಮಂದಿಗೆ ಗುಡ್ ನ್ಯೂಸ್ ಲಭ್ಯವಾಗಿದೆ.

ಈಗಾಗಲೇ, ಮನೋಜ್ ಬಾಜ್​ಪಾಯಿ (Manoj Bajpayee) ಅವರ ನಟನೆಯ ‘ದಿ ಫ್ಯಾಮಿಲಿ ಮ್ಯಾನ್’ ಸರಣಿಯಲ್ಲಿ ಎರಡು ಸೀಸನ್​ಗಳು ತೆರೆ ಕಂಡು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಮೂರನೇ ಸರಣಿ ಕೂಡ ಜನರಿಗೆ ಭರ್ಜರಿ ಮನರಂಜನೆ ನೀಡಲು ರೆಡಿಯಾಗಿದೆ. ಸದ್ಯ ರಿಲೀಸ್ ಮನೋಜ್ ಬಾಜ್​ಪಾಯಿ ಅವರು ಜನರ ಕೌತುಕಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ರಿಲೀಸ್ ದಿನಾಂಕದ ಮಾಹಿತಿ ನೀಡಿದ್ದಾರೆ. ಈ ವರ್ಷದ ಹೋಳಿ ಹಬ್ಬದ ರಂಗು ದುಪ್ಪಟ್ಟು ಮಾಡಲು ಈ ತಂಡ ಭರಪೂರ ತಯಾರಿ ನಡೆಸಿದೆ.

ಮೊದಲ ಸೀಸನ್​ನಲ್ಲಿ ಪಾಕ್​ ಟೆರರಿಸ್ಟ್​ಗಳ ಕಥಾ ಹಂದರದ ಮೂಲಕ 2021ರಲ್ಲಿ ‘ದಿ ಫ್ಯಾಮಿಲಿ ಮ್ಯಾನ್ 2’ ರಿಲೀಸ್ ಆಗಿತ್ತು.ನಿರ್ದೇಶಕರಾದ ರಾಜ್​ ಹಾಗೂ ಡಿಕೆ ಎರಡನೇ ಸೀಸನ್​ನಲ್ಲಿ ಶ್ರೀಲಂಕಾ ರೆಬೆಲ್ಸ್​ಗಳ ಕಥೆಯ ಮೂಲಕ ಜನ ಮಾನಸದಲ್ಲಿ ಸ್ಥಾನ ಪಡೆದಿದೆ. ಅದರಲ್ಲಿಯೂ ಸಮಂತಾ ಪಾತ್ರ ಹೆಚ್ಚಿನವರ ಮೋಸ್ಟ್ ಫೇವರೇಟ್ ಆಗಿತ್ತು. ಈ ನಡುವೆ ಈ ಸೀಸನ್ ಕೊನೆಯಲ್ಲಿ ಮೂರನೇ ಪಾರ್ಟ್ ಬರಲಿದೆ ಎನ್ನುವ ಸುದ್ದಿ ಎಲ್ಲೆಡೆ ಟ್ರೆಂಡ್ ಸೃಷ್ಟಿಸಿತ್ತು. ಮೂರನೇ ಸೀರೀಸ್ ವೈರಸ್ ಕಥೆಯನ್ನು ಆಧರಿಸಿದ್ದು ‘ದಿ ಫ್ಯಾಮಿಲಿ ಮ್ಯಾನ್ 3’ ಅತೀ ಶೀಘ್ರದಲ್ಲೆ ರಿಲೀಸ್ ಆಗಲಿದೆ ಎಂದು ಮನೋಜ್ ಬಾಜ್​ಪಾಯಿ ಮಾಹಿತಿ ನೀಡಿದ್ದಾರೆ.

‘ಈ ಹೋಳಿ ಹಬ್ಬಕ್ಕೆ ನಿಮ್ಮ ಕುಟುಂಬದ ಎದುರು ನಮ್ಮ ಕುಟುಂಬದ ಜತೆ ಬರುತ್ತಿದ್ದೇನೆ’ ಎಂದು ಮನೋಜ್ ಬಾಜ್​ಪಾಯಿ ಹೇಳಿಕೊಂಡಿರುವ ವೀಡಿಯೋ ಎಲ್ಲೆಡೆ ಟ್ರೆಂಡ್ ಮಾಡುತ್ತಿದೆ. ‘ಕುಟುಂಬ ಸಮೇತ ಬರುತ್ತಿದ್ದೇನೆ. ನಮ್ಮನ್ನು ಸ್ವಾಗತಿಸುವುದಿಲ್ಲವೇ’ ಎನ್ನುವ ಕ್ಯಾಪ್ಶನ್ ಕೂಡ ನೀಡಲಾಗಿದ್ದು, ಈ ಪೋಸ್ಟ್​ಗಗೆ ನಾನಾ ಬಗೆಯ ಕಮೆಂಟುಗಳು ಬರುತ್ತಿವೆ. ‘ಬನ್ನಿ ಬನ್ನಿ ನಿಮಗಾಗಿ ಕಾಯುತ್ತಿದ್ದೆವು’ ಎಂದು ಹೆಚ್ಚಿನವರು ಮುಂದಿನ ಸರಣಿಯ ಬಗ್ಗೆ ತಮಗಿರುವ ಕುತೂಹಲವನ್ನು ವ್ಯಕ್ತ ಪಡಿಸಿದ್ದಾರೆ. ‘ಈ ದಿನಕ್ಕಾಗಿ ಎಷ್ಟೊಂದು ಸಮಯದಿಂದ ಕಾಯುತ್ತಿದ್ದೆವು. ಏಕೆ ಇಷ್ಟು ತಡ ಮಾಡಿ ಬಿಟ್ಟಿರಿ ಎಂದು ಕೂಡ ಕೆಲವರು ಪ್ರಶ್ನಿಸಿದ್ದಾರೆ. ಸದ್ಯ ಮೂರನೇ ಸೀರೀಸ್ ಪ್ರೈಮ್ ವಿಡಿಯೋ ಮೂಲಕ ರಿಲೀಸ್ ಆಗಲಿದ್ದು ಎಪಿಸೋಡ್ ಗಳ ಜೊತೆಗೆ ಕಥಾ ಹಂದರ ಹೇಗಿರಲಿದೆ ಎಂದು ಕಾದು ನೋಡಬೇಕಾಗಿದೆ.

Leave A Reply