Chanakya Niti : ಮನೆಯ ಮಹಿಳೆಯರಲ್ಲಿ ಈ ಸ್ವಭಾವವಿದ್ದರೆ ಆರ್ಥಿಕ ಸಮಸ್ಯೆ ಉಂಟಾಗೋದೇ ಇಲ್ಲ !

ಭಾರತದಲ್ಲಿ ಆಯಾ ಕಾಲದಲ್ಲಿ ದೇಶದಲ್ಲಿ ಜ್ಞಾನದ ಬೆಳಕನ್ನು ಹರಡಿದಂತಹ ಅನೇಕ ಮಹಾನ್ ಸಂತರು ಮತ್ತು ಮಹಾಪುರುಷರು ಇದ್ದಾರೆ. ಅವರು ಬರೆದ ಪುಸ್ತಕಗಳು ಇಂದಿಗೂ ಕೋಟ್ಯಾಂತರ ಜನರಿಗೆ ಸ್ಫೂರ್ತಿಯ ಮೂಲವಾಗಿದೆ. ಅವರಲ್ಲಿ ಆಚಾರ್ಯ ಚಾಣಕ್ಯ ಕೂಡ ಒಬ್ಬರು‌‌. ನೂರಾರು ವರ್ಷಗಳ ಹಿಂದೆ ಅವರು ಹೇಳಿದ ಮಾತುಗಳು ಇಂದಿಗೂ ಜನರ ಜೀವನಕ್ಕೆ ದಾರಿದೀಪವಾಗಿದೆ.

ಆಚಾರ್ಯ ಚಾಣಕ್ಯರು ಮಹಿಳೆಯರ ಯಶಸ್ಸು, ಅವರ ಸಂಬಂಧ ಮತ್ತು ನಡವಳಿಕೆಯ ಬಗ್ಗೆ ವಿವರವಾದ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮಹಿಳೆಯರು ಮನೆಯ ಬೆನ್ನೆಲುಬು ಎನ್ನುತ್ತಾರೆ ಚಾಣಕ್ಯರು. ಚಾಣಕ್ಯನ ಪ್ರಕಾರ, ಮನೆಯಲ್ಲಿ ಇರುವ ಮಹಿಳೆಯರ ಕೆಲವು ವಿಶೇಷ ಸ್ವಭಾವಗಳು ಕುಟುಂಬದ ಸಂತೋಷದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮನೆಯಲ್ಲಿನ ಮಹಿಳೆ ಸಂತೋಷವಾಗಿದ್ದರೆ ಮನೆಯು ಸಂತೋಷವಾಗಿರುತ್ತದೆ ಎನ್ನುತ್ತಾರೆ. ಮಹಿಳೆಯರ ಕೆಲವೊಂದು ಸ್ವಭಾವಗಳು ಮನೆಯ ಪ್ರಗತಿ, ಸಂತೋಷಕ್ಕೆ ಕಾರಣವಾಗುತ್ತಂತೆ. ಹಾಗಾದ್ರೆ ಆ ವಿಶೇಷ ಸ್ವಭಾವಗಳು ಯಾವುದು ? ಎಂಬುದರ ಮಾಹಿತಿ ತಿಳಿಯೋಣ.

ತಾಳ್ಮೆ ಮತ್ತು ಬಲವಾದ ಇಚ್ಛೆ :

ಮಹಿಳೆಯರು ಹೆಚ್ಚು ಭಾವುಕರಾಗಿರುತ್ತಾರೆ. ಆದರೆ ಬಲವಾದ ಇಚ್ಛಾಶಕ್ತಿಯುಳ್ಳ ಮಹಿಳೆಯರು ತಮ್ಮ ಭಾವನೆಗಳನ್ನು ನಿಯಂತ್ರಿಸಿ, ಭವಿಷ್ಯದಲ್ಲಿ ಮುಂದುವರಿಯಲು ಯೋಚಿಸುತ್ತಾರೆ ಎಂದು ಚಾಣಾಕ್ಯರು ಹೇಳುತ್ತಾರೆ. ಹೆಚ್ಚು ತಾಳ್ಮೆ ಇರುವ ಮಹಿಳೆಯರು ಕುಟುಂಬವನ್ನು ಉತ್ತಮ ರೀತಿಯಲ್ಲಿ ನಡೆಸುತ್ತಾರೆ. ಕುಟುಂಬಕ್ಕೆ ಏನೇ ಕಷ್ಟ ಎದುರಾದರೂ ಶಕ್ತಿಯಾಗಿ ನಿಂತು ಎದುರಿಸಿ ಗೆಲ್ಲುತ್ತಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ಮನೆಯಲ್ಲಿ ಬಲವಾದ ಇಚ್ಛಾಶಕ್ತಿಯುಳ್ಳ ಹಾಗೂ ತಾಳ್ಮೆ ಇರುವ ಮಹಿಳೆಯರಿದ್ದರೆ ಕಷ್ಟವು ಓಡಿ ಹೋಗುತ್ತದೆ. ಮನೆಯಲ್ಲಿ ಸಂತೋಷ ನೆಲೆಸುತ್ತದೆ ಎನ್ನುತ್ತಾರೆ.

