ತಾಮ್ರದ ಪಾತ್ರೆಯನ್ನು ಫಳಫಳ ಹೊಳೆಯುವಂತೆ ಮಾಡಲು ಇಲ್ಲಿದೆ ಸುಲಭ ಉಪಾಯ

ದಿನನಿತ್ಯದ ಊಟಕ್ಕೆ ನಾವು ತಾಮ್ರದ ಪಾತ್ರೆಗಳನ್ನು ಬಳಸದಿದ್ದರೂ, ಕಾಲಕಾಲಕ್ಕೆ ಅವುಗಳನ್ನು ಸ್ವಚ್ಛಗೊಳಿಸಬೇಕು. ನಾವು ಭಾರತೀಯರು ನಮ್ಮ ಸುಂದರವಾದ ಪಾತ್ರೆಗಳನ್ನು ಮತ್ತು ಅಡಿಗೆ ಸಾಮಾನುಗಳನ್ನು ಪ್ರದರ್ಶನಕ್ಕಾಗಿ ಬೀರುಗಳಲ್ಲಿ ಅಲಂಕರಿಸುವ ಮತ್ತು ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಳಸುವ ಅಭ್ಯಾಸವನ್ನು ಹೊಂದಿದ್ದೇವೆ. ಮತ್ತು ಅದಕ್ಕಾಗಿಯೇ ನಾವು ತಾಮ್ರದ ಪಾತ್ರೆಗಳನ್ನು ಅಥವಾ ಇತರ ಯಾವುದೇ ಅಲಂಕಾರಿಕ ಅಡಿಗೆ ಸಾಮಾನುಗಳನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂಬುದರ ಬಗ್ಗೆ ಸಾಮಾನ್ಯವಾಗಿ ತಿಳಿದಿರುವುದಿಲ್ಲ ಏಕೆಂದರೆ ನಾವು ಅವುಗಳನ್ನು ನಿಯಮಿತವಾಗಿ ಬಳಸುವುದಿಲ್ಲ. ಅಂತಹ ತಾಮ್ರದ ಪಾತ್ರೆಗಳನ್ನು ಸುಲಭವಾಗಿ ಸ್ವಚ್ಛ ಮಾಡುವ ಆಲೋಚನೆ ಮಾಡಿದರೆ ಅದಕ್ಕೆ ಹಲವಾರು ಉಪಾಯಗಳು ಇವೆ.

ಮನೆಯ ಅಡುಗೆ ಕೋಣೆಯಲ್ಲೇ ದೊರಕುವ ವಸ್ತುಗಳು ತಾಮ್ರದ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು. ಇವುಗಳು ನಿಮ್ಮ ತಾಮ್ರದ ಪಾತ್ರೆಯನ್ನು ಹೊಸದರಂತೆ ಹೊಳೆಯಿಸುತ್ತವೆ.

ತಾಮ್ರ ಪಾತ್ರೆಗಳನ್ನು ಸ್ವಚ್ಛ ಮಾಡುವ ವಿಧಾನಗಳು ಇಂತಿವೆ :

ಬೇಕಿಂಗ್ ಸೋಡಾ:

  • ತಾಮ್ರದ ಪಾತ್ರೆಗಳಿಗೆ ಬೆಸ್ಟ್ ಸೊಲ್ಯೂಷನ್ ಎಂದರೆ ಅದು ಬೇಕಿಂಗ್ ಸೋಡಾ. ನಿಂಬೆಹಣ್ಣು ಮತ್ತು ಬೇಕಿಂಗ್ ಸೋಡಾ ಎರಡು ಬೆಸ್ಟ್ ಕಾಂಬಿನೇಷನ್. ಒಂದು ಟೇಬಲ್ ಚಮಚ ಬೇಕಿಂಗ್ ಸೋಡಾ ತೆಗೆದುಕೊಂಡು ಅದಕ್ಕೆ ಅರ್ಧ ನಿಂಬೆಹಣ್ಣಿನ ಹೋಳು ಹಿಂಡಿ ಪೇಸ್ಟ್ ತಯಾರಿಸಿ ಕೊಂಡು ಅದರಿಂದ ತಾಮ್ರದ ಪಾತ್ರೆ ಯನ್ನು ಚೆನ್ನಾಗಿ ರಬ್ ಮಾಡಿ ಸ್ವಲ್ಪ ಹೊತ್ತು ಬಿಟ್ಟು ನೀರಿನಿಂದ ತೊಳೆಯಿರಿ.

