Lenovo Ideapad 1 : 720p ವೆಬ್‌ಕ್ಯಾಮ್ ಮತ್ತು ಮೈಕ್ರೊಫೋನ್ ಜೊತೆಗೆ ಡಾಲ್ಬಿ ಆಡಿಯೊ ಬೆಂಬಲಿಸುವ ಸ್ಟೀರಿಯೋ ಸ್ಪೀಕರ್‌ಗಳನ್ನು ಹೊಂದಿರುವ ಲ್ಯಾಪ್ ಟಾಪ್ ಶೀಘ್ರ ಬಿಡುಗಡೆ !
ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್, ವಾಹನಗಳು ಹೆಚ್ಚಾಗಿ ಬಿಡುಗಡೆಯಾಗುತ್ತಿವೆ. ಇದರ ಜೊತೆಗೆ ಲ್ಯಾಪ್ ಟಾಪ್ ಕೂಡ ತನ್ನ ಸ್ಥಾನ ಪಡೆದುಕೊಂಡಿದೆ. ಇತ್ತೀಚೆಗೆ ಲ್ಯಾಪ್ ಟಾಪ್ ಬೇಡಿಕೆಯೂ ಹೆಚ್ಚಾಗಿದ್ದು, ಇವುಗಳು ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಜನರನ್ನು ತನ್ನತ್ತ ಸೆಳೆಯುತ್ತಿವೆ. ಇದೀಗ ಜನಪ್ರಿಯ ಲ್ಯಾಪ್‌ಟಾಪ್ ತಯಾರಿಕ ಕಂಪೆನಿಯಾಗಿರುವ ಲೆನೋವೋ (Lenovo) ಕಂಪನಿ ಮಾರುಕಟ್ಟೆಗೆ ಹೊಸ ಲ್ಯಾಪ್‌ಟಾಪ್ ಅನ್ನು ಅನಾವರಣ ಮಾಡಿದ್ದು, ಈ ಲ್ಯಾಪ್ ಟಾಪ್ ಗೆ ಲೆನೋವೋ ಐಡಿಯಾಪ್ಯಾಡ್ 1 (Lenovo Ideapad 1 Laptop) ಎಂದು ಹೆಸರಿಡಲಾಗಿದೆ.
ಲೆನೋವೋ ಐಡಿಯಾಪ್ಯಾಡ್ 1 ಲ್ಯಾಪ್‌ಟಾಪ್ 15 ಇಂಚಿನ ಫುಲ್ ಹೆಚ್‌ಡಿ ಆಂಟಿ-ಗ್ಲೇರ್ ಡಿಸ್‌ಪ್ಲೇಯನ್ನು ಹೊಂದಿದ್ದು, ಈ ಡಿಸ್‌ಪ್ಲೇ 220 ನಿಟ್ಸ್ ಬ್ರೈಟ್‌ನೆಸ್ ಅನ್ನು ಒಳಗೊಂಡಿದೆ. ಜೊತೆಗೆ ಈ ಲ್ಯಾಪ್ ಟಾಪ್ ಡಾಲ್ಬಿ ಆಡಿಯೊ ಬೆಂಬಲಿಸುವ ಸ್ಟೀರಿಯೋ ಸ್ಪೀಕರ್‌ಗಳನ್ನು ಪಡೆದಿದೆ. ಲೆನೋವೋ ಐಡಿಯಾಪ್ಯಾಡ್ 1 ಲ್ಯಾಪ್‌ಟಾಪ್ AMD Ryzen 3 7320U ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, AMD Radeon 610M ಗ್ರಾಫಿಕ್ಸ್ ಕಾರ್ಡ್ ಅನ್ನು ಒಳಗೊಂಡಿದ್ದು, ಈ ಲ್ಯಾಪ್ ಟಾಪ್ ಉತ್ತಮ ಗೇಮಿಂಗ್ ಅನುಭವ ಮತ್ತು ವೀಡಿಯೋ ವೀಕ್ಷಣೆ ಗುಣಮಟ್ಟ ಉತ್ತಮವಾಗಿದೆ.
