ಅಯೋಧ್ಯೆಯಲ್ಲಿ ರಾಮನ ಮೂರ್ತಿ ನಿರ್ಮಾಣಕ್ಕೆ ಸಾಲಿಗ್ರಾಮ ಕಲ್ಲು ಯಾಕೆ ಬಳಕೆ ಮಾಡುತ್ತಾರೆ?

ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಹಲವಾರು ದಶಕಗಳಿಂದ ವಿವಾದಕ್ಕಿಡಾಗಿದ್ದ ರಾಮಮಂದಿರ ವಿಚಾರ ಈಗ ಬಗೆಹರಿದಿದ್ದರಿಂದಾಗಿ ಅಲ್ಲಿ ಈಗ ಭವ್ಯ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದೀಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಸದ್ಯ ಮಂದಿರ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ.

ಪ್ರಸ್ತುತ ಗರ್ಭ ಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಬೇಕಾದ ಭಗವಾನ್ ಶ್ರೀರಾಮ ಹಾಗೂ ಸೀತಾ ಮಾತೆಯ ಮೂರ್ತಿಗಳ ಕೆತ್ತನೆ ಕಾರ್ಯ ಆರಂಭ ಆಗಿದ್ದು ಭಗವಾನ್ ಶ್ರೀರಾಮ ಹಾಗೂ ಸೀತಾ ಮಾತೆಯ ಪ್ರತಿಮೆಗಳ ಕೆತ್ತನಕ್ಕೆ ನೇಪಾಳ ರಾಜ್ಯದಿಂದ ವಿಶೇಷ ಶಿಲೆ ತರಿಸಿಕೊಳ್ಳಲಾಗುತ್ತಿದೆ ನೇಪಾಳದ ಗಂಡಕಿ ನದಿಯಲ್ಲಿ ಮಾತ್ರ ವಿಶೇಷ ಶಿಲೆಯನ್ನು ವಿಗ್ರಹ ಕೆತ್ತನೆಗೆ ಬಳಸಲಾಗುತ್ತದೆ. ಅದರಲ್ಲೂ ನೇಪಾಳದ ಮುಕ್ತಿನಾಥದಲ್ಲಿ ಮಾತ್ರ ಈ ವಿಶೇಷ ಶಿಲೆ ಲಭ್ಯವಾಗುತ್ತದೆ. ಕಳೆದ ಬುಧವಾರ ಈ ಶಿಲೆಗಳನ್ನು ಅಯೋಧ್ಯೆಗೆ ರವಾನೆ ಮಾಡಲಾಗಿದೆ.

ಆದರೆ ಅಯೋಧ್ಯೆಯಲ್ಲಿ ರಾಮನ ಮೂರ್ತಿ ನಿರ್ಮಾಣಕ್ಕೆ ಸಾಲಿಗ್ರಾಮ ಕಲ್ಲು ಬಳಸುವುದೇಕೆ ಕಾರಣ ಏನು ಎಂಬ ಗೊಂದಲಕ್ಕೆ ಇಲ್ಲಿದೆ ಉತ್ತರ.

ಆರಂಭದಿಂದ ತಿಳಿಯಬೇಕಿದ್ದರೆ ನೀವು ಈ ಸಾಕ್ಷಿಯನ್ನು ಓದಲೇ ಬೇಕು. ಹೌದು ಜಲಂಧರನೆಂಬ ಅಸುರ ರಾಕ್ಷಸ ಕುಲದ ನಾಯಕನು ಕಾಲನೇಮಿ ರಾಕ್ಷಸನ ಮಗಳಾದ ಬೃಂದಾಳನ್ನು ವಿವಾಹವಾದನು. ಬೃಂದಾ ವಿಷ್ಣುವಿನ ಭಕ್ತೆಯಾಗಿದ್ದಳು ಮತ್ತು ಅವಳು ಶಕ್ತಿಯುತವಾದ ವರವನ್ನು ಹೊಂದಿದ್ದಳು. ಹೆಂಡತಿಯ ಶಕ್ತಿ, ನಿಷ್ಠೆ ಮತ್ತು ಪ್ರೀತಿಯಿಂದಾಗಿ, ಜಲಂಧರ ಬಲಶಾಲಿಯಾಗಿದ್ದನು.