ತೃಪ್ತ ಮಹಿಳೆ :

ಇರುವುದರಲ್ಲೇ ಸಂತೋಷದಿಂದ ಜೀವನ ನಡೆಸುತ್ತೇನೆ ಎಂಬ ಭಾವನೆಯಿರುವ ಮಹಿಳೆಯರ ಸಂಸಾರ ಸದಾ ಸುಖ- ಸಂತೋಷದಿಂದ ಕೂಡಿರುತ್ತದೆ. ಸಂತೃಪ್ತ ಮಹಿಳೆಯರು ಕುಟುಂಬದ ಗೌರವ ಮತ್ತು ಘನತೆಯನ್ನು ಎತ್ತಿ ಹಿಡಿಯುತ್ತಾರೆ. ಕಷ್ಟದ ಸಮಯದಲ್ಲಿಯೂ ಕುಟುಂಬವನ್ನು ನಗಿಸುವ ಪ್ರಯತ್ನ ಮಾಡುತ್ತಾಳೆ. ಸದಾ ಮನೆಯವರ ಖುಷಿಯನ್ನು ಬಯಸುತ್ತಾಳೆ. ಈ ಭಾವನೆ ಹೊಂದಿರುವ ಮಹಿಳೆಯರ ಪರಿಣಾಮ ಅವರ ಮುಂದಿನ ಪೀಳಿಗೆಯ ಮೇಲೂ ಗೋಚರಿಸುತ್ತದೆ. ಈ ಸ್ವಭಾವದ ಮಹಿಳೆಯ ಮನೆಯು ಸಂತೋಷದಿಂದ ಕೂಡಿರುತ್ತದೆ.

ಹಣ ನಿರ್ವಹಣೆ :

ಮಹಿಳೆಯರಿಗೆ ಪುರುಷನಿಗಿಂತ ಉತ್ತಮವಾಗಿ ಹಣವನ್ನು ನಿರ್ವಹಿಸಲು ತಿಳಿದಿರಬೇಕು ಎಂದು ಹೇಳುತ್ತಾರೆ ಚಾಣಾಕ್ಯರು. ಮಹಿಳೆ ಹಣವನ್ನು ಉತ್ತಮ ರೀತಿಯಲ್ಲಿ ನಿಯಂತ್ರಿಸಿದರೆ ಆರ್ಥಿಕ ಸಮಸ್ಯೆ ಉಂಟಾಗಲ್ಲ. ಮನೆ ಸಮತೋಲನವಾಗಿ ಸಾಗುತ್ತಿರುತ್ತದೆ. ಮಹಿಳೆ ಹಣ ಉಳಿಕೆ ಮಾಡಿದರೆ, ಆಕೆಯ ಈ ಅಭ್ಯಾಸವು ಬಿಕ್ಕಟ್ಟಿನ ಸಮಯದಲ್ಲೂ ಕುಟುಂಬವನ್ನು ಸುರಕ್ಷಿತವಾಗಿರಿಸುತ್ತದೆ. ಕುಟುಂಬದಲ್ಲಿ ಹಣದ ಕೊರತೆ ಉಂಟಾಗಲ್ಲ. ಮಹಿಳೆಯು ಹೆಚ್ಚಾಗಿ ಮನೆಯ ಅಡುಗೆ ಪದಾರ್ಥಗಳ ಡಬ್ಬಿ, ತಿಂಡಿಯ ಡಬ್ಬಿ, ಹೀಗೇ ಹಲವು ಕಡೆ ಹಣವನ್ನು ಕೂಡಿಡುತ್ತಾರೆ. ಇದು ತುರ್ತು ಪರಿಸ್ಥಿತಿಯಲ್ಲಿ ಪ್ರಯೋಜನಕಾರಿಯಾಗಿದೆ. ಮಹಿಳೆ ಹಣ ನಿರ್ವಹಣೆ ಸರಿಯಾಗಿ ಮಾಡಿದರೆ, ಕುಟುಂಬವು ಸಂತೋಷದಿಂದ, ಯಾವುದೇ ಆರ್ಥಿಕ ಸಮಸ್ಯೆ ಇಲ್ಲದೆ, ಜೀವನವು ಸುಖದಿಂದ ಕೂಡಿರುತ್ತದೆ.

Leave A Reply

Your email address will not be published.