Uniform Mandatory For Auto Drivers : ಇನ್ನು ಮುಂದೆ ಆಟೋ ಚಾಲಕರಿಗೆ ಸಮವಸ್ತ್ರ ಕಡ್ಡಾಯ!

ದೆಹಲಿ ಸರಕಾರ ಟ್ಯಾಕ್ಸಿ ಮತ್ತು ಆಟೋ ರಿಕ್ಷಾಗಳ ಎಲ್ಲಾ ಚಾಲಕರು ನಿಗದಿತ ಸಮವಸ್ತ್ರವನ್ನು ಧರಿಸಿ, ಚಾಲನೆ ಮಾಡಬೇಕು ಎಂಬ ನಿಯಮ ಕಡ್ಡಾಯಗೊಳಿಸಿದ್ದು, ನಿಯಮ ಉಲ್ಲಂಘಿಸಿದರೆ, 10,000 ರೂ. ದಂಡವನ್ನು ವಿಧಿಸಲಾಗುತ್ತದೆ. ಅಲ್ಲದೆ, ಪರವಾನಗಿಯನ್ನು ಅಮಾನತು ಮಾಡಲಾಗುತ್ತದೆ ಎಂದು ತಿಳಿಸಿದೆ.

ಮೋಟಾರು ವಾಹನ ಕಾಯಿದೆ, 1988 ರ ಸೆಕ್ಷನ್ 65 ರ ಅಡಿಯಲ್ಲಿ ಪ್ರತಿಯೊಂದು ಟ್ಯಾಕ್ಸಿ ಮತ್ತು ಆಟೋ ರಿಕ್ಷಾಗಳು ರಸ್ತೆಯಲ್ಲಿ ಸಂಚರಿಸಲು ಪರವಾನಗಿಯನ್ನು ಪಡೆಯಬೇಕು. ಹಾಗೇ ಕೆಲವು ನಿಯಮಗಳನ್ನು ಪಾಲಿಸಬೇಕು ಎಂದಿದ್ದು, ಅವುಗಳಲ್ಲಿ ಚಾಲಕನು ಆದೇಶದಲ್ಲಿ ಸೂಚಿಸಿದಂತೆ ಚಾಲನಾ ಸಮವಸ್ತ್ರವನ್ನು ಧರಿಸಬೇಕು. ಸೂಕ್ತವಾದ ಸಮವಸ್ತ್ರವನ್ನು ಧರಿಸದೆ ವಾಹನವನ್ನು ಓಡಿಸುವಂತಿಲ್ಲ ಎಂದು ದೆಹಲಿ ಸರ್ಕಾರದ ಸಾರಿಗೆ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಈ ಆದೇಶವನ್ನು ಆಟೋ ಮತ್ತು ಟ್ಯಾಕ್ಸಿ ಯೂನಿಯನ್‌ಗಳು ಅನುಸರಿಸಲು ಸಿದ್ಧವಾಗಿದೆ. ಆದರೆ ನಿಯಮ ಉಲ್ಲಂಘಿಸಿದರೆ ತೆರಬೇಕಾದ ದಂಡ ರೂ 10,000 ಯನ್ನು ಕಡಿಮೆ ಮಾಡಲು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆಟೋ ಮತ್ತು ಟ್ಯಾಕ್ಸಿ ಚಾಲಕರು ದಿನಕ್ಕೆ 2,000-4,000 ಗಳಿಸುವುದಿಲ್ಲ. ರೂ 10,000 ದಂಡವು ಅವರಿಗೆ ತುಂಬಾ ಭಾರವಾಗುತ್ತದೆ. ಆ ದಂಡ ಹೆಚ್ಚಾಯಿತು ಎಂದು ಕ್ಯಾಪಿಟಲ್ ಡ್ರೈವರ್ಸ್ ವೆಲ್ಸ‌ ಅಸೋಸಿಯೇಷನ್‌ ಅಧ್ಯಕ್ಷ ಚಂದು ಚೌರಾಸಿಯಾ ಹೇಳಿದರು.

ದೆಹಲಿ ಮೋಟಾರು ವಾಹನ ನಿಯಮ 1993 ರ ಪ್ರಕಾರ, ಆಟೋ
ಮತ್ತು ಟ್ಯಾಕ್ಸಿ ಚಾಲಕರು ತಮ್ಮ ವಾಹನಗಳನ್ನು ಚಾಲನೆ ಮಾಡುವಾಗ ಖಾಕಿ ಸಮವಸ್ತ್ರವನ್ನು ಧರಿಸಬೇಕು ಎಂದಿದ್ದು, 2021 ರಲ್ಲಿ ದೆಹಲಿ ಹೈಕೋರ್ಟ್ ನಗರದಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಕಡ್ಡಾಯ ಸಮವಸ್ತ್ರವನ್ನು ಪ್ರಶ್ನಿಸುವ ಮನವಿಯ ಮೇಲೆ ಕೇಂದ್ರ ಮತ್ತು ದೆಹಲಿ ಸರ್ಕಾರದಿಂದ ಪ್ರತಿಕ್ರಿಯೆಯನ್ನು ತೋರಿತ್ತು. ಸದ್ಯ ಆಟೋ, ಟ್ಯಾಕ್ಸಿ ಚಾಲಕರಿಗೆ ಸಮವಸ್ತ್ರ ಕಡ್ಡಾಯವಾಗಿದ್ದು, ಉಲ್ಲಂಘಿಸಿದ್ರೆ 10,000 ರೂ ದಂಡ ಖಚಿತ.

Leave A Reply

Your email address will not be published.