Aadhar Card : ನಿಮ್ಮ ಆಧಾರ್ ದುರ್ಬಳಕೆಯಾಗುತ್ತಿದೆಯೇ? ಆನ್ಲೈನ್‌ನಲ್ಲಿ ಈ ರೀತಿ ಪರಿಶೀಲಿಸಿ!
ದೇಶದಲ್ಲಿ ಪ್ರತಿಯೊಬ್ಬ ನಾಗರಿಕ ಕೂಡ ಆಧಾರ್ ಕಾರ್ಡ್ ಹೊಂದುವುದು ಮುಖ್ಯ. ಇಲ್ಲವಾದಲ್ಲಿ ಸರ್ಕಾರದ ಸೌಲಭ್ಯದಿಂದ ವಂಚಿತರಾಗುತ್ತಾರೆ. ಇದೇ ಕಾರಣಕ್ಕೆ ಪ್ರತಿಯೊಬ್ಬರು ತಮ್ಮ ಆಧಾರ್ ಕಾರ್ಡ್ ಅನ್ನು ಪಡೆದುಕೊಳ್ಳುತ್ತಾರೆ. ಆಧಾರ್ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳು ಇರುತ್ತದೆ. ಈ ಬಹುಮುಖ್ಯ ದಾಖಲೆಯನ್ನು ಯಾರಾದರೂ ದುರ್ಬಳಕೆ ಮಾಡುತ್ತಿದ್ದಾರಾ? ನಿಮ್ಮ ಆಧಾರ್ ದುರ್ಬಳಕೆಯಾಗುತ್ತಿದ್ದರೆ ಅದನ್ನು ಹೇಗೆ ತಿಳಿದುಕೊಳ್ಳುವುದು? ಈ ಎಲ್ಲಾ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಆಧಾರ್ ದುರ್ಬಳಕೆಯಾಗುತ್ತಿದೆಯೇ? ಎಂಬುದನ್ನು ಆನ್ಲೈನ್ನಲ್ಲೇ ಪರಿಶೀಲಿಸಬಹುದು. ಹೇಗೆಂಬ ಮಾಹಿತಿ ಇಲ್ಲಿದೆ.
ಆಧಾರ್ ಕಾರ್ಡ್ ಅನ್ನು ಯಾರಾದರೂ ದುರ್ಬಳಕೆ ಮಾಡುತ್ತಿದ್ದಾರಾ? ಎಂಬುದನ್ನು ಆನ್ಲೈನ್‌ನಲ್ಲಿ ಹೀಗೆ ಪರಿಶೀಲಿಸಿ.
- ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (UIDAI) ‘ಆಧಾರ್ ಅಥೆಂಟಿಕೇಷನ್ ಹಿಸ್ಟ್ರಿ’ ಎಂಬ ಆಯ್ಕೆಯನ್ನು ನೀಡಿದೆ.
- ‘ಆಧಾರ್ ಅಥೆಂಟಿಕೇಷನ್ ಹಿಸ್ಟ್ರಿ’ ಪರಿಶೀಲಿಸಲು ಮೊದಲು www.uidai.gov.in ಈ ವೆಬ್ಸೈಟ್ಗೆ ಭೇಟಿ ನೀಡಿ.
- ನಂತರ ‘ಮೈ ಆಧಾರ್’ ಎಂಬ ಆಯ್ಕೆಗೆ ಕ್ಲಿಕ್ ಮಾಡಿ, ಆಧಾರ್ ಸೇವೆಗಳು ಎಂಬ ಆಯ್ಕೆಯಡಿಯಲ್ಲಿ ಬರುವಂತಹ ‘ಆಧಾರ್ ಅಥೆಂಟಿಕೇಷನ್ ಹಿಸ್ಟ್ರಿ’ಯನ್ನು ಕ್ಲಿಕ್ ಮಾಡಬೇಕು.
- ಆಧಾರ್ ನಂಬರ್ ನಮೂದಿಸಿ, ಸೆಕ್ಯೂರಿಟಿ ಕೋಡ್ ಹಾಗೂ ಒಟಿಪಿ ನಮೂದಿಸಿ ಲಾಗಿನ್ ಆಗಬೇಕು.
- ಒಟಿಪಿ ನಮೂದಿಸಿ ದೃಢೀಕೃತಗೊಂಡ ನಂತರ ‘ಪ್ರೊಸೀಡ್’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
- ಆಗ ನಿಮ್ಮ ಆಧಾರ್ ಕಾರ್ಡ್ಗೆ ಸಂಬಂಧಿಸಿದಂತಹ ಎಲ್ಲಾ ವಿವರಗಳು ಮತ್ತು ಹಿಂದಿನ ದೃಢೀಕರಣ ವಿನಂತಿಗಳ ಎಲ್ಲಾ ವಿವರಗಳನ್ನು ನೀವು ಅಲ್ಲಿ ಕಾಣಬಹುದು.
ಈ ರೀತಿಯಾಗಿ ನೀವು ನಿಮ್ಮ ಆಧಾರ್ ದುರ್ಬಳಕೆಯಾಗಿದೆಯೇ? ಇಲ್ಲವೇ? ಎಂಬುದನ್ನು ಪರಿಶೀಲಿಸಬಹುದು. ಇದರಿಂದ ಆಧಾರ್ ಸುರಕ್ಷಿತವಾಗಿದೆಯೇ ಎಂಬುದು ತಿಳಿದುಕೊಳ್ಳಬಹುದು. ಹಾಗೆಯೇ ಆಧಾರ್ ನಲ್ಲಿನ ನಿಮ್ಮ ವೈಯಕ್ತಿಕ ಮಾಹಿತಿಗಳು ಭದ್ರವಾಗಿದೆ ಎಂದು ಖಚಿತಪಡಿಸಿಕೊಳ್ಳಬಹುದು. ಹೀಗೇ ಸುಲಭವಾಗಿ ಆನ್ ಲೈನ್ ನಲ್ಲಿ ಪರಿಶೀಲಿಸಿ.