ಸಫಾಮಿಕ್ ವಿಧಾನ:

  • ಸಲ್ಫಾಮಿಕ್ ಏಸಿಡ್ ಅನ್ನು ಬಳಸಿಕೊಂಡು ತಾಮ್ರದ ಪಾತ್ರೆಯನ್ನು ಸ್ವಚ್ಛಗೊಳಿಸಬಹುದು. ಇದು ಆಕ್ಸಿಡೈಝ್ ಮತ್ತು ಟಾರ್ನಿಶ್ ಆಗಿರುವುದರಿಂದ ತಾಮ್ರದ ಪಾತ್ರಯನ್ನು ಸ್ವಚ್ಛಗೊಳಿಸುತ್ತದೆ. ಆದರೆ ತಾಮ್ರ ಪಾತ್ರೆ ಬಿಟ್ಟು ಉಳಿದ ಪಾತ್ರೆಗಳನ್ನು ಇದರಲ್ಲಿ ತೊಳೆದರೆ ಇದು ಪ್ರತಿರೋಧ ಗುಣವನ್ನು ವ್ಯಕ್ತಪಡಿಸಬಹುದು.

ವಿನೇಗರ್ ಮತ್ತು ಉಪ್ಪು:

  • ವಿನೇಗರ್ ಮತ್ತು ಉಪ್ಪಿನ ಮಿಶ್ರಣವನ್ನು ತಾಮ್ರ ಪಾತ್ರೆ ತೊಳೆಯಲು ಬಳಸುತ್ತಾರೆ. ಇದನ್ನು ಮಿಶ್ರ ಮಾಡಿಕೊಂಡು ತಾಮ್ರದ ಪಾತ್ರೆಯ ಮೇಲೆ ಅದರ ಕೊಳೆ ಹೋಗುವವರೆಗೆ ಉಜ್ಜಿಕೊಳ್ಳಿ. ತಾಮ್ರದಿಂದ ಉತ್ಕರ್ಷಣ ಅಂಶಗಳನ್ನು ನಿವಾರಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

ನಿಂಬೆಹಣ್ಣಿನ ರಸ ಮತ್ತು ಉಪ್ಪು:

  • ಈ ಎರಡು ಪದಾರ್ಥಗಳು ಎಲ್ಲರ ಅಡುಗೆ ಮನೆಗಳಲ್ಲಿ ಇರುತ್ತವೆ. ನೀವು ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಅದನ್ನು ಎರಡು ಹೋಳುಗಳನ್ನಾಗಿ ಮಾಡಿ ಅದರ ಮೇಲೆ ಪುಡಿ ಉಪ್ಪು ಉದುರಿಸಿ ಅದರಿಂದ ನಿಮ್ಮತಾಮ್ರದ ಪಾತ್ರೆ ಗಳನ್ನು ನಯವಾಗಿ ಉಜ್ಜಲು ಮುಂದಾಗಿ. ಇದು ತುಂಬಾ ಗಾಢವಾದ ಕಲೆಗಳನ್ನು ಹೋಗಲಾಡಿಸುವಲ್ಲಿ ಯಶಸ್ವಿ ಯಾಗುತ್ತದೆ. ಉಪ್ಪು ಮತ್ತು ನಿಂಬೆ ಹಣ್ಣಿನಿಂದ ಉಜ್ಜಿದ ನಂತರದಲ್ಲಿ ಅದನ್ನು ಕನಿಷ್ಠ ಅರ್ಧ ಗಂಟೆ ಕಾಲ ಹಾಗೆ ಬಿಡಬೇಕು. ನಂತರದಲ್ಲಿ ಮತ್ತೊಮ್ಮೆ ಉಜ್ಜಬೇಕು. ಹೀಗೆ ಮಾಡುವುದ ರಿಂದ ಪಾತ್ರೆ ತನ್ನ ಹೊಳಪು ಪಡೆಯುತ್ತದೆ.

ಟೊಮೆಟೊ ಕೆಚಪ್ :

  • ತಾಮ್ರದ ಪಾತ್ರೆಯ ಮೇಲಿನ ಕಲೆಗಳನ್ನು ಹೋಗಲಾಡಿಸುವಲ್ಲಿ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ.
    ತಾಮ್ರದ ಪಾತ್ರೆಯ ಮೇಲೆ ನಿಮ್ಮ ಬಳಿ ಇರುವ ಕೆಚಪ್ ಹಾಕಿ ಚೆನ್ನಾಗಿ ಉಜ್ಜಿ ಸ್ವಲ್ಪ ಹೊತ್ತು ಬಿಟ್ಟು ಆನಂತರ ಮೃದುವಾದ ಸ್ಪಾಂಜ್ ಅಥವಾ ನೈಲಾನ್ ಪ್ಯಾಡ್ ನಿಂದ ಪಾತ್ರೆಯನ್ನು ಉಜ್ಜಲು ಟ್ರೈ ಮಾಡಿ. ತೊಳೆದ ನಂತರದಲ್ಲಿ ಒಂದು ಬಟ್ಟೆಯಲ್ಲಿ ಆಲಿವ್ ಆಯಿಲ್ ಅದ್ದಿಕೊಂಡು ಅದರಿಂದ ಪಾತ್ರೆ ಯನ್ನು ಸವರಿ. ಸ್ವಲ್ಪ ಹೊತ್ತು ಹಾಗೆ ಬಿಡುವುದರಿಂದ ಪಾತ್ರೆ ಹೊಳಪು ಪಡೆಯುತ್ತದೆ.​