ಅಲ್ಲದೇ, ಈ ಲ್ಯಾಪ್ ಟಾಪ್ ನಲ್ಲಿ ಮಲ್ಟಿಟಾಸ್ಕ್ ಸೌಲಭ್ಯವಿದೆ. ಆನ್ಲೈನ್ ಕ್ಲಾಸ್, ವಿಡಿಯೋ ಕಾಲ್, ಚಾಟ್, ಹೀಗೆ ಹಲವು ಅವಕಾಶ ದೊರೆಯಲಿದೆ. ಜೊತೆಗೆ ಆನ್‌ಲೈನ್ ಪ್ರೋಗ್ರಾಂಗಳನ್ನು ಸ್ಟ್ರೀಮ್ ಮಾಡುವುದಕ್ಕೆ ಅವಕಾಶ ಮಾಡಿಕೊಡಲಿದೆ. ಹಾಗಾಗಿ ಲೆನೋವೋ ಐಡಿಯಾಪ್ಯಾಡ್ 1 ಅತ್ಯುತ್ತಮ ಗುಣಮಟ್ಟದ ಕಾರ್ಯಕ್ಷಮತೆಯನ್ನು ಹೊಂದಿರುವ ಡಿವೈಸ್ ಆಗಿದೆ ಎಂದು ಲೆನೋವೋ ಇಂಡಿಯಾದ ಡೈರೆಕ್ಟರ್ ಆಪ್ ಕನ್ಸೂಮರ್ ಬಿಸಿನೆಸ್ ದಿನೇಶ್ ನಾಯರ್ ಹೇಳಿದ್ದಾರೆ.
ಫೀಚರ್ಸ್ :
ಈ ಲ್ಯಾಪ್‌ಟಾಪ್ 720p ಹೆಚ್‌ಡಿ ಇನ್‌ಬಿಲ್ಟ್ ಕ್ಯಾಮೆರಾವನ್ನು ಹೊಂದಿದ್ದು, ಇದು ಪ್ರೈವೆಸಿ ಶಟರ್ ಅನ್ನು ಪಡೆದಿದೆ. ಇದರಿಂದ ಹ್ಯಾಕ್ ಅಥವಾ ಇನ್ನಾವುದೇ ತೊಂದರೆಗಳು ವಂಚಕರಿಂದ ಆಗುವ ಸಂದರ್ಭ ಬಂದಾಗ ಲ್ಯಾಪ್ ಟಾಪ್ ರಕ್ಷಿಸಲ್ಪಡುತ್ತದೆ. ಇದರಲ್ಲಿರುವ ಝೆನ್ 2 ಕೋರ್ ಆರ್ಕಿಟೆಕ್ಚರ್ ಮತ್ತು AMD RDNA 2 ಗ್ರಾಫಿಕ್ಸ್ ಮಲ್ಟಿ ಪಂಕ್ಷನ್ ಅನ್ನು ಸುಲಭಗೊಳಿಸಲಿದೆ. ಈ ಲ್ಯಾಪ್‌ಟಾಪ್ ಲಾಂಗ್ ಬ್ಯಾಟರಿ ಅವಧಿ ಹೊಂದಿದೆ. ಹಾಗೇ 14 ಗಂಟೆಗಳ ಬ್ಯಾಟರಿ ಅವಧಿಯೂ ಇರಲಿದೆ ಎಂದು ಕಂಪನಿ ತಿಳಿಸಿದೆ.
ಬೆಲೆ ಮತ್ತು ಲಭ್ಯತೆ :
ಲೆನೋವೋ ಐಡಿಯಾಪ್ಯಾಡ್ ಲ್ಯಾಪ್ ಟಾಪ್ 1 ಭಾರತದಲ್ಲಿ ಗ್ರಾಹಕರಿಗೆ ಸುಮಾರು 44,690 ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಾಗುತ್ತದೆ. ಈ ಲ್ಯಾಪ್ ಟಾಪ್ ಅನ್ನು ಇದೇ ಫೆಬ್ರವರಿ 8 ರಿಂದ ಖರೀದಿಸಬಹುದಾಗಿದ್ದು, ಇದು ಕ್ಲೌಡ್ ಗ್ರೇ ಬಣ್ಣದ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗೇ ಇದನ್ನು ಲೆನೋವೋ ಎಕ್ಸ್‌ಕ್ಲೂಸಿವ್ ಸ್ಟೋರ್‌ಗಳು, ಲೆನೋವೋ ಡಾಟ್ ಕಾಮ್, ಅಮೆಜಾನ್ ಮತ್ತು ದೊಡ್ಡ ಚಿಲ್ಲರೆ ಅಂಗಡಿಗಳಲ್ಲಿ ಖರೀದಿ ಮಾಡಬಹುದು ಎಮದು ಲೆನೋವೋ ಕಂಪೆನಿ ಹೇಳಿಕೊಂಡಿದೆ. ಅತ್ಯುತ್ತಮ ಫೀಚರ್ ಹೊಂದಿರುವ ಉತ್ತಮ ಲ್ಯಾಪ್ ಟಾಪ್ ಆಗಿದ್ದು, ಲ್ಯಾಪ್ ಟಾಪ್ ಖರೀದಿಸುವವರಿಗೆ ಉತ್ತಮ ಅವಕಾಶವಾಗಿದೆ.