ಮುದ್ದಾದ ಮಗುವಿಗೆ ಜನ್ಮ ಕೊಟ್ಟ ಕೇರಳದ ತೃತೀಯ ಲಿಂಗಿ ದಂಪತಿ
ತೊದಲು ನುಡಿವ ಕಂದನ ಬಾಯಿಂದ ಮೊದಲ ಬಾರಿಗೆ ಬಂದ ‘ಅಮ್ಮ’ ಎಂಬ ಪದಕ್ಕೆ ಹೆಣ್ಣಿನ ಬದುಕನ್ನೇ ಸಾರ್ಥಕಗೊಳಿಸುವ ಮಾತೃ ಶಕ್ತಿ ಅಡಕವಾಗಿರುತ್ತದೆ. ಮದುವೆಯಾದ ಪ್ರತಿ ಜೋಡಿಯು ಕೂಡ ತಮ್ಮ ವಂಶದ ಕುಡಿಯ ನಿರೀಕ್ಷೆಯಲ್ಲಿರುವುದು ಸಹಜ. ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಕೇರಳದ ತೃತೀಯಲಿಂಗಿ ದಂಪತಿಗಳು ಮಗುವಿನ ನಿರೀಕ್ಷೆಯಲ್ಲಿದ್ದ ವಿಚಾರ ಎಲ್ಲೆಡೆ ವೈರಲ್ ಆಗಿ ಟ್ರೆಂಡ್ ಆಗಿತ್ತು. ಇದೀಗ, ಈ ಜೋಡಿಗೆ ಮಗುವಾಗಿದೆ ಎಂದು ತಿಳಿದುಬಂದಿದೆ.
ಜಿಯಾ ಪಾವಲ್ ಇತ್ತೀಚೆಗಷ್ಟೇ, ಇನ್ಸ್ಟಾಗ್ರಾಮ್ ನಲ್ಲಿ ಜಹಾದ್ ಎಂಟು ತಿಂಗಳ ಗರ್ಭಿಣಿ ಎಂದು ಘೋಷಿಸಿದ್ದರು. ಪಾವಲ್ ಮತ್ತು ಜಹಾದ್ ಕಳೆದ ಮೂರು ವರ್ಷಗಳಿಂದ ಜೊತೆಯಾಗಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ತಾನು ಹೆಣ್ಣಾಗಿ ಹುಟ್ಟದಿದ್ದರು ಕೂಡ ಹೆಣ್ತನ, ತಾಯ್ತನವನ್ನು ಅರಿತಿದ್ದೇನೆ. ತಾನು ಪ್ರತಿ ಬಾರಿ ತಾಯಿಯ ಕನಸನ್ನು ಕಾಣುತ್ತಿದೆ. ಸದ್ಯ ಈ ಸಮಯವು ನನ್ನ ಅಭಿಲಾಷೆಗಳು ನಡೆಯುತ್ತಿದ್ದು, ಉದರದೊಳಗೆ ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿರುವ ಮಗು ಗಂಡಾಗಲೀ, ಹೆಣ್ಣಾಗಲೀ ತಾನು ನವ ಮಾಸ ಮಗುವನ್ನು ಎದುರುನೋಡಲು ಕಾಯುವುದು ಅನಿವಾರ್ಯ. ಆದರೂ ಈ ಕ್ಷಣವನ್ನು ಆನಂದದಿಂದ ಕಳೆಯುತ್ತಿದ್ದೇವೆ ಎಂದು ಜಿಯಾ ಸಂತಸವನ್ನು ಹಂಚಿಕೊಂಡಿದ್ದರು.
ಇದೀಗ, ಕೇರಳದ ಈ ಜೋಡಿ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಮಗುವನ್ನು ಬರಮಾಡಿಕೊಂಡ ಸಂಭ್ರಮದಲ್ಲಿದ್ದು, ಇದು ದೇಶದಲ್ಲೇ ಮೊದಲ ಪ್ರಕರಣ ಎಂಬ ದಾಖಲೆ ಪಡೆದಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಬೆಳಗ್ಗೆ 9.30 ರ ಸುಮಾರಿಗೆ ಮಗು ಜನಿಸಿದೆ” ಎಂದು ತೃತೀಯಲಿಂಗಿ ದಂಪತಿಗಳಲ್ಲಿ ಒಬ್ಬರಾದ ಜಿಯಾ ಪಾವಲ್ ತಿಳಿಸಿದ್ದು, ಮಗುವಿಗೆ ಜನ್ಮ ನೀಡಿದ ಆಕೆಯ ಸಂಗಾತಿ ಜಹ್ಹಾದ್ ಹಾಗೂ ಮಗು ಇಬ್ಬರೂ ಆರೋಗ್ಯವಾಗಿ ಕ್ಷೇಮವಾಗಿ ದ್ದಾರೆ ಎಂದು ಪಾವಲ್ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಈ ನಡುವೆ ನವಜಾತ ಶಿಶುವಿನ ಲಿಂಗದ ಗುರುತನ್ನು ಬಹಿರಂಗಪಡಿಸಲು ನಿರಾಕರಿಸಿದ್ದು, ಅದನ್ನು ಸಾರ್ವಜನಿಕಗೊಳಿಸಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ ಎನ್ನಲಾಗಿದೆ.