ಅಗ್ಗದ 7-ಸೀಟರ್ ಕಾರು ಇಲ್ಲಿದೆ | ವೈಶಿಷ್ಟ್ಯ ಮಾತ್ರ ನಿಮ್ಮ ಊಹೆಗಿಂತಲೂ ಸೂಪರ್!!!
ಮಾರುಕಟ್ಟೆಯಲ್ಲಿ ನೂತನ ಕಾರುಗಳು ಬಿಡುಗಡೆಯಾಗುತ್ತಿದ್ದು, ಸದ್ಯ ನಿಸ್ಸಾನ್ ಇಂಡಿಯಾ ತನ್ನ UV ಪ್ರಾಡಕ್ಟ್ ಪೋರ್ಟ್ಫೋಲಿಯೊವನ್ನು ವಿಸ್ತರಿಸುವ ಯೋಜನೆಯಲ್ಲಿದ್ದು, ಪ್ರಸ್ತುತ ಪರೀಕ್ಷಾ ಹಂತದಲ್ಲಿವೆ. ನಿಸ್ಸಾನ್ ಎಕ್ಸ್-ಟ್ರಯಲ್ 2023 ರಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ. ಅಲ್ಲದೆ, ಕಂಪನಿಯು ಹೊಸ ನಿಸ್ಸಾನ್ 7-ಸೀಟರ್ MPV ಅನ್ನು ಕೂಡಾ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
7-ಸೀಟರ್ MPV ರೆನಾಲ್ಟ್ ಟೈಬರ್ ಅನ್ನು ಆಧರಿಸಿದ್ದು, ಈ ಮಾಡೆಲ್ ಅನ್ನು CMF-A+ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗುತ್ತದೆ. MPV ಕಾರು 1.0L, 3-ಸಿಲಿಂಡರ್, ನ್ಯಾಚುರಲಿ ಆಸ್ಪಿರೆಟೆಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 71bhp ಪವರ್ ಮತ್ತು 96Nm ಟಾರ್ಕ್ ಅನ್ನು ಜನರೆಟ್ ಮಾಡುತ್ತದೆ. MPV ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಮ್ಯಾನ್ಯುವಲ್ ಮತ್ತು AMT ಗೇರ್ ಬಾಕ್ಸ್ ಎರಡೂ ಇರಲಿದೆ.
ಇನ್ನು ಈ ಕಾರಿನ ವಿನ್ಯಾಸದ ಬಗ್ಗೆ ಹೇಳಬೇಕಾದರೆ, ಹೊಸ ನಿಸ್ಸಾನ್ 7-ಸೀಟರ್ MPV ರೆನಾಲ್ಟ್ ಟೈಬರ್‌ಗಿಂತ ಭಿನ್ನವಾಗಿದ್ದು, ಇದರ ವಿನ್ಯಾಸ ಮ್ಯಾಗ್ನೆಟ್ ನಿಂದ ಕೂಡಿರಬಹುದು ಎನ್ನಲಾಗಿದ್ದು, ಆಯಾಮಗಳ ವಿಷಯದಲ್ಲಿ ಇದು ಟ್ರೈಬರ್‌ನಂತೆಯೇ ಇರಲಿದೆ. ಈ ಕಾರು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಂಪರ್ಕದೊಂದಿಗೆ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕೀಲೆಸ್ ಎಂಟ್ರಿ, ರಿಮುವೇಬಲ್ ಥರ್ಡ್ ರೋ, ಪುಶ್-ಬಟನ್ ಸ್ಟಾರ್ಟ್, ಎಲ್‌ಇಡಿ ಲೈಟಿಂಗ್ ಸೆಟಪ್, ಸೆಕೆಂಡ್ ರೋ ರಿಕ್ಲೈನ್ ಮತ್ತು ರೂಫ್ ಮೌಂಟೆಡ್ ಎಸಿ ವೆಂಟ್ ನಂತಹ ವೈಶಿಷ್ಟ್ಯಗಳೊಂದಿಗೆ ಬರಲಿದೆ.
ನಿಸ್ಸಾನ್ 7-ಸೀಟರ್ MPV ಕಾರಿನ ಆರಂಭಿಕ ಬೆಲೆ ಮಾರುತಿ ಎರ್ಟಿಗಾಕ್ಕಿಂತ ಕಡಿಮೆಯಿರಬಹುದು ಎಂದು ಅಂದಾಜಿಸಲಾಗಿದೆ. ಶೀಘ್ರದಲ್ಲೇ ಈ ಕಾರು ಮಾರುಕಟ್ಟೆಗೆ ಎಂಟ್ರಿ ನೀಡಲಿದ್ದು, ಗ್ರಾಹಕರಿಗೆ ಲಭ್ಯವಾಗಲಿದೆ.