ನೂತನ OnePlus Buds Pro 2 ಇಯರ್‌ಬಡ್ಸ್ ಬಿಡುಗಡೆ | ನೀರು ಮತ್ತು ಧೂಳು ನಿರೋಧಕ, ಅತ್ಯಂತ ಆಕರ್ಷಕ !!
ಭಾರತದ ಮಾರುಕಟ್ಟೆಯಲ್ಲಿ ಒನ್ ಪ್ಲಸ್ ಕಂಪೆನಿಯ OnePlus Buds Pro 2 ಎಂಬ ಇಯರ್‌ಬಡ್ಸ್ ಬಿಡುಗಡೆಯಾಗಲಿದೆ. ಇದು ಉತ್ತಮ ಫೀಚರ್ಸ್ ನೊಂದಿಗೆ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದೆ. ಇದರ ವೈಶಿಷ್ಟ್ಯದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
ಫೀಚರ್ಸ್ :
ಒನ್‌ಪ್ಲಸ್ ಬಡ್ಸ್ ಪ್ರೊ 2 ಇಯರ್‌ಬಡ್ಸ್ ಡಾಲ್ಬಿ ಅಟ್ಮಾಸ್ ಆಡಿಯೋ ಬೆಂಬಲ ಹೊಂದಿದ್ದು, ಡೈನಾಡಿಯೊ ಟ್ಯೂನಿಂಗ್ ಫೀಚರ್ಸ್ ಅನ್ನು ಒಳಗೊಂಡಿದೆ. ಈ ಇಯರ್ ಬಡ್ಸ್ 11 ಎಂಎಂ ಡೈನಾಮಿಕ್ ಡ್ರೈವರ್ ಮತ್ತು 6 ಎಂಎಂ ಪ್ಲ್ಯಾನರ್ ಡಯಾಫ್ರಾಮ್‌ನ ಜೊತೆಗೆ ಅನಾವರಣಗೊಂಡಿದೆ. ಹಾಗೂ ತಲ್ಲೀನಗೊಳಿಸುವ ವರ್ಚುವಲ್ ಸರೌಂಡ್ ಸೌಂಡ್ ಅನುಭವಕ್ಕಾಗಿ ಸ್ಪೇಷಿಯಲ್ ಆಡಿಯೊ ಬೆಂಬಲದೊಂದಿಗೆ ಬಂದಿರುವ ಈ ಸಾಧನವು AI ಶಬ್ದ-ಕಡಿತ ವೈಶಿಷ್ಟ್ಯವನ್ನು ಸಹ ಹೊಂದಿವೆ.
ಇಯರ್ ಬಡ್ಸ್ ನ ವಿಶೇಷತೆ ?
ವಾಲ್ಯೂಮ್, ಟ್ರ್ಯಾಕ್ ಚೇಂಜರ್ ಜೊತೆಗೆ ಕರೆ ಸ್ವೀಕರಿಸುವ ಮತ್ತು ಕಟ್ ಮಾಡುವಂತಹ ಅವಕಾಶವಿದೆ. ಅಲ್ಲದೆ, ಸಂಪರ್ಕ ಆಯ್ಕೆಗಳಲ್ಲಿ LHDC, AAC, SBC, ಮತ್ತು LC3 ಆಡಿಯೊ ಕೊಡೆಕ್‌ಗಳಿಗೆ ಬೆಂಬಲದೊಂದಿಗೆ ಬ್ಲೂಟೂತ್ ವರ್ಷನ್ 5.3 ನ ಕನೆಕ್ಟಿವಿಟಿ ಆಯ್ಕೆಯನ್ನು ಹೊಂದಿದ್ದು, ಆಂಡ್ರಾಯ್ಡ್ ಮತ್ತು ಐಓಎಸ್ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಕಾರ್ಯನಿರ್ವಹಿಸಲಿದೆ. ಇದಿಷ್ಟೇ ಅಲ್ಲದೆ, ಈ ಇಯರ್ ಬಡ್ಸ್ ವಾಟರ್ಪ್ರೂಫ್ ಆಗಿದ್ದು, IP55 ರೇಟಿಂಗ್‌ನೊಂದಿಗೆ ಪ್ರೀಮಿಯಂ ಇನ್ ಇಯರ್ ವಿನ್ಯಾಸ ಮತ್ತು ಕೇಸ್‌ನೊಂದಿಗೆ ಬಿಡುಗಡೆಯಾಗಿದ್ದು, ನೀರು ಮತ್ತು ಧೂಳು ನಿರೋಧಕವಾಗಿದೆ. ಇಯರ್‌ಬಡ್‌ಗಳು ಡ್ಯುಯಲ್ ಕನೆಕ್ಷನ್ ಫೀಚರ್ಸ್ ಅನ್ನು ಹೊಂದಿದೆ. ಹಾಗಾಗಿ ವಿವಿಧ ಡಿವೈಸ್ಗಳೊಂದಿಗೆ ವೇಗದಲ್ಲಿ ಕನೆಕ್ಟ್ ಆಗುತ್ತದೆ.