ಸ್ವಲ್ಪ ಕಾಲದ ನಂತರ ಅವನು ದೈತ್ಯ ಗುರು ಶುಕ್ರಾಚಾರ್ಯರಿಂದ ಪಟ್ಟಾಭಿಷಿಕ್ತನಾಗಿ ರಾಕ್ಷಸ ರಾಜನಾಗುತ್ತಾನೆ. ನಂತರ ಅವನು ಎಲ್ಲಾ ರಾಜರನ್ನು ಸೋಲಿಸುತ್ತ ಪ್ರಪಂಚದಾದ್ಯಂತ ತನ್ನ ಪ್ರದೇಶವನ್ನು ವಿಸ್ತರಿಸಿದನು. ನಂತರ ಆತ ಸ್ವರ್ಗವನ್ನು ವಶಪಡಿಸಿಕೊಳ್ಳಲು ಯೋಜಿಸುತ್ತಾನೆ, ಹೀಗಾಗಿ ಅವನು ದೇವತೆಗಳ ವಿರುದ್ಧ ಯುದ್ಧವನ್ನು ಘೋಷಿಸುತ್ತಾನೆ. ಯುದ್ಧ ಪ್ರಾರಂಭವಾದಾಗ ಸ್ವರ್ಗದ ದೇವತೆಗಳು ಜಲಂಧರನನ್ನು ಸೋಲಿಸಲು ವಿವಿಧ ಶಕ್ತಿಶಾಲಿ ಅಸ್ತ್ರಗಳನ್ನು ಬಳಸುತ್ತಾರೆ. ಆದರೂ ದೇವತೆಗಳು ಜಲಂಧರನನ್ನು ಸೋಲಿಸಲು ವಿಫಲರಾಗುತ್ತಾರೆ. ನಂತರ ಎಲ್ಲಾ ದೇವತೆಗಳು ಸಹಾಯಕ್ಕಾಗಿ ಬ್ರಹ್ಮ ದೇವರ ಬಳಿಗೆ ಹೋಗುತ್ತಾರೆ. ಈ ರಾಕ್ಷಸನನ್ನು ಸೋಲಿಸಲು ಶಿವನ ಸಹಾಯವನ್ನು ತೆಗೆದುಕೊಳ್ಳುವಂತೆ ಬ್ರಹ್ಮ ದೇವರು ಅವರಿಗೆ ಸಲಹೆ ನೀಡುತ್ತಾನೆ. ಭಗವಾನ್ ಶಿವನು ರಾಕ್ಷಸ ರಾಜನನ್ನು ಮನವೊಲಿಸಲು ಪ್ರಯತ್ನಿಸಿದನು ಆದರೆ ಅವನು ನಿರ್ಲಕ್ಕ್ಷಿಸಿದನು. ನಂತರ ಎಲ್ಲಾ ದೇವತೆಗಳು ಅವನನ್ನು ಕೊಲ್ಲುವ ಮೂಲಕ ನಾಶಮಾಡಲು ಉಪಾಯ ಮಾಡುತ್ತಾರೆ. ಅಂತಿಮವಾಗಿ, ಅವರು ಬೃಂದಾಳ ಪವಿತ್ರತೆ ಹಾಳುಮಾಡುವ ಮೂಲಕ ಜಲಂದರನನ್ನು ಸೋಲಿಸಲು ಪ್ರಯತ್ನಿಸುತ್ತಾರೆ.

