ನಾಯಿ ಮಾಡಿದ ಕಿತಾಪತಿ | ತನ್ನ ಮಾಲೀಕನಿಗೆ ಬೈದಿದ್ದಕ್ಕೆ ಈ ರೀತಿ ಸೇಡು ತೀರಿಸೋದಾ?
ಪ್ರಾಣಿಗಳಲ್ಲಿ ನೀಯತ್ತಿನ ಪ್ರತಿರೂಪ ನಾಯಿ ಎಂದು ಹೇಳುತ್ತಾರೆ. ಮತ್ತು ನಾಯಿಯನ್ನು ನಾವು ಮನೆಯಲ್ಲಿ ಒಬ್ಬ ಸದಸ್ಯ ಇದ್ದಂತೆ ನೋಡಿಕೊಳ್ಳುತ್ತೇವೆ. ಸಾಕಿದ ನಾಯಿ ಯಜಮಾನನ ಪ್ರಾಣ ಉಳಿಸಿದ್ದು ಕೇಳಿದ್ದೇವೆ ಆದರೆ ಇಲ್ಲೊಂದು ಕಡೆ ಸಾಕಿದ ನಾಯಿಯೇ ತನ್ನ ಯಜಮಾನನ್ನು ಜೈಲು ಶಿಕ್ಷೆ ಅನುಭವಿಸುವಂತೆ ಮಾಡಿದೆ.
ಹೌದು ಇಬ್ಬರು ವ್ಯಕ್ತಿಗಳು ಸೈರಸ್ ಪಾರ್ಸಿ ಹೊರಮುಸ್ಟಿ ಅವರ ಕಾರಿನ ಮುಂದೆ ನಿಂತಿದ್ದರು. ಈ ಕಾರಿನಲ್ಲಿ ರಾಟ್ ವಿಲ್ಲರ್ ಹಾಗೂ ಲ್ಯಾಬ್ರಡರ್ ಶ್ವಾನಗಳು ಕಾರಿನಲ್ಲಿದ್ದು, ಬೊಗಳಲು ಶುರು ಮಾಡಿದ್ದವು. ಈ ವೇಳೆ ಸೈರಸ್ ಪಾರ್ಸಿ ಹೊರಮುಸ್ಲಿ ಕಾರಿನ ಬಾಗಿಲನ್ನು ತೆರೆದು ಶ್ವಾನ ಹೊರಗೆ ಹೋಗಲು ಬಿಟ್ಟಿದ್ದರು. ಈ ವೇಳೆ ಹೊರಬಂದ ರಾಟ್ ವಿಲ್ಲರ್ ಶ್ವಾನ 70 ವರ್ಷದ ಕೆರ್ಸಿ ಇರಾನಿ ಅವರ ಮೇಲೆ ದಾಳಿ ಮಾಡಿ ಮೂರು ಕಡೆ ಕಚ್ಚಿ ಗಾಯಗೊಳಿಸಿತ್ತು.
ಆದ್ದರಿಂದ ರಾಟ್ ವಿಲ್ಲರ್ ತಳಿಯ ನಾಯಿ 72 ವರ್ಷದ ವೃದ್ಧ ನಿಗೆ ದಾಳಿ ಮಾಡಿ ಅವರನ್ನು ಕಚ್ಚಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ವಾನದ ಮಾಲೀಕ ಉದ್ಯಮಿಯೂ ಆಗಿರುವ 44 ವರ್ಷದ ಸೈರಸ್ ಪಾರ್ಸಿ ಹೊರಮುಸ್ಟಿ ಎಂಬುವವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಆಕ್ರಮಣಕಾರಿ ಹಾಗೂ ಬಲಿಷ್ಠವಾದ ನಾಯಿಯೊಂದು ಅವರ ಮೇಲೆ ದಾಳಿ ಮಾಡಿ ಮೂರು ಕಡೆ ಗಾಯಗೊಳಿಸಿದ್ದು, ವ್ಯಕ್ತಿಯೊಬ್ಬ ಇಂತಹ ಆಕ್ರಮಣಕಾರಿ ನಾಯಿಯನ್ನು ಸಾರ್ವಜನಿಕ ಸ್ಥಳಕ್ಕೆ ತೆಗೆದುಕೊಂಡು ಹೋಗುವಾಗ ಅದು ಬೇರೆಯವರ ಮೇಲೆ ದಾಳಿ ಮಾಡದಂತೆ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಅಗತ್ಯ ಕ್ರಮ ಕೈಗೊಂಡಿಲ್ಲದಲ್ಲಿ ಇದು ಸಮಾಜಕ್ಕೆ ಮಾರಕ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಆತನಿಗೆ ಶಿಕ್ಷೆಯಾಗಬೇಕು ಎಂದು ಕೋರ್ಟ್ ತೀರ್ಮಾನ ಮಾಡಿದ್ದು ಶ್ವಾನದ ಮಾಲೀಕ ಉದ್ಯಮಿಯೂ ಆಗಿರುವ 44 ವರ್ಷದ ಸೈರಸ್ ಪಾರ್ಸಿ ಹೊರಮುಸ್ಟಿ ಎಂಬುವವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.