ಇನ್ನೂ, ಇದರ ಬ್ಯಾಟರಿ ಬಗ್ಗೆ ಹೇಳಬೇಕಾದರೆ, ಒನ್‌ಪ್ಲಸ್ ಬಡ್ಸ್ ಪ್ರೋ 2 ಇಯರ್‌ಬಡ್ಸ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ ಸಾಕು 39 ಗಂಟೆಗಳ ಕಾಲ ನಿರಂತರವಾಗಿ ಬಳಸಬಹುದು. ಈ ಸಾಧನವು ಡ್ಯುಯಲ್ ಕನೆಕ್ಷನ್, 9 ಗಂಟೆಗಳ ಬ್ಯಾಟರಿ ಬ್ಯಾಕಪ್ ನೀಡುವ 520mAh ಬ್ಯಾಟರಿ, Qi ವಾಯರ್‌ಲೆಸ್ ಚಾರ್ಜಿಂಗ್ ಸೌಲಭ್ಯಗಳನ್ನು ಹೊಂದಿದೆ.
ಅಲ್ಲದೆ ಈ ಇಯರ್ ಬಡ್ ನಿಮ್ಮ ಆರೋಗ್ಯದ ಕಾಳಜಿ ಕೂಡ ಮಾಡುತ್ತದೆ. ಹೇಗೆ ಅಂತೀರಾ? ಈ ಇಯರ್ ಬಡ್ ಸರ್ವಿಕಲ್ ಸ್ಪಿನ್ ಆರೋಗ್ಯ ಸಂಬಂಧಿ ಮೇಲ್ವಿಚಾರಣೆ ಮಾಡುತ್ತದೆ. ಈ ಸೌಲಭ್ಯ ಬೇಕಾದಲ್ಲಿ ಕಲರ್ ಓಎಸ್ 11.0 ಚಾಲಿತ ಸ್ಮಾರ್ಟ್‌ಫೋನ್ ಅನ್ನು ಬಳಸಿಕೊಂಡು ಈ ಇಯರ್‌ಬಡ್ಸ್ ಅನ್ನು ಬಳಸಬೇಕು. ಇದರಿಂದ ನಿಮ್ಮ ಆರೋಗ್ಯದ ಮಾಹಿತಿಯನ್ನು ತಿಳಿಯಬಹುದು.
ಬೆಲೆ ಮತ್ತು ಲಭ್ಯತೆ :
ಭಾರತದಲ್ಲಿ OnePlus Buds Pro 2 ಇಯರ್‌ಬಡ್ಸ್‌ಗಳನ್ನು 11,999 ರೂ.ಬೆಲೆಯಲ್ಲಿ ಪರಿಚಯಿಸಲಾಗಿದ್ದು, ಗ್ರಾಹಕರಿಗೆ ಅಬ್ಸಿಡಿಯನ್ ಬ್ಲಾಕ್ ಮತ್ತು ಆರ್ಬರ್ ಗ್ರೀನ್ ಎಂಬ ಎರಡು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಸಾಧನ ಇದೇ ಫೆಬ್ರವರಿ 14 ರಂದು ಗ್ರಾಹಕರಿಗೆ ಲಭ್ಯವಾಗಲಿದೆ. ಪ್ರೀ-ಬುಕ್ಕಿಂಗ್‌ಗೆ ಬರಲಿರುವ OnePlus ಇಂಡಿಯಾ ಅಧಿಕೃತ ಸೈಟ್, Amazon India, Flipkart, Myntra, OnePlus ಸ್ಟೋರ್ ಮತ್ತು ಇತರ ಆಯ್ದ ಪಾಲುದಾರ ಅಂಗಡಿಗಳಲ್ಲಿ ಖರೀದಿಸಬಹುದು ಎಂದು ಕಂಪೆನಿ ತಿಳಿಸಿದೆ.
OnePlus Buds Pro 2 ಸಾಧನದ ಜೊತೆಗೆ ನಿರ್ಮಿಸಲಾದ OnePlus Buds Pro 2R ಎಂಬ ಇಯರ್‌ಬಡ್ಸ್ ನ ವಿಶೇಷ ಮಾದರಿಯನ್ನೂ ಘೋಷಿಸಲಾಗಿದ್ದು, ಇದರ ಬೆಲೆ 9,999 ರೂ. ಆಗಿದೆ. OnePlus Buds Pro 2R ಮುಂದಿನ ಮಾರ್ಚ್‌ನಲ್ಲಿ ಖರೀದಿಗೆ ಲಭ್ಯವಿರುತ್ತದೆ ಎಂದು ಕಂಪೆನಿ ಹೇಳಿದೆ.