ನಡುರಸ್ತೆಯಲ್ಲಿ ಯುವಕನೋರ್ವನ ಮಾರಕಾಸ್ತ್ರ ಪ್ರದರ್ಶನ | ಪೊಲೀಸರ ಮಾತು ಕೇಳದವನಿಗೆ ಆಯಿತು ತಕ್ಕ ಶಾಸ್ತಿ!
ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದೀಗ, ಜನರ ಎದುರಲ್ಲೇ ಮಾರಕಾಸ್ತ್ರ ದಿಂದ ಝಳಪಿಸಿದ ಘಟನೆ ನಡೆದಿದ್ದು, ಈ ಹಿನ್ನೆಲೆ ಖಾಕಿ ಪಡೆ ಅವನ ಹುಟ್ಟಡಗಿಸಿದ ಘಟನೆ ವರದಿಯಾಗಿದೆ.
ಕಲಬುರಗಿಯ ಸೂಪರ್ ಮಾರುಕಟ್ಟೆ ಪ್ರದೇಶದಲ್ಲಿ ಪ್ಯಾಂಟ್-ಬನಿಯನ್ ತೊಟ್ಟು ಸುಮಾರು ಒಂದು ಗಂಟೆಗಳ ಕಾಲ ಮಾರಕಸ್ತ್ರ ಹಿಡಿದು ಜನರನ್ನು ಭಯ ಹುಟ್ಟಿಸುವ ಪ್ರಯತ್ನ ನಡೆಸಿದ್ದು ಸದ್ಯ ಆತನ ಹುಟ್ಟಡಗಿಸಲು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ, ಪೊಲೀಸರು ಆತನಿಗೆ ಶರಣಾಗುವಂತೆ ಸೂಚಿಸಿದರೂ ಕೂಡ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದ ಎನ್ನಲಾಗಿದೆ. ಆದರೂ ಕೂಡ ಪೊಲೀಸರು ಬುದ್ಧಿವಾದ ಹೇಳಿದರು ಸಹ ಪೊಲೀಸರ ವಿರುದ್ಧವೇ ತನ್ನ ಮಾರಕಾಸ್ತ್ರವನ್ನು ಝಳಪಿಸಿದ್ದಾನೆ ಎನ್ನಲಾಗಿದೆ. ಹೀಗಾಗಿ, ಪೊಲೀಸರು ಅನ್ಯ ಮಾರ್ಗ ಕಾಣದೇ ಅವನತ್ತ ಗುಂಡು ಹಾರಿಸಿದ್ದಲ್ಲದೆ, ಕಾಲಿಗೆ ಗುಂಡು ಹೊಡೆದಿದ್ದಾರೆ ಎನ್ನಲಾಗಿದೆ.
ಆರೋಪಿ ಅಬ್ದುಲ್ ಜಾಫರ್ ಎಂದು ಗುರುತಿಸಲಾಗಿದ್ದು, ಪೊಲೀಸರ ಮೇಲೆ ದಾಳಿ ಮಾಡುವ ಸಾಧ್ಯತೆ ದಟ್ಟವಾಗಿದ್ದ ಹಿನ್ನೆಲೆ ರಕ್ಷಣೆಯ ಸಲುವಾಗಿ ಪಿಎಸ್ಐ ವಾಹಿದ್ ಕೊತ್ವಾಲ್ ಅವರು ಆರೋಪಿಯ ಕಾಲಿಗೆ ಮೂರು ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗೆ ನೆಲಕ್ಕೆ ಬಿದ್ದವನ ಮೇಲೆ ಪೊಲೀಸರು ಲಾಠಿ ಬೀಸಿ ಆರೋಪಿಯ ಬೆಂಡೆತ್ತಿದ್ದಾರೆ ಎನ್ನಲಾಗಿದೆ. ಸದ್ಯ ಆರೋಪಿಗೆ ಚಿಕಿತ್ಸೆ ನೀಡಲಾಗಿದ್ದು, ಆದರೆ ಆರೋಪಿಯ ನಡೆಗೆ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.