ಮನೆಯಲ್ಲಿ ತಯಾರು ಮಾಡಿದ ಕಾಪರ್ ಪಾಲಿಶ್:

  • ಇದನ್ನು ನೀವು ಒಮ್ಮೆ ತಯಾರಿಸಿ ಒಂದು ಗಾಜಿನ ಸೀಸೆಯಲ್ಲಿ ಹಾಕಿ ಮುಂದಿನ ಬಳಕೆಗೆ ಇಟ್ಟುಕೊಂಡರೆ ಸಾಕಷ್ಟು ಉಪಯೋಗವಾಗುತ್ತದೆ. ಇಲ್ಲಿ ನೀವು ಉಪ್ಪು, ಹಿಟ್ಟು ಮತ್ತು ಯಾವುದಾದರೂ ಡಿಟರ್ಜೆಂಟ್ ಪೌಡರ್ ಮಿಕ್ಸ್ ಮಾಡಿ. ಇದಕ್ಕೆ ವೈಟ್ ವಿನೆಗರ್, ನಿಂಬೆಹಣ್ಣಿನ ಜ್ಯೂಸ್ ಮತ್ತು ನೀರನ್ನು ಮಿಕ್ಸ್ ಮಾಡಿ. ಇದನ್ನು ಒಂದು ನೈಲಾನ್ ಪ್ಯಾಡ್ ಅಥವಾ ಮೃದುವಾದ ಸ್ಪಾಂಜ್ ನಲ್ಲಿ ಅದ್ದಿಕೊಂಡು ಅದನ್ನು ತಾಮ್ರದ ಪಾತ್ರೆಗೆ ಉಜ್ಜಿ. ಸ್ವಲ್ಪ ಹೊತ್ತು ಬಿಟ್ಟು ನೀರಿನಿಂದ ತೊಳೆಯಿರಿ. ನಂತರ ಮೇಲೆ ಹೇಳಿದ ಹಾಗೆ ಪಾಲಿಶ್ ಮಾಡಿದರೆ ಹೊಳಪಿನ ತಾಮ್ರದ ಪಾತ್ರೆ ನಿಮ್ಮದಾಗುತ್ತದೆ.​

ವಿನೆಗರ್ ಮತ್ತು ಹಿಟ್ಟು:

  • ಒಂದು ಸ್ಪೂನ್‌ನಷ್ಟು ಉಪ್ಪು ಹಾಗೂ ಒಂದು ಕಪ್‌ನಷ್ಟು ವಿನೇಗರ್ ಅನ್ನು ಚೆನ್ನಾಗಿ ಮಿಶ್ರ ಮಾಡಿ. ನಂತರ ಅದಕ್ಕೆ ಸ್ವಲ್ಪ ಹಿಟ್ಟನ್ನು ಸೇರಿಸಿ ಅದನ್ನು ಪೇಸ್ಟ್‌ನಂತೆ ಮಾಡಿಕೊಳ್ಳಿ. ಈ ಮಿಶ್ರಣವನ್ನು ಹದಿನೈದು ನಿಮಿಷಗಳ ಕಾಲ ಪಾತ್ರೆಯಲ್ಲಿ ಇರುವಂತೆ ನೋಡಿಕೊಳ್ಳಿ. ನಂತರ ಬೆಚ್ಚನೆಯ ನೀರಿನಲ್ಲಿ ತೊಳೆದು ಪಾಲಿಶ್ ಮಾಡಿ.

ಈ ರೀತಿಯಾಗಿ ತಾಮ್ರ ಪಾತ್ರೆಯನ್ನು ಸ್ವಚ್ಛಗೊಳಿಸಿ ಹೊಳಪನ್ನು ಕಾಪಾಡಿಕೊಳ್ಳಬಹುದು ಆದರೆ ಕೆಲವೊಮ್ಮೆ ತಾಮ್ರದ ಪಾತ್ರೆಯನ್ನು ಸ್ವಚ್ಛಗೊಳಿಸುವ ವಿಧಾನವು ಪಾತ್ರೆಗೆ ಹಾನಿಯನ್ನು ಉಂಟುಮಾಡುತ್ತವೆ. ಆದ್ದರಿಂದ ಬ್ರಶ್‌ಗಳನ್ನು ಬಳಸುವಾಗ ಪಾತ್ರೆಗೆ ಹಾನಿಯಾಗದಂತೆ ಜಾಗೃತಗೊಳಿಸುವುದು ಮುಖ್ಯ.

Leave A Reply

Your email address will not be published.