ಜಲಂಧರನು ಯುದ್ಧದಲ್ಲಿದ್ದಾಗ, ಅವಳು ಯಾವಾಗಲೂ ವಿಷ್ಣು ದೇವರನ್ನು ಪ್ರಾರ್ಥಿಸುತ್ತಿದ್ದಳು. ವಿಷ್ಣು ತನ್ನ ರೂಪವನ್ನು ಬದಲಾಯಿಸಿ ಜಲಂಧರನಾಗಿ ಬೃಂದಾಳ ಮುಂದೆ ಕಾಣಿಸಿಕೊಳ್ಳುತ್ತಾನೆ.ಆಗ ಅವಳು ಅವನನ್ನು ಗುರುತಿಸಲಿಲ್ಲ ಮತ್ತು ಅವಳ ಗಂಡನಂತೆ ವರ್ತಿಸುತ್ತಾನೆ. ಅದೇ ಸಮಯದಲ್ಲಿ, ಶಿವನು ತನ್ನ ತ್ರಿಶೂಲವನ್ನು ಜಲಂಧರನ ಕಡೆಗೆ ಎಸೆದು ಅವನನ್ನು ಕೊಲ್ಲುತ್ತಾನೆ. ಬೃಂದಾ ಸತ್ಯವನ್ನು ತಿಳಿದಾಗ ಅವಳು ಕೋಪದಿಂದ ಭಗವಾನ್ ವಿಷ್ಣುವನ್ನು ಕಲ್ಲಾಗುವಂತೆ ಶಪಿಸುತ್ತಾಳೆ.

ಈ ವೇಳೆ ಅವನು ಅವಳ ಶಾಪವನ್ನು ಸ್ವೀಕರಿಸಿ ಗಂಡಕಿ ನದಿಯಲ್ಲಿ (ಕಾಳಿಗಂಡಕಿ) ಸ್ನಾನ ಮಾಡುತ್ತಾನೆ. ಆಗ ವಿಷ್ಣುವು ಕಲ್ಲಿನಂತೆ ಹೊಸ ರೂಪವನ್ನು ತೆಗೆದುಕೊಳ್ಳಲು ನಿರ್ಧರಿಸಿದನು ಮತ್ತು ಅವನು ವಿಶ್ವಕರ್ಮನಿಗೆ ಸಾಲಿಗ್ರಾಮ ಕಲ್ಲನ್ನು ಹಲವಾರು ಆಕಾರಗಳಲ್ಲಿ ಕೆತ್ತಲು ಹೇಳಿದನು. ಈ ರೀತಿಯಾಗಿ, ಗಂಡಕಿ ನದಿಯನ್ನು ಅವನ ವಾಸಸ್ಥಳವೆಂದು ಗುರುತಿಸಲಾಗಿದೆ ಮತ್ತು ಸಾಲಿಗ್ರಾಮ ಶಿಲಾಗಳನ್ನು ಭಗವಾನ್ ಮಹಾವಿಷ್ಣುವಿನ ಅವತಾರವಾಗಿ ನೋಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸಾಲಿಗ್ರಾಮದ ಕಲ್ಲುಗಳನ್ನು ಬಳಸಲಾಗುತ್ತದೆ ಎಂದು ಪ್ರತೀತಿ ಆಗಿದೆ.

ಇದೇ ಕಾರಣಕ್ಕಾಗಿ ಶ್ರೀ ವಿಷ್ಣುವಿನ ಪ್ರತೀಕವಾದ ಸಾಲಿಗ್ರಾಮ ಕಲ್ಲು ಗಳನ್ನು ಭಗವಾನ್ ಶ್ರೀರಾಮ ಹಾಗೂ ಸೀತಾ ಮಾತೆಯ ಪ್ರತಿಮೆಗಳ ಕೆತ್ತನಕ್ಕೆ ನೇಪಾಳ ರಾಜ್ಯದಿಂದ ವಿಶೇಷ ಶಿಲೆ ತರಿಸಿಕೊಳ್ಳಲಾಗುತ್ತಿದೆ. ನೇಪಾಳದ ಗಂಡಕಿ ನದಿಯಲ್ಲಿ ಮಾತ್ರ ವಿಶೇಷ ಶಿಲೆಯನ್ನು ವಿಗ್ರಹ ಕೆತ್ತನೆಗೆ ಬಳಸಲಾಗುತ್ತದೆ.

Leave A Reply

Your email address will not be published.