OnePlus Pad ಟ್ಯಾಬ್ ಲಾಂಚ್ – ಪವರ್‌ಫುಲ್‌ ವಿನ್ಯಾಸದೊಂದಿಗೆ ಅತ್ಯಾಕರ್ಷಕ ಬೆಲೆಯಲ್ಲಿ ಲಭ್ಯ!

ಇದೀಗ ಟೆಕ್​ ಮಾರುಕಟ್ಟೆಗೆ ಜನಪ್ರಿಯ ಕಂಪೆನಿಯಾಗಿರುವ ಒನ್​ಪ್ಲಸ್​ ಟ್ಯಾಬ್ಲೆಟ್​ ಅನ್ನು ಬಿಡುಗಡೆ ಮಾಡಲಿದ್ದು, ಇದಕ್ಕೆ ಒನ್​​ಪ್ಲಸ್​ ಪ್ಯಾಡ್ ಎಂದು ಹೆಸರನ್ನು ಇಡಲಾಗಿದೆ. ಈ ಟ್ಯಾಬ್​ನ ವಿನ್ಯಾಸದ​ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿದ್ದು, ಫೀಚರ್ಸ್​ಗಳ ಮಾಹಿತಿಯು ಸಹ ಹೊರಬಿದ್ದಿದೆ.

ಹೌದು ಭಾರತದಲ್ಲಿ OnePlus ಆಯೋಜಿಸಿದ್ದ OnePlus Cloud 11 ಸಮಾರಂಭದಲ್ಲಿ OnePlus ಕಂಪೆನಿಯ ಮೊದಲ ಆಂಡ್ರಾಯ್ಡ್ ಟ್ಯಾಬ್ಲೆಟ್ ‘OnePlus Pad’ ಪರಿಚಯಗೊಂಡಿದೆ.

ಹೊಸ ‘OnePlus Pad’ ಟ್ಯಾಬ್ಲೆಟ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು ಯಾವುವು ಮತ್ತು ಗ್ರಾಹಕರಿಗೆ ಈ ಟ್ಯಾಬ್ ಖರೀದಿಗೆ ಲಭ್ಯವಾಗುವುದು ಯಾವಾಗ ಎಂಬ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಸಲಾಗಿದೆ.

OnePlus Pad ಟ್ಯಾಬ್ಲೆಟ್ ವೈಶಿಷ್ಟ್ಯಗಳು:

  • OnePlus ಪರಿಚಯಿಸಿರುವ ಮೊದಲ ಆಂಡ್ರಾಯ್ಡ್ ಟ್ಯಾಬ್ಲೆಟ್ ಹಿಂಭಾಗದ ಫಲಕದ ಮಧ್ಯಭಾಗದಲ್ಲಿ ಒಂದೇ ಕ್ಯಾಮೆರಾ ಮತ್ತು ಕಂಪೆನಿಯ ಲೋಗೊ ಇರುವಂತಹ ಪ್ರೀಮಿಯಂ ಮಿರರ್‌ ಸ್ಕ್ರೀನ್‌ನಂತಹ ವಿನ್ಯಾಸ ಹಾಗೂ ಆಲಿವ್ ಗ್ರೀನ್ ಬಣ್ಣದಲ್ಲಿ ಬಿಡುಗಡೆಯಾಗಿದೆ.
  • ಈ OnePlus Pad ಟ್ಯಾಬ್‌ನಲ್ಲೊ 144Hz ರಿಫ್ರೆಶ್ ರೇಟ್ ಸಾಮರ್ಥ್ಯ ಹೊಂದಿರುವ 2800×2000 ರೆಸಲ್ಯೂಶನ್ (296 ppi) ಮತ್ತು 500nits ಬ್ರೈಟ್‌ನೆಸ್ ಹೊಂದಿರುವ 11.61-ಇಂಚಿನ 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ ಅಳವಡಿಸಲಾಗಿದ್ದು, ಇದು 7:5 ಸ್ಕ್ರೀನ್ ಅನುಪಾತ ಮತ್ತು 88 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದಲ್ಲಿದೆ.
  • ಈ OnePlus Pad ಸಾಧನವು ಹೊಂದಾಣಿಕೆಯ ಮ್ಯಾಗ್ನೆಟಿಕ್ ಕೀಬೋರ್ಡ್ ಮತ್ತು ಚಿಲ್ಲರೆ ಬಾಕ್ಸ್‌ನಲ್ಲಿ ಸ್ಟೈಲಸ್‌ನೊಂದಿಗೆ ಬರುತ್ತದೆ.
  • ಹುಡ್ ಅಡಿಯಲ್ಲಿ, 12GB LPDDR5 RAM ನೊಂದಿಗೆ ಜೋಡಲಾಗಿರುವ MediaTek Dimensity 9000 ಪ್ರೊಸೆಸರ್ ಹೊಂದಿರುವ ಆಂಡ್ರಾಯ್ಡ್ 13 ಓಎಸ್‌ನಲ್ಲಿ ಕೆಲಸ ಮಾಡಲಿದೆ.
  • ಈ ಟ್ಯಾಬ್ಲೆಟ್ ಡಾಲ್ಬಿ ವಿಷನ್ ಮತ್ತು ಡಾಲ್ಬಿ ಅಟ್ಮಾಸ್ ಬೆಂಬಲದ ಜೊತೆಗೆ ಕ್ವಾಡ್-ಸ್ಪೀಕರ್ ಸೆಟಪ್ ಓಮ್ನಿಬೇರಿಂಗ್ ಸೌಂಡ್ ಸರೌಂಡಿಂಗ್ ಸ್ಪೀಕರ್‌ಗಳನ್ನು ಹೊಂದಿದ್ದು, ಟ್ಯಾಬ್ಲೆಟ್‌ ಬಳಕೆಯನ್ನು ಆಧರಿಸಿ ಎಡ-ಬಲ ಚಾನಲ್‌ಗಳ ನಡುವೆ ಬದಲಾಯಿಸಬಹು ಎಂದು ಕಂಪೆನಿ ತಿಳಿಸಿದೆ.
  • ಇನ್ನುಳಿದಂತೆ, 5G ಸಿಮ್ ಬೆಂಬಲ, 13-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾಗಳ ಜೊತೆಗೆ ಈ ಟ್ಯಾಬ್ಲೆಟ್ 67W SUPERVOOC ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 9,510mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ ಎಂದು ತಿಳಿಸಲಾಗಿದೆ.

ಹಾಗೆಯೇ ಈ ಟ್ಯಾಬ್ಲೆಟ್​​ ಇನ್ನೇನು ಹಲವಾರು ಗುಣಮಟ್ಟದ ಫೀಚರ್ಸ್​ಗಳನ್ನು ಹೊಂದಿಕೊಂಡು ಬರುವ ನಿರೀಕ್ಷೆಯಿದೆ. ಸದ್ಯ OnePlus Pad ಟ್ಯಾಬ್ಲೆಟ್ ಭಾರತ, ಉತ್ತರ ಅಮೇರಿಕಾ, ಯುರೋಪ್ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿ ಮುಂದಿನ ಏಪ್ರಿಲ್‌ ತಿಂಗಳಿಂದ ಮುಂಗಡ-ಆರ್ಡರ್‌ಗಳಿಗೆ ಲಭ್ಯವಿರುತ್ತದೆ ಎಂದು OnePlus ಕಂಪೆನಿ ತಿಳಿಸಿದೆ. ಆದರೆ, ಈ OnePlus ಟ್ಯಾಬ್ಲೆಟ್‌ ನಿಗದಿತ ಬೆಲೆ ಎಷ್ಟು ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಈ ವರೆಗೂ ಬಹಿರಂಗಪಡಿಸಲಾಗಿಲ್ಲ.

Leave A Reply

Your email address will not be published.